ಬೆಂಗಳೂರಲ್ಲೇ ಮುಂದಿನ ಏರ್ ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧಾರ
ಬೆಂಗಳೂರು, ಏಪ್ರಿಲ್ 30:ಬೆಂಗಳೂರಲ್ಲೇ ಮುಂದಿನ ಏರ್‌ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಳ್ಳುವ ಹಾಗೂ ದೇಶ-ವಿದೇಶಗಳ ಗಮನಸೆಳೆಯುವ ಏರ್‌ಶೋ 2021ರಲ್ಲಿ ನಡೆಯಲಿದ್ದು ಬೆಂಗಳೂರಿನಲ್ಲೇ ನಡೆಸಲು ರಕ್ಷಣಾ ಇಲಾಖೆ ಸನ್ನದ್ಧವಾಗಿದೆ.
ಕಳೆದ ವರ್ಷ ಲಕ್ನೋಗೆ ಏರ್‌ಶೋ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು. ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಅಂತಿಮ ತೀರ್ಮಾನದ ಮೇಲೆ ಕೊರೊನಾ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೊರೊನಾ ಕಾರಣದಿಂದ ಒಲಿಂಪಿಕ್ಸ್ ವಿಶ್ವ ಕಪ್ ಪಂದ್ಯಗಳನ್ನೇ ಮುಂದೂಡಲಾಗಿದೆ. ಹೀಗಾಗಿ ಕೊರೊನಾ ಪರಿಸ್ಥಿತಿ ನೋಡಿಕೊಂಡು ಮತ್ತೊಮ್ಮೆ ದಿನಾಂಕಗಳನ್ನು ಪರಿಶೀಲಿಸಲಾಗುತ್ತದೆ.
ಫೆ.3ರಿಂದ 7ರವರೆಗೆ ಯಲಹಂಕ ವಾಯನೆಲೆಯಲ್ಲಿ 13ನೇ ಆವೃತ್ತಿಯ ಏರ್ ಶೋ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಅಧೀನದಲ್ಲಿರುವ ರಕ್ಷಣಾ ಉತ್ಪಾದನಾ ಇಲಾಖೆ ಬುಧವಾರ ಏರೋ ಇಂಡಿಯಾ ವೆಬ್‌ಸೈಟ್‌ನಲ್ಲಿ ಒಂದು ಸಾಲಿನ ಪ್ರಕಟಣೆ ಹೊರಡಿಸಿದೆ.
ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರ ಮಾಡುವಂತೆ ಯೋಗಿ ಆದಿತ್ಯನಾಥ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಭಕ್ಷಿತಾ ತಲಾಬ್ ವಾಯುನೆಲೆಯಲ್ಲಿ ಏರ್ ಶೋ ನಡೆಸುವಂತೆ ಮನವಿಯಲ್ಲಿ ಅವರು ತಿಳಿಸಿದ್ದರು.












Click it and Unblock the Notifications