ಲವರ್ ಕೈಕೊಟ್ಟಿದ್ದಕ್ಕೆ ಏಳು ಕಾರು ಗ್ಲಾಸ್ ಪುಡಿ ಮಾಡಿದ ಭಗ್ನ ಪ್ರೇಮಿ!

ಬೆಂಗಳೂರು, ಜು. 16: ತನ್ನ ಪ್ರಿಯತಮೆ ಕೈಕೊಟ್ಟ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ರೋಡಲ್ಲಿ ರಂಪ ಮಾಡಿ ಜೈಲು ಸೇರಿದ್ದಾನೆ. ತನ್ನನ್ನು ಪ್ರೀತಿಸಿದವಳು ಕೈಕೊಟ್ಟಿದ ವಿಷಯ ತಿಳಿದ ಭಗ್ನ ಪ್ರೇಮಿಯೊಬ್ಬ ರಸ್ತೆಯಲ್ಲಿ ನಿಲ್ಲಿಸಿದ್ದ ಏಳು ಕಾರುಗಳ ಗ್ಲಾಸು ಪುಡಿ ಮಾಡಿದ್ದಾನೆ.

ಕುರುಬರಹಳ್ಳಿಯ ನಿವಾಸಿ ಸತೀಶ್ ( 26) ಬಂಧಿತ ಆರೋಪಿ. ಸದ್ಯ ಈತನನ್ನು ಬಂಧಿಸಿರುವ ಬಸವೇಶ್ವರ ನಗರ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪ್ರಕ್ರಿಯೆ ಮಾಡುತ್ತಿದ್ದಾರೆ.

 A Lover boy Arrested who smashed car glasses for Lover in Basaveshwar Nagar

ಯುವತಿಯೊಬ್ಬಳನ್ನು ಸತೀಶ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಸತೀಶನ ಪ್ರೀತಿಯನ್ನು ಒಪ್ಪಿಕೊಳ್ಳದೇ ನಿರಾಕರಿಸಿದ್ದಾಳೆ. ಇದರಿಂದ ಆಕೆಯ ನೆನಪಲ್ಲೇ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಶುಕ್ರವಾರ ಬೆಳಗಿನ ಜಾವ 1.30 ರ ಸುಮಾರಿಗೆ ದೊಣ್ಣೆ ಹಿಡಿದುಕೊಂಡು ಕುರುಬರಹಳ್ಳಿಯಲ್ಲಿ ಐದು ಕಾರುಗಳ ಗ್ಲಾಸು ಪುಡಿ ಮಾಡಿದ್ದಾನೆ. ಸಾಲದ್ದಕ್ಕೆ ಮಹಾಲಕ್ಷ್ಮೀ ಲೇಔಟ್ ಸಮೀಪ ಎರಡು ಕಾರಿಗೆ ಗ್ಲಾಸು ಪುಡಿ ಮಾಡಿದ್ದಾನೆ. ಕಾರು ಗ್ಲಾಸು ಪುಡಿಯಾದ ಹಿನ್ನೆಲೆಯಲ್ಲಿ ಕಾರು ಮಾಲೀಕರು ಬಸವೇಶ್ವರನಗರ ಪೊಲೀಸರು ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

 A Lover boy Arrested who smashed car glasses for Lover in Basaveshwar Nagar

Recommended Video

      IPL ಇತಿಹಾಸದಲ್ಲಿ RCB ತಂಡದ ಬೆಸ್ಟ್ ನಾಯಕ ಯಾರು? | Oneindia Kannada

      ಕುಡಿದ ಅಮಲಿನಲ್ಲಿ ಕಾರುಗಳ ಗ್ಲಾಸು ಹೊಡೆದು ಹಾಕಿದ್ದಾನೆ. ದೂರಿನ ಹಿನ್ನೆಲೆಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಪ್ರಿಯತಮೆಯ ನೆನಪಿನಲ್ಲಿ ಮಾಡಿರುವ ಕೆಲಸ ಕುಡಿದ ಅಮಲು ಇಳಿದ ಮೇಲೆ ಗೊತ್ತಾಗಿದೆ. ಆದರೆ ಪರಿಸ್ಥಿತಿ ಕೈ ಮೀರಿ ಹೊಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+