ಲೋಕಸಭಾ ಚುನಾವಣೆಗೆ ಸ್ಪರ್ಧೆ: ಕ್ಷೇತ್ರ ಫೈನಲ್ ಮಾಡಿದ ಪ್ರಕಾಶ್ ರೈ

ಲೋಕಸಭಾ ಚುನಾವಣೆಗೆ ಸ್ಪರ್ಧೆ: ಕ್ಷೇತ್ರ ಫೈನಲ್ ಮಾಡಿದ ಪ್ರಕಾಶ್ ರೈ

ಬೆಂಗಳೂರು, ಜ 5: ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಚಿತ್ರನಟ ಪ್ರಕಾಶ್ ರೈ ಹೇಳಿದ್ದರು, ಆದರೆ ಯಾವ ಕ್ಷೇತ್ರದಿಂದ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಪ್ರಕಾಶ್ ರೈ, ತನ್ನ ನಿಲುವಿನಿಂದ ಹಿಂದಕ್ಕೆ ಸರಿಯದೇ, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. (ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ರೈ ಕಣಕ್ಕೆ)

Actor Prakash Rai finalized from where he is contesting for parliament election

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರೈ, ನನ್ನ ಹೊಸ ಪ್ರಯಾಣಕ್ಕೆ ನೀವು ತೋರುತ್ತಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ. ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಇನ್ನೇನು ಕೆಲವು ದಿನಗಳಲ್ಲಿ ಮಾಧ್ಯಮದವರ ಜೊತೆ ಸವಿಸ್ತಾರವಾಗಿ ಈ ಬಗ್ಗೆ ಮಾತನಾಡಲಿದ್ದೇನೆ, ಜೊತೆಗೆ #ಜಸ್ಟ್ ಆಸ್ಕಿಂಗ್ ಪಾರ್ಲಿಮೆಂಟ್ ನಲ್ಲೂ ಮುಂದುವರಿಯಲಿದೆ ಎಂದಿದ್ದಾರೆ.

Actor Prakash Rai finalized from where he is contesting for parliament election

ಇತ್ತೀಚೆಗೆ ಹಲವು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಪ್ರಕಾಶ್ ರೈ, ಜಸ್ಟ್ ಆಸ್ಕಿಂಗ್ ಎಂಬ ಆನ್ ಲೈನ್ ಅಭಿಯಾನ ಆರಂಭಿಸಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ತಮ್ಮ ಆಪ್ತ ಸ್ನೇಹಿತೆ ಗೌರಿ ಹತ್ಯೆಯ ನಂತರ ಕೊಂಚ ಹೆಚ್ಚೇ ಸಾಮಾಜಿಕ ಬದುಕಿನಲ್ಲಿ ಕಾಣಿಸಿಕೊಂಡ ಪ್ರಕಾಶ್ ರೈ, ಚುನಾವಣೆಗೆ ಸ್ಪರ್ಧಿಸುತ್ತಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+