ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

Recommended Video

      ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ..! | Oneindia Kannada

      ಬೆಂಗಳೂರು, ಡಿಸೆಂಬರ್ 13: ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದ ಎಂಜಿ ರಸ್ತೆಯ ಟ್ರಿನಿಟಿ ವೃತ್ತ ಬಳಿ ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಎಲ್ಲರಲ್ಲಿ ಆತಂಕ ಸೃಷ್ಟಿಸಿತ್ತು.

      ರಾತ್ರಿಯಿಂದ ಬೆಳಗ್ಗೆಯವರೆಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ಸಂಪೂರ್ಣವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತಿನಿತ್ಯ 5 ಗಂಟೆಗೆ ಆರಂಭವಾಗುತ್ತಿದ್ದ ನಮ್ಮ ಮೆಟ್ರೋ ಗುರುವಾರ ಬೆಳಗ್ಗೆ 7ಗಂಟೆಗೆ ಕಾರ್ಯಾರಂಭ ಮಾಡಿತು.

      ಈ ಮಾರ್ಗದಲ್ಲಿ ಪ್ರತಿ 6 ನಿಮಿಷಕ್ಕೊಮ್ಮೆ ಮೆಟ್ರೋ ಸಂಚರಿಸುತ್ತಿತ್ತು ಬಳಿಕ ಇದೀಗ ಪ್ರತಿ 12 ನಿಮಿಷಗಳಿಗೊಮ್ಮೆ ಮೆಟ್ರೋ ಸಂಚರಿಸುತ್ತಿದೆ. ಮೆಟ್ರೋ ಪಿಲ್ಲರ್ ಬಾಗಿದೆ ಎನ್ನುವ ವದಂತಿ ಹರಡುತ್ತಿದ್ದು ಇದ್ಯಾವುದಕ್ಕೂ ಸಾರ್ವಜನಿಕರು ಭಯ ಪಡಬೇಕಾಗಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

      ಒಂದು ವಾರಗಳ ಕಾಲ ಪ್ರತಿ 12 ನಿಮಿಷಕ್ಕೊಮ್ಮೆ ಆ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ. ಕಾರ್ಯಾಚರಣೆ ವೇಳೆ ಅಧಿಕಾರಿಗಳಿಗೆ ಏನೇನು ಮಾಹಿತಿಗಳು ಲಭ್ಯವಾಗಿದೆ ಎನ್ನುವ ಮಾಹಿತಿ ಇನ್ನೂ ನಮಗೆ ಲಭ್ಯವಾಗಬೇಕಿದೆ.

      ಮೆಟ್ರೋ ಸಂಚಾರ ಸ್ಥಗಿತ ಸಾಧ್ಯತೆ

      ಮೆಟ್ರೋ ಸಂಚಾರ ಸ್ಥಗಿತ ಸಾಧ್ಯತೆ

      ಟ್ರಿನಿಟಿ ವೃತ್ತದ ವಯಾಡಕ್ಟ್‌ನಲ್ಲಿ ಮೂಡಿರುವ ಬಿರುಕು ದುರಸ್ತಿ ಕಾರ್ಯ ಇನ್ನೂ 8ರಿಂದ 10 ದಿನಗಳ ಕಾಲ ನಡೆಯಲಿದೆ. ಕಾಮಗಾರಿಯ ಕೊನೆಯ ಒಂದು ಅಥವಾ ಎರಡು ದಿನ ಟ್ರಿನಿಟಿ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಹೋಗುವ ಒಂದೆರೆಡು ನಿಲ್ದಾಣಗಳಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ರಾತ್ರಿ ಮಾತ್ರವಲ್ಲದೆ ಹಗಲಿನಲ್ಲೂ ಕಾಮಗಾರಿ ಮಾಡಬೇಕಿದೆ. ಕಾಮಗಾರಿ ಕೊನೆಯ ಒಂದು ಅಥವಾ ಎರಡು ದಿನ ರೈಲು ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

      ಮೆಟ್ರೋ ನಿಲ್ದಾಣದಲ್ಲಿ ಸಂಚಾರ ದಟ್ಟಣೆ

      ಮೆಟ್ರೋ ನಿಲ್ದಾಣದಲ್ಲಿ ಸಂಚಾರ ದಟ್ಟಣೆ

      ದುರಸ್ತಿ ಕಾರ್ಯಕ್ಕಾಗಿ ಬಿಎಂಆರ್‌ಸಿಎಲ್ ಟ್ರಿನಿಟಿ ವೃತ್ತದ ಬಳಿ ಬ್ಯಾರಿಕೇಡ್ ಹಾಕಿದ್ದರಿಂದ ಆ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚುವಂತಾಗಿತ್ತು. ಜತೆಗೆ ದುರಸ್ತಿ ಕಾಮಗಾರಿ ವೀಕ್ಷಿಸಲು ವಾಹನ ಸವಾರರು ನಿಧಾನವಾಗಿ ಚಲಿಸುತ್ತಿದ್ದರು.

      ರೈಲಿನ ವೇಗಕ್ಕೆ ಕಡಿವಾಣ

      ರೈಲಿನ ವೇಗಕ್ಕೆ ಕಡಿವಾಣ

      ಪಿಲ್ಲರ್ ವಯಾಡಕ್ಟ್ ಕೊಂಚ ಜರುಗಿದಂತೆ ಕಂಡುಬಂದಿದ್ದು, ಮಂಗಳವಾರ ರಾತ್ರಿಯಿಂದಲೇ ಮೆಟ್ರೋ ಅಧಿಕಾರಿಗಳು ದುರಸ್ತಿ ಕೈಗೊಂಡಿದ್ದಾರೆ. ಆದರೆ ಬುಧವಾರ ಬೆಳಗ್ಗೆ ಯಾವುದೇ ಸೂಚನೆ ನೀಡದೆ ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಪರದಾಡಬೇಕಾಯಿತು.

      ಹನಿಕೊಂಬ್ ಎಂದರೇನು?

      ಹನಿಕೊಂಬ್ ಎಂದರೇನು?

      ಕಳಪೆ ಸಿಮೆಂಟ್ ಬಳಸುವುದು ಅಥವಾ ಕಾಮಗಾರಿ ವೇಳೆ ಕ್ಯೂರಿಂಗ್ ಸಮರ್ಪಕವಾಗಿ ಮಾಡದೆ ಇರುವುದರಿಂದ ಕಾಂಕ್ರೀಟ್‌ನಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಬಳಿಕ ಮರಳು ಹಾಗೂ ಸಿಮೆಂಟ್ ಉದುರಿಹೋಗಿ ಒಳಗಿನ ಜಲ್ಲಿ ಎದ್ದು ಕಾಣುತ್ತದೆ. ಇದು ಜೇನುಹುಳುಗಳು ಜೇನುಗೂಡನ್ನು ಬಿಟ್ಟುಹೋದಾಗ ಕಾಣುವಂತಿರುತ್ತದೆ.

      ಪ್ರತಿ 12 ನಿಮಿಕ್ಕೊಂದು ಮೆಟ್ರೋ

      ಪ್ರತಿ 12 ನಿಮಿಕ್ಕೊಂದು ಮೆಟ್ರೋ

      ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದಲ್ಲಿ ಪ್ರತಿ 6 ನಿಮಿಷಗಳ ಬದಲಾಗಿ ಪ್ರತಿ 12 ನಿಮಿಕ್ಕೊಂದು ಮೆಟ್ರೋ ಸಂಚರಿಸುತ್ತದೆ. ಗುರುವಾರ ಬೆಳಗ್ಗೆ 5 ಗಂಟೆಯ ಬದಲು ಬೆಳಗ್ಗೆ 7ಗಂಟೆಗೆ ಮೆಟ್ರೋ ಆರಂಭಗೊಂಡಿತು. 20 ಕಿ,ಮೀ ವೇಗದಲ್ಲಿ ನಿಧಾನಗತಿಯಲ್ಲಿ ಮೆಟ್ರೋ ಸಂಚರಿಸುತ್ತಿರುವುದರಿಂದ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+