ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಹೊಂದಿದ್ದ ಬೆಂಗಳೂರಿಗ ಪೊಲೀಸ್ ವಶಕ್ಕೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 18: ಬೆಂಗಳೂರು ಕೆಂಪೇಗೌಡ ಏರ್ ಪೋರ್ಟ್ ನಿಂದ ಬ್ಯಾಂಕಾಕ್ ಗೆ ತೆರಳುವುದಕ್ಕೆ ಫ್ಲೈಟ್ ಹತ್ತುತ್ತಿದ್ದ ವ್ಯಕ್ತಿಯನ್ನು 1.14 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೂ ಅಚ್ಚರಿಯ ವಿಷಯ ಎಂದರೆ ಈತನನ್ನು ಬಂಧಿಸುವ ಕೆಲವೇ ನಿಮಿಷ ಮೊದಲು ಅದೇ ಫ್ಲೈಟಿಗೆ ಹೊರಟಿದ್ದ ಇನ್ನೊಬ್ಬ ವ್ಯಕ್ತಿಯ ಬಳಿಯೂ 11 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಈ ಘಟನೆ ಸೋಮವಾರ (ಮೇ 15) ರಾತ್ರಿಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.[ಬೆಂಗಳೂರು: ಗಾಂಜಾ ಕೊಟ್ಟಿಲ್ಲವೆಂದು ಬೆರಳು ಕತ್ತರಿಸಿದ ಖದೀಮರು]

Man detains by police in Bengaluru airport in smuggling of foreign currency case

ಕೋಟಿ ರೂ ಮೌಲ್ಯದ ವಿದೇಶಿ ಕರೆನ್ಸಿಯನ್ನು ಹೊಂದಿದ್ದ ವ್ಯಕ್ತಿಯನ್ನು ಬೆಂಗಳೂರಿನ ಜಯನಗರ ನಿವಾಸಿ ಅಬ್ದುಲ್ ರಹೀಮ್ (65) ಎಂಡು ಗುರುತಿಸಲಾಗಿದೆ. ಇವರ ಬಳಿ ವಿದೇಶಿ ಕರೆನ್ಸಿಗಳಾದ ಯುರೋ, ರಿಯಾಲ್ ಮತ್ತು ಡಾಲರ್ ಗಳು ಇದ್ದವು ಎನ್ನಲಾಗಿದೆ. ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man from Jayanagar, Bengaluru smuggling foreign currency worth Rs 1.14 crore was arrested moments before he boarded a flight to Bangkok at Kempegowda International Airport on Monday night.
Please Wait while comments are loading...