ಬೆಂಗಳೂರು ಏರ್ಪೋರ್ಟ್ ಸಿಬ್ಬಂದಿ ಮೇಲೆ ಅತ್ಯಾಚಾರ ಆರೋಪ: ಜಾಮೀನಿಗೆ ಅಸಮ್ಮತಿ
ಮಹಿಳೆಯರಿಗೆ ಅಗೌರವ ಸೂಚಿಸುವುದು, ಮೋಸ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು ಅಂಥ ಅಪರಾಧಗಳಿಗೆ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಬೆಂಗಳೂರು, ಮೇ 19: ಮದುವೆಯಾಗುವುದಾಗಿ ಮಾತುಕೊಟ್ಟು ಕಳೆದ ಆರು ತಿಂಗಳಿನಿಂದ ಮಹಿಳೆಯೊಬ್ಬರೊಂದಿಗೆ ಲಿವ್ ಇನ್ ರಿಲೇಶನ್ ಶಿಫ್ ನಲ್ಲಿದ್ದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಸಿಬ್ಬಂದಿಯೊಬ್ಬರು ನಂತರ ಆ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿಸದಂತೆ ಆರೋಪಿಗೆ ಜಾಮೀನು ನೀಡಲು ಕೋರ್ಟ್ ವೊಂದು ನಿರಾಕರಿಸಿದೆ.
ತನ್ನನ್ನು ಮದುವೆಯಾಗುವುದಾಗಿ ಹೇಳಿ ಬೇರೆ ಮದುವೆ ಮಾಡಿಕೊಂಡಿದ್ದಾನೆ, ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದರು.[ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಹೊಂದಿದ್ದ ಬೆಂಗಳೂರಿಗ ಪೊಲೀಸ್ ವಶಕ್ಕೆ]

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವೊಂದರಲ್ಲಿ ಜಾಮೀನಿಗೆ ಅರ್ಜಿಹಾಕಿದ್ದ ಆತನಿಗೆ ಜಾಮೀನು ನೀಡಲು ಕೋರ್ಟು ಅಸಮ್ಮತಿ ಸೂಚಿಸಿದೆ.
ಮಹಿಳೆಯರಿಗೆ ಅಗೌರವ ಸೂಚಿಸುವುದು, ಮೋಸ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು ಅಂಥ ಅಪರಾಧಗಳಿಗೆ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಅದು ಸ್ಪಷ್ಟವಾಗಿ ಹೇಳಿದೆ.












Click it and Unblock the Notifications