IT Parks: ಬೆಂಗಳೂರಲ್ಲಿ ತಲೆಎತ್ತಲಿವೆ 89 ಹೊಸ ಐಟಿ ಪಾರ್ಕ್‌ಗಳು: ಏನೆಲ್ಲ ಪ್ರಯೋಜನಾಗಳಾಗಲಿವೆ? ಮಾಹಿತಿ, ವಿವರ ಇಲ್ಲಿದೆ
IT Parks In Bengaluru: ರಾಜ್ಯ ರಾಜಧಾನಿ ಬೆಂಗಳೂರು ಭಾರತದ ಐಟಿ ಹಬ್ ಅಂತಲೇ ಪ್ರಖ್ಯಾತಿ ಪಡೆದಿದೆ. ಇನ್ನು ಇದೀಗ ಇಲ್ಲಿ 89 ಹೊಸ ಐಟಿ ಪಾರ್ಕ್‌ಗಳು ತಲೆ ಎತ್ತಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇವುಗಳು ಯಾವಾಗ ಪೂರ್ಣವಾಗಲಿವೆ ಹಾಗೂ ತಗಲುವ ವೆಚ್ಚ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಲ್ಲಿ ಮುಂದಿನ ಕೆಲವು ವರ್ಷಗಳ ಅವಧಿಯಲ್ಲಿ ಒಟ್ಟು 89 ಹೊಸ ಐಟಿ ಪಾರ್ಕ್‌ಗಳು ತಲೆ ಎತ್ತಲಿದ್ದು, 54 ಉದ್ಯಮಗಳು ಈ ಮಹತ್ವಾಕಾಂಕ್ಷೆಯ ಅಭಿವೃದ್ಧಿ ಯೋಜನೆಯ ನಾಯಕತ್ವ ವಹಿಸಿಕೊಂಡಿವೆ. ಇದು ಬೆಂಗಳೂರು ಮಹಾನಗರವನ್ನು ಟೆಕ್ನೋಲಾಜಿಕಲ್ ಹಬ್ ಆಗಿ ಪರಿವರ್ತಿಸಲಿದೆ. ಜೊತೆಗೆ ದೊಡ್ಡ ದೊಡ್ಡ ಅಭಿವೃದ್ಧಿ ಕಾರ್ಯಗಳು ಕೂಡ ಆಗಲಿವೆ.

ಈ ಹೊಸ ಟೆಕ್ ಪಾರ್ಕ್‌ಗಳನ್ನು ಉತ್ತರ ವಲಯ, ಮಹದೇವಪುರ ಮತ್ತು ಬೊಮ್ಮನಹಳ್ಳಿ ಸೇರಿ ಬೆಂಗಳೂರಿನ ಹಲವು ಪ್ರಮುಖ ವಲಯಗಳಲ್ಲಿ ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿ ಆರಂಭಿಸಲಾಗುತ್ತಿದೆ. ಇದಕ್ಕೆ ಬೇಕಾದ ಅತ್ಯಾಧುನಿಕ ಮೂಲ ಸೌಲಭ್ಯಗಳ ನಿರ್ಮಾಣವು ಮುಂದಿನ ಎರಡು-ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದು ನಗರ ಶರವೇಗದಲ್ಲಿ ಬೆಳವಣಿಗೆ ಮತ್ತು ರೂಪಾಂತರದ ಅವಧಿಯನ್ನು ಗುರುತಿಸಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಈ ಕುರಿತು ಸರ್ಕಾರ ವಿವರಿಸಿತ್ತು.
ಹೊಸ ಐಟಿ ಪಾರ್ಕ್‌ಗಳ ಸ್ಥಾಪನೆಯು ಪ್ರಮುಖ ಐಟಿ ಮತ್ತು ವ್ಯಾಪಾರ ತಂತ್ರಜ್ಞಾನ ಕೇಂದ್ರವಾಗಿ ಬೆಂಗಳೂರು ಬೆಳೆಯುವುದನ್ನು ಖಾತರಿಪಡಿಸಲಿದೆ. ಅಲ್ಲದೆ, ಈ ಬೆಳೆಯುತ್ತಿರುವ ವಲಯವನ್ನು ಬೆಂಬಲಿಸಲು ವರ್ಧಿತ ಮೂಲಸೌಕರ್ಯದ ಅಗತ್ಯವನ್ನು ಸಹ ಹೇಳುತ್ತಿದೆ. ಟೆಕ್ ಪಾರ್ಕ್‌ಗಳ ನಿರ್ಮಾಣವು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಅಲ್ಲದೆ, ಮಹಾನಗರದ ಟೆಕ್ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಉತ್ತರ ವಲಯದ ಯಶವಂತಪುರದಲ್ಲಿ 10ಕ್ಕೂ ಹೆಚ್ಚು ಐಟಿ ಕಂಪನಿಗಳು ಸ್ಥಾಪನೆ ಆಗಲಿದ್ದು, ಇದು ಈ ಭಾಗವನ್ನು ಪ್ರಮುಖ ಟೆಕ್ ಹಬ್ ಆಗಿ ಅಭಿವೃದ್ಧಿಪಡಿಸಲಿದೆ. ಇನ್ನು, ವೈಟ್‌ಫೀಲ್ಡ್‌ನಲ್ಲೂ 10 ಹೊಸ ಐಟಿ ಸಂಸ್ಥೆಗಳ ಸೇರ್ಪಡೆ ಆಗಲಿದೆ. ಬೆಳ್ಳಂದೂರು ಭಾಗದಲ್ಲಿ 5, ತುಮಕೂರು ರಸ್ತೆ ಭಾಗದಲ್ಲಿ 2 ಹೊಸ ಐಟಿ ಪಾರ್ಕ್‌ಗಳು, ಕೋರಮಂಗಲದಲ್ಲಿ ಒಂದು ಹೊಸ ಐಟಿ ಪಾರ್ಕ್ ಸ್ಥಾಪನೆ ಆಗಲಿದೆ. ಅಲ್ಲದೆ, ಕುಂದಲಹಳ್ಳಿಯಲ್ಲಿ 3 ಹೊಸ ಐಟಿ ಪಾರ್ಕ್‌ಗಳು ನಿರ್ಮಾಣವಾಗಲಿವೆ.
ಬೆಂಗಳೂರಲ್ಲಿ ಹೊಸ ಹೊಸ ಐಟಿ ಪಾರ್ಕ್ ಬರುವುದಕ್ಕೆ ಯಾರ ಅಡ್ಡಿಯೂ ಇಲ್ಲ. ಆದರೆ ಇದೀಗ ಬಂದಿರುವ ಐಟಿ ಪಾರ್ಕ್‌ಗಳಿಗೆ, ಈಗಾಗಲೇ ಇರುವ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಬೆಂಗಳೂರಿಗರ ಆಗ್ರಹ.
ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಸಿಟಿಜನ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಖಾತೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಈಸ್ಟ್ ಬೆಂಗಳೂರಿನ ಸಿಟಿಜನ್ಸ್ ಮೂವ್‌ಮೆಂಟ್ ಬಿಬಿಎಂಪಿ ಚುನಾವಣೆ ನಡೆಸಬೇಲೆಂಬ ಆಗ್ರಹದ ಅಭಿಯಾನ ನಡೆಸುತ್ತಿದ್ದು, ಮೂಲಸೌಕರ್ಯದ ಕೊರತೆಯನ್ನು ಪ್ರಸ್ತಾಪಿಸುತ್ತಾ ಬಂದಿದೆ.
ಇನ್ನು ಆಗಸ್ಟ್ 22ರಂದು ಮಾಡಿರುವ ಈ ಟ್ವೀಟ್‌ನಲ್ಲಿ ಬೆಂಗಳೂರಿಗೆ 89 ಐಟಿ ಪಾರ್ಕ್ ಬರುವುದು ಸಂತೋಷದ ವಿಚಾರವಾಗಿದೆ. ಇದು ಮಹಾನಗರಕ್ಕೆ ಮತ್ತು ದೇಶಕ್ಕೆ ಸಂಬಂಧಿಸಿ ಉತ್ತಮ ಬೆಳವಣಿಗೆಯೇ ಸರಿ. ಆದರೆ ಬೆಂಗಳೂರು ಮಹಾನಗರ ಇಷ್ಟು ದೊಡ್ಡ ಸಂಖ್ಯೆ ಪಾರ್ಕ್‌ಗಳನ್ನು ಬರಮಾಡಿಕೊಳ್ಳುವುದಕ್ಕೆ ಅಗತ್ಯ ಮೂಲಸೌಕರ್ಯವಿದೆಯೇ?, ಮಾನವ ಸಂಪನ್ಮೂಲ, ಲಾಜಿಸ್ಟಿಕ್ಸ್ ಸೇರಿ ಅನೇಕ ವಿಚಾರಗಳು ಇಲ್ಲಿ ಅಡಕವಾಗಿವೆ. ಈ ಬಗ್ಗೆ ಗಮನಹರಿಸಬೇಕೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ ಅವರನ್ನು ಟ್ಯಾಗ್ ಮಾಡಿ ಆಗ್ರಹಿಸಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications