73.5 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ: ಈ ಭಾಗಗಳಲ್ಲಿ ಭೂಮಿಗೆ ಚಿನ್ನದ ಬೆಲೆ!
ಬೆಂಗಳೂರಿನಲ್ಲಿ ಪ್ರಮುಖ ಯೋಜನೆಗಳಿಗೆ ಶರವೇಗ ಸಿಕ್ಕಿದ್ದು. ಇದೀಗ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಕ್ಕೆ ಪೂರಕವಾಗಿ ಮತ್ತೊಂದು ಯೋಜನೆ ಜಾರಿಯಾಗುತ್ತಿದೆ. ಇದರಿಂದ ಬೆಂಗಳೂರಿನ ಹೊರ ವಲಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಕಾಮಗಾರಿಗಳ ಪರ್ವವೇ ಶುರುವಾಗಿದೆ. ಇದೀಗ ಹೊಸ ಮತ್ತೊಂದು ಕಾಮಗಾರಿಯಿಂದ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಂತಾಗಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC) ಯೋಜನೆಗೆ ವೇಗ ಸಿಕ್ಕಿದೆ. ಇದರಿಂದ ಯಾವೆಲ್ಲಾ ಭಾಗಕ್ಕೆ ಲಾಭವಾಗಲಿದೆ ಏನಿದು ಯೋಜನೆ ಅಂತ ತಿಳಿಯೋಣ.
ಬೆಂಗಳೂರಿನಲ್ಲಿ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಇದೀಗ ಬೆಂಗಳೂರಿನ ಹೊರ ವಲಯದಲ್ಲಿ ನಡೆಯುತ್ತಿರುವ ಈ ಕಾಮಗಾರಿಯು ರಿಯಲ್ ಎಸ್ಟೇಟ್‌ಗೆ ಹೊಸ ಬೂಸ್ಟ್ ನೀಡಿದೆ. ಬೆಂಗಳೂರಿನ ಮಧ್ಯಭಾಗದಲ್ಲಿನ ಟ್ರಾಫಿಕ್ ಜಾಮ್ ಕಡಿಮೆ ಆಗುವುದು ಹಾಗೂ ಬೆಂಗಳೂರಿನ ಹೊರ ವಲಯ ಮತ್ತು ಪ್ರದೇಶಗಳ ಅಭಿವೃದ್ಧಿ ಸಹ ಈ ಯೋಜನೆಯಿಂದ ಆಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನ ಬಾಹ್ಯ ಪ್ರದೇಶಗಳ ಅಭಿವೃದ್ಧಿಗೆ ಇದು ಪೂರಕವಾಗಿದೆ. ಈ ಯೋಜನೆಯು ಒಟ್ಟು 73.5 ಕಿ.ಮೀ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್ ರಸ್ತೆಯಾಗಿದೆ. ಮೆಟ್ರೋ ಹಾಗೂ ಉಪನಗರ ರೈಲು ಜಾಲಗಳೊಂದಿಗೆ ಇದು ಸಹ ಅಭಿವೃದ್ಧಿ ಆಗಲಿದೆ. ಈ ಯೋಜನೆಯಿಂದ ರಿಯಲ್ ಎಸ್ಟೇಟ್ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗುತ್ತಿರುವ ಸಂಚಾರ ದಟ್ಟಣೆಯನ್ನು ತಪ್ಪಿಸುವುದು ಹಾಗೂ ವ್ಯಾಪಾರದ ಕಾರಣಕ್ಕೆ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರು ವ್ಯಾಪಾರ ಕಾರಿಡಾರ್ (ಬಿಬಿಸಿ) ಬೆಂಗಳೂರಿನ ಉತ್ತರದಿಂದ ಪೂರ್ವಕ್ಕೆ & ದಕ್ಷಿಣಕ್ಕೆ 73.5 ಕಿ.ಮೀ ಉದ್ದದ ಅಭಿವೃದ್ಧಿ ಯೋಜನೆಯಾಗಿದೆ.
ಪ್ರಮುಖ ಹೆದ್ದಾರಿಗಳಿಗೆ ಸಂಪರ್ಕ: ಇನ್ನು ಈ ಉದ್ದೇಶಿತ ಯೋಜನೆಯು ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ ಹಾಗೂ ನೈಸ್ ರಸ್ತೆಗಳನ್ನು ಸಂಪರ್ಕಿಸುತ್ತದೆ. ಈ ಪ್ರದೇಶಗಳಲ್ಲಿ ಹೊಸ ಯೋಜನೆ ಸಾಗಲಿದ್ದು. ಈ ಭಾಗಗಳಿಗೆ ಬಂಪರ್ ಅಂತಲೇ ಹೇಳಲಾಗುತ್ತಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಭೂಮಿಯ ಬೆಲೆಯು ಹೆಚ್ಚಾಗಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಕೆಲವು ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ರಿಯಲ್ ಎಸ್ಟೇಟ್‌ಗೆ ಪೂರಕ: ಈ ಯೋಜನೆಯು ರಿಯಲ್ ಎಸ್ಟೇಟ್‌ಗೆ ಪೂರಕವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಬೆಂಗಳೂರಿನ ವ್ಯಾಪಾರ ಕಾರಿಡಾರ್ (ಬಿಬಿಸಿ) ಯೋಜನೆಯಿಂದಾಗಿ ಸರ್ಜಾಪುರ, ದೇವನಹಳ್ಳಿ, ಹೊಸಕೋಟೆ, ಯಲಹಂಕ ಹಾಗೂ ವೈಟ್‌ಫೀಲ್ಡ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಭೂಮಿಯ ಬೆಲೆಗಳು ಈ ಭಾಗದಲ್ಲಿ ಶೇ. 10 ರಿಂದ 25% ರಷ್ಟು ಹೆಚ್ಚಳವಾಗಿದೆ. ಮುಂದಿನ 5 ವರ್ಷಗಳಲ್ಲಿ ಭೂಮಿಯ ಬೆಲೆಯು ಶೇ. 20ರಿಂದ 40% ರಷ್ಟು ಹೆಚ್ಚಳವಾಗಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದರು.












Click it and Unblock the Notifications