'ಏರೋ ಇಂಡಿಯಾ' ಪ್ರದರ್ಶನದಲ್ಲಿ 'ಮೇಕ್ ಇನ್ ಇಂಡಿಯಾ'

ಬೆಂಗಳೂರು, ಫೆ.4: ದೇಶದ ಅತಿದೊಡ್ಡ ಪ್ರದರ್ಶನ ಏರೋ ಇಂಡಿಯಾ ಮತ್ತೆ ಬಂದಿದೆ. ಏಷ್ಯಾದ ಪ್ರತಿಷ್ಠಿತ ಏರೋ ಶೋಗಾಗಿ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ಸಜ್ಜಾಗುತ್ತಿದೆ. ವಿಮಾನಯಾನ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳ ಜೊತೆಗೆ ಈ ಬಾರಿ ಮೇಕ್ ಇನ್ ಇಂಡಿಯಾ ಥೀಮ್ ಎಲ್ಲರನ್ನು ಆಕರ್ಷಿಸಲಿದೆ.

ಈಗಾಗಲೇ ದೇಶ ವಿದೇಶಗಳಿಂದ ತಜ್ಞರ ನಿಯೋಗ ಯಲಹಂಕ ವಾಯು ನೆಲೆಗೆ ಆಗಮಿಸಿದ್ದು, ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ತಯಾರಿ ನಡೆಸಿದ್ದಾರೆ. [ಹೆಲಿಕಾಪ್ಟರ್ ಹಗರಣ ಫಿಕ್ಸಾಗಿದ್ದು ಏರೋ ಇಂಡಿಯಾದಲ್ಲಿ!]

ಪ್ರಥಮ ಬಾರಿಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಬಂಡವಾಳ ಹೂಡಲು ವಿಶೇಷವಾಗಿ ಅಮೆರಿಕ, ರಷ್ಯಾ ಹಾಗೂ ಕೆಲವು ಐರೋಪ್ಯ ರಾಷ್ಟ್ರಗಳು ಆಸಕ್ತಿ ವಹಿಸಿದ್ದು, ಮತ್ತೊಮ್ಮೆ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಕೆಲ ನಗರಗಳಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆ ಇದೆ. [ಉಕ್ಕಿನ ಹಕ್ಕಿಗಳ ಕಲರವಕ್ಕೆತಯಾರಿ ಚಿತ್ರಗಳು]

ಫೆ.18ರಿಂದ 22ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ದೇಶ-ವಿದೇಶಗಳ 750ಕ್ಕೂ ಹೆಚ್ಚು ಕಂಪೆನಿಗಳು ಇಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಇದಲ್ಲದೆ 180ಕ್ಕೂ ಹೆಚ್ಚು ರಾಷ್ಟ್ರಗಳ ಸಚಿವರ ನಿಯೋಗ, ರಕ್ಷಣಾ ಸಚಿವಾಲಯ ಹಾಗೂ ಕಾರ್ಯದರ್ಶಿ ಮಟ್ಟದ ನಿಯೋಗಗಳು ಆಗಮಿಸುತ್ತಿವೆ.

Aero India 2015, Yelahanka, Bengaluru 18-22 February 2015

ಯುದ್ಧ ವಿಮಾನಗಳೇ ಆಕರ್ಷಣೆ: ಅಮೆರಿಕದ ಬೋಯಿಂಗ್ ಸಂಸ್ಥೆ ಹಾಗೂ ರಷ್ಯಾದ ಕೆಲ ರಕ್ಷಣಾ ಕ್ಷೇತ್ರದ ಕಂಪೆನಿಗಳು ಇನ್ನೂ ಆಧುನಿಕ ತಂತ್ರಜ್ಞಾನದ ವಿಮಾನಗಳನ್ನು ತಂದು ಭಾರತವನ್ನು ಆಕರ್ಷಿಸಲು ನಿರ್ಧರಿಸಿವೆ. ಅಮೆರಿಕದಿಂದ ಎಫ್-18, ಎಫ್-16ಸೇರಿದಂತೆ ಕೆಲವು ಯುದ್ಧ ವಿಮಾನಗಳು ಕೂಡ ಭಾರತದ ವಾಯುಪಡೆ ಬತ್ತಳಿಕೆಗೆ ಸೇರುವ ನಿರೀಕ್ಷೆ ಹೆಚ್ಚಿದೆ.

ಇದೆಲ್ಲದರ ನಡುವೆ ರೆಡಾರ್, ಪ್ರಯಾಣಿಕರ ವಿಮಾನ ಮತ್ತು ಸಣ್ಣ ವಿಮಾನ, ಲಘು ಹೆಲಿಕಾಪ್ಟರ್ ಸೇರಿದಂತೆ ಹೊಸ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಇದಾಗಿದೆ. [2013: ಏರೋ ಇಂಡಿಯಾ ಅಂತಿಮ ಚಿತ್ರಗಳು]

ಸುಮಾರು 1.50ಲಕ್ಷ ವಾಣಿಜ್ಯ ವ್ಯವಹಾರಿಕ ಪ್ರತಿನಿಧಿಗಳು 3ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಈ ಬಾರಿ ಏರೋ ಇಂಡಿಯಾ ಪ್ರದರ್ಶನವನ್ನು ವೀಕ್ಷಿಸುವ ಸಾಧ್ಯತೆ ಇದೆ. ರಕ್ಷಣಾ ಹಾಗೂ ಬಾಹ್ಯಕಾಶ ಕ್ಷೇತ್ರದಲ್ಲಿ ಸೈಬರ್ ಸೆಕ್ಯೂರಿಟಿ ಕುರಿತಂತೆಯೂ ಕೂಡ ವಿಶೇಷ ಚರ್ಚೆಗಳು ನಡೆಯಲಿವೆ.

ಉಕ್ಕಿನ ಹಕ್ಕಿಗಳ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ನೀಡಲಾಗುತ್ತಿದ್ದ ಸಾರ್ವಜನಿಕ ಪಾಸ್‌ಗಳನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದಲ್ಲದೆ ಈಗಾಗಲೇ ಆನ್‌ಲೈನ್ ಮೂಲಕವೂ ಆಕ್ಸಿಸ್ ಬ್ಯಾಂಕ್‌ನಿಂದ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ.

ಸಾರ್ವಜನಿಕರಿಗೆ ಫೆ .18ರಿಂದ ಫೆ.22ರ ತನಕ ಅವಕಾಶ ಲಭ್ಯವಿದ್ದು ಟಿಕೆಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+