Bengaluru Metro: ನಮ್ಮ ಮೆಟ್ರೋದಲ್ಲಿ ಯುವತಿಯರ ಆ ಫೋಟೋ, ವಿಡಿಯೋ ತೆಗೆದ ಯುವಕನ ಪಾಡು ಏನಾಯ್ತು ಗೊತ್ತಾ?
Namma Metro: ಬೆಂಗಳೂರು ಜೀವನಾಡಿ ಸಾರಿಗೆಯಲ್ಲೊಂದಾದ ನಮ್ಮ ಮೆಟ್ರೋ ಒಂದಲ್ಲ ಒಂದು ವಿಚಾರಕ್ಕೆ ಆಗಾಗ ಸುದ್ದಿಯಲ್ಲಿರುತ್ತದೆ. ಮೆಟ್ರೋದಲ್ಲಿ ಪ್ರಯಾಣಿಕರ ಎದುರೇ ಯುವಕರು, ಯುವಕರು ಅಸಭ್ಯ ವರ್ತನೆ ತೋರಿ ಪಜೀತಿಗೆ ಸಿಲುಕಿರುವ ಉದಾಹರಣೆಗಳಿವೆ. ಇದೀಗ ಯುವಕನೋರ್ವ ಮೆಟ್ರೋ ರೈಲಿನಲ್ಲಿ ಯುವತಿಯರ ಆ ಫೋಟೋ, ವಿಡಿಯೋ ತೆಗೆದು ಸಂಕಷ್ಟಕ್ಕೆ ಸಿಲುಕಿರುವ ಘಟನೆ ನಗರದಲ್ಲಿ ನಡೆದಿದೆ.
ಸಾಮಾನ್ಯವಾಗಿ ನಿಯಮದ ಪ್ರಕಾರ, ಮೆಟ್ರೋ ರೈಲಿನಲ್ಲಿ ಸ್ಮ್ಯಾಕ್ಸ್, ತಿಂಡಿ ಒಟ್ಟಾರೆ ಆಹಾರ ಸೇವನೆಗೆ ಅವಕಾಶ ಇರುವುದಿಲ್ಲ. ಅಲ್ಲದೆ, ಒಪ್ಪಿಗೆ ಇಲ್ಲದೆ, ಯಾರ ಫೋಟೋ, ವಿಡಿಯೋ ಕೂಡ ಕ್ಲಿಕ್ಕಿಸುವಂತಿಲ್ಲ. ಒಂದು ವೇಳೆ ಈ ನಿಯಮ ಮೀರಿದರೆ ಸೂಕ್ತ ಕ್ರಮ ಜರುಗಿಸುವ ಹಕ್ಕು ಬಿಎಂಆರ್‌ಸಿಎಲ್‌ಗೆ ಇದೆ.

ಇದೀಗ ನಮ್ಮ ಮೆಟ್ರೋ ರೈಲಿನಲ್ಲಿಲ್ಲಿ ಯುವತಿಯರ ಫೋಟೋ, ವಿಡಿಯೋ ತೆಗೆಯುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಮಹೇಶ್ ಎಂಬ ಯುವಕನನ್ನು ಜನರೇ ಹಿಡಿದು ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಆ ಯುವಕನಿಗೆ ನಮ್ಮ ಮೆಟ್ರೋ ಅಧಿಕಾರಿಗಳು 5,000 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬರನ್ನು ಹಿಂಬಾಲಿಸಿ ಆಕೆ ಕುಳಿತುಕೊಳ್ಳುವಾಗ ಮಹೇಶ್ ಫೋಟೋ, ವಿಡಿಯೋ ತೆಗೆದಿದ್ದಾನೆ ಎಂದು ವಿಚಾರಣೆ ವೇಳೆ ಬೆಳಕಿದೆ ಬಂದಿದೆ. ಬಳಿಕ ಯುವತಿ ಮಹೇಶ್‌ಗೆ ಕಪಾಳಕ್ಕೆ ಚಟಾರ್ ಅಂತಾ ಒಂದು ಬಿಟ್ಟಿದ್ದು, ಬಳಿಕವೇ ಈ ಘಟನೆ ಬೆಳಕಿಗೆ ಬಂದಿದೆ. ಆಗ ಅಲ್ಲಿದ್ದ ಜನರೇ ಮಹೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಂತರ ಮಹೇಶ್ ಮೊಬೈಲ್ ಪರಿಶೀಲನೆ ನಡೆಸಿದಾಗ ಹಲವು ಯುವತಿಯರ ಫೋಟೋ, ವಿಡಿಯೋ ಇರುವುದು ಕೂಡ ಪತ್ತೆಯಾಗಿದೆ. ಇನ್ನು ನಮ್ಮ ಮೆಟ್ರೋ ಅಧಿಕಾರಿಗಳು ಮಹೇಶ್‌ಗೆ 5,000 ದಂಡ ವಿಧಿಸಿ ಜಯನಗರ ಪೊಲೀಸರ ವಶಕ್ಕೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದು ವಾರದ ಹಿಂದೆ ಅಂದರೆ, ಡಿಸೆಂಬರ್ 25ಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿ ಮೆಜೆಸ್ಟಿಕ್ನಿಂದ ಜೆ.ಪಿ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಹೇಶ್ ಎಂಬ ಕಾಮುಕ ಯುವತಿ ಫೋಟೋ, ವಿಡಿಯೋ ತೆಗೆದಿದ್ದಾನೆ ಎಂದು ತಿಳದುಬಂದಿದೆ.
ಕಿರಿಕಿರಿ ಉಂಟು ಮಾಡಿದ ಮಹಿಳೆ: ಇತ್ತೀಗಷ್ಟೇ ಯುವತಿಯೊಬ್ಬಳು ಮುಂಬೈನಲ್ಲಿ ಚಲಿಸುವ ಲೋಕಲ್ ರೈಲಿನೊಳಗೆ ಜೋರಾಗಿ ಡ್ಯಾನ್ಸ್ ಮಾಡುವ ಮೂಲಕ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಅಲ್ಲದೆ, ಲೋಕಲ್ ಟ್ರೈನ್‌ನೊಳಗೂ ಕೂಡ ಯುವತಿಯೊಬ್ಬಳು ಭೋಜ್‌ಪುರಿ ನೃತ್ಯ ಮಾಡಿದ್ದು, ಈ ವೀಡಿಯೊಗಳು ಸಾಜಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಸದ್ಯ ಈ ವಿಚಾರ ಭಾರೀ ಟ್ರೆಂಡಿಂಗ್‌ನಲ್ಲಿದೆ. ಇನ್ನು ಈ ವಿಡಿಯೋವನ್ನು ಮುಂಬೈ ಮ್ಯಾಟರ್ಸ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಅಲ್ಲದೆ, ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಳು. ಹಾಗೆಯೇ ಇದೀಗ ಮುಂಬೈ ಲೋಕಲ್ಸ್ ಎಕ್ಸ್‌ಪ್ರೆಸ್ ಟ್ರೈನ್‌ನಲ್ಲಿ ಈ ಘಟನೆ ಮತ್ತ ಮರುಕಳಿಸಿತ್ತು. ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ರೈಲಿನಲ್ಲಿ ರೀಲ್ಸ್ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ ಮಹಿಳೆಯ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮುಂಬೈ ಪೊಲೀಸರಿಗೆ ಆಹ್ರಹಿಸಿದ್ದರು.












Click it and Unblock the Notifications