ಸುಮನಹಳ್ಳಿ ಆಯ್ತು ಈಗ ಮತ್ತೊಂದು ಮೇಲ್ಸೇತುವೆಯಲ್ಲಿ ದೊಡ್ಡ ಗುಂಡಿ

ಬೆಂಗಳೂರು, ನವೆಂಬರ್ 4: ಸುಮನಹಳ್ಳಿ ಮೇಲ್ಸೇತುವೆ ಬಳಿಕ, ಮತ್ತೊಂದು ಮೇಲ್ಸೇತುವೆಯಲ್ಲಿ ದೊಡ್ಡ ಗುಂಡಿ ಇರುವುದು ಕಂಡುಬಂದಿದೆ.

ಗೊರಗುಂಟೆ ಪಾಳ್ಯ ಮೇಲ್ಸೇತುವೆಯಲ್ಲೂ ಅಂಥದ್ದೇ ದೊಡ್ಡ ಗುಂಡಿ ನಿರ್ಮಾಣವಾಗಿರುವ ಬಗ್ಗೆ ವಾಹನ ಸವಾರರು ಬಿಬಿಎಂಪಿಗೆ ದೂರು ನೀಡಿದ್ದಾರೆ.

ಸುಮನಹಳ್ಳಿ ಮೇಲ್ಸೇತುವೆ ರಸ್ತೆ ಮಧ್ಯದಲ್ಲೇ ಕಬ್ಬಿಣದ ಸರಳುಗಳು ಕಾಣುವಷ್ಟು ದೊಡ್ಡ ಗುಂಡಿ ನಿರ್ಮಾಣವಾಗಿತ್ತು. ಬಳಿಕ ಹೌದು ಕಳಪೆ ಕಾಮಗಾರಿಯಿಂದಲೇ ಹೀಗಾಗಿದೆ ಎಂದು ತಪ್ಪೊಪ್ಪಿಕೊಂಡಿರುವ ಅಧಿಕಾರಿಗಳು ಹತ್ತು ದಿನ ಸುಮನಹಳ್ಳಿ ಫ್ಲೈಓವರ್‌ನ್ನು ಬಂದ್ ಮಾಡಿದ್ದರು.

After Sumanahalli Flyover Another Flyover Facing Same Problem

ಇದೀಗ ಗೊರಗುಂಟೆ ಪಾಳ್ಯದ ಮೇಲ್ಸೇತುವೆಯಲ್ಲೂ ಇದೇ ರೀತಿ ಗುಂಡಿಗಳು ಕಾಣಿಸಿಕೊಂಡಿದ್ದು, ಹೀಗೆ ಎಷ್ಟು ಮೇಲ್ಸೇತುವೆಗಳನ್ನು ಮುಚ್ಚುತ್ತಾ ಹೋಗುತ್ತೀರಿ ಎಂದು ವಾಹನ ಸವಾರರು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಮಗಾರಿ ಆರಂಭದಲ್ಲಿಯೇ ಅಚ್ಚುಕಟ್ಟಾಗಿ ಉತ್ತಮ ಸಾಮಗ್ರಿಗಳನ್ನು ಬಳಸಿ ನಿರ್ಮಾಣಮಾಡಬೇಕಿತ್ತು. ಆ ರೀತಿ ನೋಡುವುದಾದರೆ ಇನ್ನು ಅದೆಷ್ಟೋ ಫ್ಲೈಓಬರ್‌ಗಳಲ್ಲಿ ಇಂತಹ ಸಮಸ್ಯೆ ಇದೆ.

ಗೊರಗುಂಟೆ ಪಾಳ್ಯ ಮೇಲ್ಸೇತುವೆಯು ಬಿಇಎಲ್ ರಸ್ತೆ ಹಾಗೂ ತುಮಕೂರು ರಸ್ತೆ ಹಾಗೂ ಔಟರ್ ರಿಂಗ್ ರಸ್ತೆಯನ್ನು ಸಂಪರ್ಕಿಸುತ್ತದೆ. ಹಾಗೆಯೇ ಯಶವಂತಪುರ ರೈಲ್ವೆ ಬ್ರಿಡ್ಜ್ ವರೆಗೂ ಮೇಲ್ಸೇತುವೆ ಇದೆ.

ಸುಮನಹಳ್ಳಿ ಮೇಲ್ಸೇತುವೆಯನ್ನು 2010ರಲ್ಲಿ ನಿರ್ಮಿಸಲಾಗಿತ್ತು, 2016ರವರೆಗೆ ಬಿಡಿಎ ನೋಡಿಕೊಳ್ಳುತ್ತಿತ್ತು. 2016ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಅದಾದ ಬಳಿಕ ಬಿಬಿಎಂಪಿಯು ಹೆಚ್ಚಿನ ನಿಗಾ ವಹಿಸಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+