Blue Line Metro: ಬೆಂಗಳೂರು ಏರ್‌ಪೋರ್ಟ್‌ ಮೆಟ್ರೋ ಮಾರ್ಗದಲ್ಲಿ ಪ್ರಮುಖ ಕಾಮಗಾರಿ ಯಶಸ್ವಿ

ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಿಸುವಲ್ಲಿ ಭವಿಷ್ಯದಲ್ಲಿ ಪ್ರಮುಖ ಪಾತ್ರವಹಿಸುವ ಬೆಂಗಳೂರು ಏರ್‌ಪೊರ್ಟ್ ನೀಲಿ ಮೆಟ್ರೋ ಮಾರ್ಗದ ನಿರ್ಮಾಣ ಕಾಮಗಾರಿ ಬರದಿಂದ ಸಾಗಿದೆ. ಈ ಮಾರ್ಗದಲ್ಲಿ 4ನೇ ಗರ್ಡರ್ ನಿರ್ಮಾಣ ಬುಧವಾರ ಯಶಸ್ವಿಯಾಗಿದೆ.

ಬೆಂಗಳೂರಿನ ಸಿಲ್ಕ್‌ಬೋರ್ಡ್‌ನಿಂದ ಹೊರ ವರ್ತುಲ ರಸ್ತೆ (ORR) ಮಾರ್ಗವಾಗಿ ಕೆ.ಆರ್‌.ಪುರಂ ಮೂಲಕ ಬೆಂಗಳೂರು ದೇವನಹಳ್ಳಿ ಏರ್‌ಪೋರ್ಟ್‌ವರೆಗೆ ಮೆಟ್ರೋ ನೀಲಿ ಮಾರ್ಗ ಎರಡು ಹಂತಗಳಲ್ಲಿ (2A & 2B) ಕಾಮಗಾರಿ ನಡೆಯುತ್ತಿದೆ. ಈ ಮಾರ್ಗದ ರಾಮಮೂರ್ತಿನಗರ ಅಂಡರ್‌ಪಾಸ್‌ನಲ್ಲಿ ನೆನ್ನೆ ಬುಧವಾರ (ಮೇ 20) ರಾತ್ರಿ 65 ಮೀಟರ್ ಸಂಯೋಜಿತ ಗರ್ಡರ್ ಅನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೂಲಗಳು ತಿಳಿಸಿವೆ.

Bengaluru Blue Line Metro

ಪ್ರಸ್ತುತ ಗರ್ಡರ್ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಯೋಜನೆಯ ಹಂತ 2ಬಿ ಪ್ಯಾಕೇಜ್ 1ರ ವ್ಯಾಪ್ತಿಗೆ ಬರುತ್ತದೆ. ಒಟ್ಟು ಈ ಮಾರ್ಗದಲ್ಲಿ 4ನೇ ಸಂಯೋಜಿತ ಗರ್ಡರ್ ತಲೆ ಎತ್ತಿದೆ. ಈ ಮಾರ್ಗದ ಅತೀ ಉದ್ದದ ಗರ್ಡರ್ ಇದಾಗಿದ್ದು, ಇದನ್ನು ಸೂಕ್ತ ಪೂರ್ವಾಲೋಚನೆಗಳೊಂದಿಗೆ ನಿರ್ಮಿಸಲಾಗಿದೆ.

Bengaluru Airport: ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯ 'ಚಾಲೆಂಜರ್ 2026' ನಿರ್ವಹಿಸಿದ 3000 ಸಿಬ್ಬಂದಿ
Bengaluru Airport: ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯ 'ಚಾಲೆಂಜರ್ 2026' ನಿರ್ವಹಿಸಿದ 3000 ಸಿಬ್ಬಂದಿ

ಇತ್ತೀಚೆಗೆ ಇದೇ ಮಾರ್ಗದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯ ಜಂಕ್ಷನ್‌ನಲ್ಲಿ ಗರ್ಡರ್ ಅನ್ನು ಸ್ಥಾಪಿಸಲಾಗಿತ್ತು. ಅದಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ (SNC) ತಂಡಗಳು ಜಂಟಿಯಾಗಿ ಕೆಲಸ ಮಾಡಿದ್ದವು. ಇಂದು ಮತ್ತೊಂದು ಕೊನೆಯ ಹೆಚ್ಚು ಉತದ್ದ ಗರ್ಡರ್ ನಿರ್ಮಿಸುವ ಮೂಲಕ ಒಟ್ಟಾರೆ ನಾಲ್ಕು ಗರ್ಡರ್ ಗಳನ್ನು ಯಶಸ್ವಿಯಾಗಿ ಸ್ಥಾಪಿಸಿದಂತಾಗಿದೆ ಎಂದು ಬಿಎಂಆರ್‌ಸಿಎಲ್ ಹರ್ಷ ವ್ಯಕ್ತಪಡಿಸಿದೆ.

ವರ್ಷಾಂತ್ಯಕ್ಕೆ ಮೊದಲ ಹಂತ ಮೆಟ್ರೋ ಲೈನ್ ಓಪನ್?

ಬೆಂಗಳೂರು ನೀಲಿ ಮಾರ್ಗವು ಒಟ್ಟು 58 ಕಿಲೋ ಮೀಟರ್ ಉದ್ದವಿದೆ. ಎರಡು ಹಂತಗಳ ಪೈಕಿ ಮೊದಲ ಹಂತ (ಸಿಲ್ಕ್‌ ಬೋರ್ಡ್‌-ಕೆ.ಆರ್.ಪುರಂ) ಮಾರ್ಗವು ಇದೇ 2026 ಮಾರ್ಚ್ ಅಂತ್ಯಕ್ಕೆ ತೆರೆಯಲು ಮೊದಲು ಯೋಜಿಸಲಾಗಿತ್ತು. ಕಾಮಗಾರಿ ವಿಳಂಬದಿಂದಾಗಿ ಇದೇ ಡಿಸೆಂಬರ್ ವೇಳೆಗೆ ಲೋಕಾರ್ಪಣೆಗೆ ಬಿಎಂಆರ್‌ಸಿಎಲ್ ಪ್ಲ್ಯಾನ್ ಮಾಡಿಕೊಂಡಿದೆ.

ಓಆರ್‌ಆರ್‌ ರಸ್ತೆಯಲ್ಲಿ ಹೆಚ್ಚಲಿದೆ ಟ್ರಾಫಿಕ್

ಈ ಹಿಂದೆ ಮೆಟ್ರೋ ಕಾಮಗಾರಿಯಿಂದ ಮಹಾದೇವಪುರ, ಮಾರತ್ತಹಳ್ಳಿ, ಎಚ್ ಎಸ್‌ ಆರ್ ಬಡಾವಣೆ ಮಾರ್ಗವಾಗಿ ಓಆರ್‌ಆರ್‌ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕಿರಿ ಕಿರಿ ಅನುಭವಿಸುತ್ತಿದ್ದರು. ಮೆಟ್ರೋ ಕಾಮಗಾರಿ ಪೂರ್ಣಗೊಂಡಂತೆ ಟ್ರಾಫಿಕ್ ಇಳಿಕೆ ಆಗಿತ್ತು. ಶೀಘ್ರವೇ ಈ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲುಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಆ ಕಾಮಗಾರಿ ಶುರುವಾದರೆ ನಿತ್ಯವೂ ಈ ಮಾರ್ಗದ ವಾಹನ ಸವಾರರು ತೊಂದರೆ ಅನುಭವಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+