ವೈಮಾನಿಕ ಜಾತ್ರೆ ಏರೋ ಇಂಡಿಯಾ ಅಂತಿಮ ಚಿತ್ರಗಳು
ಬೆಂಗಳೂರು, ಫೆ.10: ಐದು ದಿನಗಳ ಕಾಲ ಬೆಂಗಳೂರಿನ ಬಾನಂಗಳದಲ್ಲಿ ಸದ್ದು ಮೂಡಿಸುತ್ತಾ ಚಿತ್ತಾರ ಬರೆದ ವೈಮಾನಿಕ ಜಾತ್ರೆಗೆ ಭಾನುವಾರ(ಫೆ.10) ಕೊನೆ ದಿನ. ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2013ಕ್ಕೆ ಮುಕ್ತಾಯ ಹಾಡಲು ಜಾತ್ರೆಗೆ ಬಂದಿದ್ದ ಯಾರಿಗೂ ಮನಸ್ಸಿರಲಿಲ್ಲ.
ರಜಾದಿನವಾದ್ದರಿಂದ ಶನಿವಾರ, ಭಾನುವಾರ ಸಾವಿರಾರು ಮಂದಿ ಯಲಹಂಕ ವಾಯುನೆಲೆಗೆ ಭೇಟಿ ನೀಡಿ ಉಕ್ಕಿನ ಹಕ್ಕಿಗಳ ಕೊನೆಯ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಮಕ್ಕಳು, ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದು, ಕ್ಷಣ ಕ್ಷಣದ ರೋಮಾಂಚಕ ಮೈನವಿರೇಳಿಸುವ ಸಮರ ಹಕ್ಕಿಗಳ ಆರ್ಭಟವನ್ನು ನೋಡಿ ಚಪ್ಪಾಳೆ ತಟ್ಟಿ ಖುಷಿ ಪಟ್ಟರು.
ಐದು ದಿನಗಳ ಪ್ರದರ್ಶನದಲ್ಲಿ ಸಾಕಷ್ಟು ವ್ಯಾಪಾರ-ವಹಿವಾಟು ನಡೆದು ಸ್ಥಳೀಯ ಜನತೆಗೂ ಕೂಡ ಖುಷಿ ಕೊಟ್ಟಿದೆ ಎಂದು ಆಯೋಜಕರಾದ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ವಿದೇಶಿ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದವು. ಇದರ ನಡುವೆ ಮೊದಲ ಬಾರಿಗೆ ರಷ್ಯನ್ ನೈಟ್ಸ್ ಸಾಹಸಿ ಏರೋಬಿಟಿಕ್ ತಂಡ ಹಾಗೂ ರೆಡ್‌ಬುಲ್ಸ್ ಜನರಿಗೆ ರಸದೌತಣ ನೀಡಿದೆ ಎಂದು ಹೇಳಿದರು.
ಇದರ ನಡುವೆ ಸಮರ ವಿಮಾನಗಳು ಸಹ ತಮ್ಮ ಸಾಮರ್ಥ್ಯ ಪ್ರದರ್ಶಿಸುವುದರ ಜತೆಗೆ ಹೆಲಿಕಾಪ್ಟರ್‌ಗಳು ಹಾಗೂ ಸಣ್ಣ ವಿಮಾನಗಳು ಉದ್ಯಮಿಗಳಿಗೆ ಆಕರ್ಷಿಸಿದೆ. 2013ರ ವೈಮಾನಿಕ ಪ್ರದರ್ಶನ ಯಶಸ್ವಿಯಾಗಿದ್ದು, ಇದಕ್ಕಾಗಿ ಫಿಕಿ ಹಾಗೂ ರಕ್ಷಣಾ ಇಲಾಖೆ ಎಲ್ಲ ಪ್ರದರ್ಶಕರಿಗೂ, ನಾಗರಿಕರಿಗೂ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದಾರೆ.
ಆರು ಗಂಟೆಗೆ ಬಂದ್: ಯಶಸ್ವಿ ಪ್ರದರ್ಶನದ ನಂತರ ಯಲಹಂಕ ವಾಯುನೆಲೆ ಇಂದು ಆರು ಗಂಟೆಗೆ ಬಂದ್ ಆಗಲಿದೆ. ಇನ್ನು ಎರಡು ದಿನ ಪ್ರದರ್ಶನಕ್ಕಿಟ್ಟಿದ್ದ ವಸ್ತುಗಳ ಪ್ಯಾಕಿಂಗ್ ಕಾರ್ಯ ನಡೆಯಲಿದ್ದು, ಇಲ್ಲಿಗೆ ಬಂದಿಳಿದಿರುವ ವಿಮಾನಗಳು ಫೆ.12ರಂದು ತಮ್ಮ ಸ್ವದೇಶಕ್ಕೆ ಮರಳುವ ಕಾರ್ಯ ಆರಂಭಗೊಳ್ಳಲಿದೆ. ಫೆ.15ರೊಳಗೆ ಪ್ರದರ್ಶನದ ಎಲ್ಲ ಪ್ರಕ್ರಿಯೆಗಳೂ ಮುಗಿದು ಯಲಹಂಕ ವಾಯುನೆಲೆ ಮತ್ತೆ ತನ್ನ ನೈಜ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

ಏರೋ ಇಂಡಿಯಾ ಅಂತಿಮ ಕಸರತ್ತು
Light Combat Aircraft "Tejas" performs on the Aero India 2013 at Yelahanka Air base

ಏರೋ ಇಂಡಿಯಾ ಅಂತಿಮ ಕಸರತ್ತು
Light Combat Aircraft "Tejas"

ಏರೋ ಇಂಡಿಯಾ ಅಂತಿಮ ಕಸರತ್ತು
Air Chief Marshal NAK Browne

ಏರೋ ಇಂಡಿಯಾ ಅಂತಿಮ ಕಸರತ್ತು
Flying Bulls Zlin 50LX single-engine and single-seater aerobatic display team from the Czech Republic perform

ಏರೋ ಇಂಡಿಯಾ ಅಂತಿಮ ಕಸರತ್ತು
French aircraft Dassault Rafale soars in the sky during the inauguration of the Aero India 2013

ಏರೋ ಇಂಡಿಯಾ ಅಂತಿಮ ಕಸರತ್ತು
AESA Radar designed by DRDO on Brazilian Embraer

ಏರೋ ಇಂಡಿಯಾ ಅಂತಿಮ ಕಸರತ್ತು
Minister of State for Defence Jitendra Singh inside the cockpit of s C-17 Globemaster aircraft

ಏರೋ ಇಂಡಿಯಾ ಅಂತಿಮ ಕಸರತ್ತು
Visitors having a look of a model of Rafale aircraft at a stall during the 2nd day of the Aero India 2013

ಏರೋ ಇಂಡಿಯಾ ಅಂತಿಮ ಕಸರತ್ತು
Flying Bulls Zlin 50LX single-engine and single-seater aerobatic display team from the Czech Republic

ಏರೋ ಇಂಡಿಯಾ ಅಂತಿಮ ಕಸರತ್ತು
Russian Aerobatic team "Russian Knights" performs

ಏರೋ ಇಂಡಿಯಾ ಅಂತಿಮ ಕಸರತ್ತು
Flying Bulls Zlin 50LX single-engine and single-seater aerobatic display team from the Czech Republic perform

ಏರೋ ಇಂಡಿಯಾ ಅಂತಿಮ ಕಸರತ್ತು
SU27 planes present a show

ಏರೋ ಇಂಡಿಯಾ ಅಂತಿಮ ಕಸರತ್ತು
Russian Aerobatic team "Russian Knights" performs

ಏರೋ ಇಂಡಿಯಾ ಅಂತಿಮ ಕಸರತ್ತು
Visitors having a look of parked aircrafts

ಏರೋ ಇಂಡಿಯಾ ಅಂತಿಮ ಕಸರತ್ತು
IAF Aerobatic team "Sarang" performs

ಏರೋ ಇಂಡಿಯಾ ಅಂತಿಮ ಕಸರತ್ತು
Russian Aerobatic team "Russian Knights" performs

ಏರೋ ಇಂಡಿಯಾ ಅಂತಿಮ ಕಸರತ್ತು
ಏರೋ ಇಂಡಿಯಾ ಅಂತಿಮ ಕಸರತ್ತು












Click it and Unblock the Notifications