ಬೆಂಗಳೂರು: ಗಾಂಜಾ ಕೊಟ್ಟಿಲ್ಲವೆಂದು ಬೆರಳು ಕತ್ತರಿಸಿದ ಖದೀಮರು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 18: ಗಾಂಜಾ ಕೇಳಿದ್ದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡದ ನೇಪಾಳಿ ವ್ಯಕ್ತಿಯ ಬೆರಳನ್ನೇ ಇಬ್ಬರು ಖದೀಮರು ಕತ್ತರಿಸಿದ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಿನ್ನೆ (ಮೇ 17) ನಡೆದಿದೆ.

ಬೈಕಿನಲ್ಲಿ ಬಂದ ಇಬ್ಬರು ಮಾದಕ ವ್ಯಸನಿಗಳು ರಸ್ತೆಯಲ್ಲಿದ್ದ ನೇಪಾಳಿ ಮೂಲದ ಬೆಂಗಳೂರಿನ ಶಿವಾಜಿನಗರದಲ್ಲಿ ವಾಸವಿರುವ ಬಿಮಲ್ ಸಿಂಗ್ ಎಂಬುವವರ ಬಳಿ ಗಾಂಜಾ ಇದೆಯೇ ಎಂದು ಕೇಳಿದ್ದಾರೆ.[ಕೆಂಗೇರಿ ಕಬೋರ್ಡ್ ಮರ್ಡರ್ ಮಿಸ್ಟ್ರಿಗೆ ರೋಚಕ ತಿರುವು]

Two men cut finger of a man in Shivajinagar

ಪ್ರಶ್ನೆಯನ್ನು ಕೇಳಿ ಹೌಹಾರಿದ ಬಿಮಲ್ ಸಿಂಗ್ ಇಲ್ಲ ಎಂದು ಹೇಳಿ ಸುಮ್ಮನಾಗಿದ್ದಾರೆ. ನಂತರ ಗಾಂಜಾ ಎಲ್ಲಿ ಸಿಗುತ್ತದೆ ಗೊತ್ತಾ ಎಂದೂ ಅವರು ಪ್ರಶ್ನಿಸಿದ್ದಾರೆ. ಅದಕ್ಕೆ, ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ ಬಿಮಲ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಅವರ ಬೆರಳನ್ನೇ ತುಂಡರಿಸಿದ್ದಾರೆ!

ಸಂತ್ರಸ್ತರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಯಿತು. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2 men asked for Ganja to a person, and he did not helped him. For that reason two men cut that mans finger and ran. The incident took place in Shivajinagar Bengaluru.
Please Wait while comments are loading...