ಶೇ.90ರಷ್ಟು ಮದುವೆ ಛತ್ರಗಳು ಪರವಾನಿಗೆ ಪಡೆದಿಲ್ಲವಂತೆ!
ಬೆಂಗಳೂರು, ನವೆಂಬರ್, 02 : ನಗರದಲ್ಲಿ ಈಗಾಗಲೇ ತಲೆ ಎತ್ತಿರುವ ಹಲವಾರು ಮದುವೆ ಛತ್ರಗಳು, ಸಮಾರಂಭದ ಹಾಲ್ ಗಳಲ್ಲಿ ಶೇ.90 ರಷ್ಟು ಕಟ್ಟಡಗಳು ಬಿಬಿಎಂಪಿ ವತಿಯಿಂದ ಯಾವುದೇ ಪರವಾನಗಿ ಪಡೆದಿಲ್ಲ ಎಂಬ ಸತ್ಯ ಆರ್ ಟಿಐ (Right to Information) ಕೈಗೊಂಡ ಒಂದು ಅಧ್ಯಯನದಿಂದ ಜಗಜ್ಜಾಹೀರುಗೊಂಡಿದೆ.
ನಗರದಲ್ಲಿ ಸಾವಿರಕ್ಕೂ ಹೆಚ್ಚು ಮದುವೆ ಛತ್ರಗಳು ಮತ್ತು ಪಾರ್ಟಿ ಹಾಲ್ ಗಳು ಇವೆ. ಆದರೆ ಬಿಬಿಎಂಪಿ ದಾಖಲೆಗಳಲ್ಲಿ ಕೇವಲ 350 ಕಟ್ಟಡಗಳ ಹೆಸರನ್ನು ನೊಂದಾವಣೆ ಮಾಡಲಾಗಿದೆ. ಹಾಗಾಗಿ ಅವ್ಯವಹಾರ ನಡೆದಿರುವುದನ್ನು ಗೊತ್ತುಪಡಿಸಿಕೊಂಡ ಆರ್ ಟಿಐ ಅಧ್ಯಯನ ಕೈಗೊಂಡು ಸಂಪೂರ್ಣ ಅಂಕಿ ಅಂಶಗಳನ್ನು ತೆರೆದಿಟ್ಟಿದೆ.[ಆರ್ ಟಿಐ ಎಂದರೇನು? ಹೇಗೆ ಅರ್ಜಿ ಸಲ್ಲಿಸುವುದು?]

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಿದ ಆರ್ ಟಿಐ ಅಧಿಕಾರಿ ರವೀಂದ್ರನಾಥ್, 'ಕಾರ್ಯಪ್ರವೃತ್ತವಾದ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಆದೇಶದ ಮೇರೆಗೆ ಪರವಾನಗಿ ಪಡೆಯದ ಮದುವೆ ಕಟ್ಟಡ ಹಾಗೂ ಸಮಾರಂಭ ಹಾಲ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಲೋಕಾಯುಕ್ತರಲ್ಲಿ ದೂರು ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಸದ್ಯದಲ್ಲೇ ಕ್ರಮ ಜರುಗಿಸಲಾಗಿಸಲಾಗುವುದು' ಎಂದು ತಿಳಿಸಿದರು.[ಬಾಳ ಸಂಗಾತಿ, ಆದಾಯದ ಲೆಕ್ಕ ಕೊಡಬೇಕು ಪಕ್ಕಾ]
ಆರ್ ಟಿಐ ಅಧ್ಯಯನದ ಪ್ರಕಾರ ನಗರದಲ್ಲಿರುವ ಪಾರ್ಟಿ ಹಾಲ್ ಮತ್ತು ಛತ್ರಗಳ ವಿವರ :
* ನಗರದಲ್ಲಿರುವ ಪಾರ್ಟಿ ಹಾಲ್ ಮತ್ತು ಛತ್ರಗಳು : 2,136
* ಮದುವೆ ಛತ್ರಗಳು : 936
* ಪಾರ್ಟಿ ಹಾಲ್ ಗಳು : 1,200
* ಬಿಬಿಎಂಪಿ ದಾಖಲೆಯಲ್ಲಿರುವ ಮದುವೆ ಛತ್ರಗಳ ಸಂಖ್ಯೆ : 350
* ಬೆಂಗಳೂರಿನ ದಕ್ಷಿಣ ವಲಯದಲ್ಲಿರುವ ಮದುವೆ ಛತ್ರಗಳು : 170
* ಪರವಾನಗಿ ಪಡೆದ ಛತ್ರಗಳು : 51
* ಪರವಾನಗಿ ಪಡೆಯದ ಕಟ್ಟಡಗಳು : 110
* ಬಾಗಿಲು ಮುಚ್ಚಿದ ಕಟ್ಟಡಗಳು : 09












Click it and Unblock the Notifications