ಪ್ರಚಾರದ ವೇಳೆ ಅಮಿತ್ ಶಾ ಗೆ ಪೊರಕೆ-ಆಪ್‌ಗೆ ಚಪ್ಪಲಿ ಪ್ರದರ್ಶನ
ಬೆಂಗಳೂರು, ಮೇ 09: ನಗರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರೋಡ್ ಶೋ ನಡೆಸುತ್ತದ್ದ ವೇಳೆ ಎದುರಿಗೆ ಬಂದ ಆಪ್ ಕಾರ್ಯಕರ್ತರು ತಮ್ಮ ಪಕ್ಷದ ಗುರುತು ಪೊರಕೆಯನ್ನು ಪ್ರದರ್ಶಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಅವರಿಗೆ ಚಪ್ಪಲಿ ಪ್ರದರ್ಶಿಸಿದ್ದಾರೆ.
ಆಪ್ ಕಾರ್ಯಕರ್ತೆಯರು ಮಾಮೂಲಿನಂತೆ ತಮ್ಮ ಪಕ್ಷದ ಗುರುತಾದ ಪೊರಕೆಯನ್ನು ಹಿಡಿದು ಪ್ರಚಾರ ಮಾಡುತ್ತಿದ್ದರು ಆಗ ಅದೇ ಸಮಯಕ್ಕೆ ಎದುರಿನಿಂದ ಅಮಿತ್ ಶಾ ರೋಡ್ ಶೊ ಬಂತು, ಬಿಜೆಪಿ ಕಾರ್ಯಕರ್ತರು ಜೋರಾಗಿ ಮೋದಿ, ಮೋದಿ ಎಂದು ಘೋಷಣೆ ಕೂಗಿದರು.
ಇದಕ್ಕೆ ಪ್ರತಿಯಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಆಪ್ ಕಾರ್ಯಕರ್ತರು ತಮ್ಮ ಪಕ್ಷದ ಗುರುತು ಪೊರಕೆಯನ್ನು ಹಿಡಿದುಕೊಂಡು ಆಪ್‌ಪರ ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಚಪ್ಪಲಿಗಳನ್ನು ತೋರಿಸಿದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗುವ ಸಾಧ್ಯತೆ ಇತ್ತು ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಯಾವುದೇ ಅಹಿತಕರ ಘಟನೆ ತಡೆಯದಂತೆ ತಡೆದರು. ಅಲ್ಲದೆ ಅಮಿತ್ ಶಾ ಸ್ವತಃ ಮೈಕ್ ಪಡೆದುಕೊಂಡು ಕಾರ್ಯಕರ್ತರನ್ನು ಬೇಗೆ ಬೇಗ ಮುಂದೆ ಹೋಗುವಂತೆ ಸೂಚನೆ ನೀಡಿದರು.












Click it and Unblock the Notifications