ಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲ

Recommended Video

      ಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲ..! | Oneindia Kannada

      ಬೆಂಗಳೂರು, ಜನವರಿ 5: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಕಾಶ್ ರಾಜ್ ಅವರಿಗೆ ಆಮ್‌ಆದ್ಮಿ ಪಕ್ಷ ಬೆಂಬಲ ಸೂಚಿಸಿದೆ. ಜೈನ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಬೆಂಗಳೂರು ಆಮ್‌ಆದ್ಮಿ ಪಕ್ಷದ ನಾಯಕರು ಪ್ರಕಾಶ್‌ ರಾಜ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

      ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಕಾಶ್, ಉತ್ತರಿಸಲು ಕಾಲ ಮುಗಿಯಿತು ಇದೀಗ ಲೋಕಸಭೆಯಲ್ಲಿ ಪ್ರಶ್ನಿಸುವ ಕಾಲ ಸನ್ನಿಹಿತವಾಗುತ್ತಿದೆ. ನಾನು ಈಗಾಗಲೇ ಘೋಷಿಸಿರುವಂತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಆಮ್‌ಆದ್ಮಿ ಪಕ್ಷದ ಬೆಂಬಲ ದೊರೆತಿರುವುದು ಸಂತಸದ ವಿಚಾರ ಎಂದು ಹೇಳಿದರು.

      ಬೇರೆ ಪಕ್ಷಗಳು 70 ವರ್ಷಗಳಿಂದ ಮಾಡದೆ ಇರುವ ಕೆಲಸವನ್ನು ಆಮ್‌ಆದ್ಮಿ ಪಕ್ಷ ದೆಹಲಿಯಲ್ಲಿ ಮಾಡಿ ತೋರಿಸಿದೆ. ನಾಗರಿಕರು ಮನಸ್ಸು ಮಾಡಿದರೆ ಪ್ರಪಂಚವನ್ನೇ ಬದಲಾಯಿಸಬಹುದು ಎನ್ನುವುದಕ್ಕೆ ಆಮ್‌ ಆದ್ಮಿ ಪಕ್ಷ ನಿದರ್ಶನವಾಗಿದೆ.

      ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, ಪ್ರಕಾಶ್ ರಾಜ್ ಅವರಿಗೆ ನಮ್ಮ ಬೆಂಬಲವಿದೆ, ಅವರು ಎಂದಿಗೂ ಸತ್ಯದ ಪರವಾಗಿ ಹಾಗೂ ಅನ್ಯಾಯ ವಿರುದ್ಧವಾಗಿ ಧ್ವನಿಯೆತ್ತಿದವರು. ಅವರ ಪರವಾಗಿ ಪ್ರಚಾರವನ್ನೂ ಕೂಡ ಮಾಡುತ್ತೇವೆ. ಹಾಗೆಯೇ 2020ರ ಬಿಬಿಎಂಪಿ ಚುನಾವಣೆಯಲ್ಲಿ ಕೂಡ ಆಮ್‌ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

      ಪಕ್ಷದ ವಕ್ತಾರ ಪೃಥ್ವಿರೆಡ್ಡಿ, ಶಾಂತಲಾ ದಾಮ್ಲೆ, ಬೆಂಗಳೂರು ಅದ್ಯಕ್ಷ ಮೋಹನ್ ದಾಸರಿ ಉಪಸ್ಥಿತರಿದ್ದರು.

      Array

      ಆಮ್‌ಆದ್ಮಿ ಪಕ್ಷಕ್ಕೆ ಧನ್ಯವಾದ ತಿಳಿಸಿದ ಪ್ರಕಾಶ್ ರಾಜ್

      ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಬಲ ನೀಡಿದ ಆಮ್‌ಆದ್ಮಿ ಪಕ್ಷಕ್ಕೆ ಪ್ರಕಾಶ್ ರಾಜ್ ಅವರು ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

      ಪ್ರಕಾಶ್ ರಾಜ್ ಲೋಕಸಭೆಯಲ್ಲಿ ಕಣಕ್ಕಿಳಿಯುವುದು ಖಚಿತ

      ಪ್ರಕಾಶ್ ರಾಜ್ ಲೋಕಸಭೆಯಲ್ಲಿ ಕಣಕ್ಕಿಳಿಯುವುದು ಖಚಿತ

      ಬಹುಭಾಷಾ ನಟ ಪ್ರಕಾಶ್ ರಾಜ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಹಾಗೆಂದು ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಹೊಸ ವರ್ಷಕ್ಕೆ ಶುಭಾಶಯ ಕೋರಿರುವ ಅವರು ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರ ಯಾವುದು ಎಂಬುದನ್ನು ಸದ್ಯದಲ್ಲೇ ತಿಳಿಸುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

      ಲೋಕಸಭೆಯಲ್ಲಿ ಸ್ಪರ್ಧಿಸುತ್ತಿರುವುದು ಏಕೆ?

      ಲೋಕಸಭೆಯಲ್ಲಿ ಸ್ಪರ್ಧಿಸುತ್ತಿರುವುದು ಏಕೆ?

      ನಿಮ್ಮೆಲ್ಲರ ಬೆಂಬಲದಿಂದ ನಾನು ಈ ವರ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಈ ಬಾರಿ ಜನತಾ ಸರ್ಕಾರ್ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

      ಪ್ರಕಾಶ್‌ ರಾಜ್‌ಗೆ ಟಿಆರ್‌ಎಸ್ ಬೆಂಬಲ

      ಪ್ರಕಾಶ್‌ ರಾಜ್‌ಗೆ ಟಿಆರ್‌ಎಸ್ ಬೆಂಬಲ

      ಬಹುಭಾಷಾ ನಟ ಪ್ರಕಾಶ್ ರಾಜ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ವಿಷಯ ತಿಳಿದಂತೆ ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮ್‌ರಾವ್ ಪ್ರಕಾಶ್ ರಾಜ್ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+