72ನೇ ವಯಸ್ಸಿನಲ್ಲಿ ಮಗನಿಗೆ ಕಿಡ್ನಿಕೊಟ್ಟು ಪುನರ್ಜನ್ಮ ನೀಡಿದ ಮಹಾತಾಯಿ

ಬೆಂಗಳೂರು, ನವೆಂಬರ್ 17: ಕಿಡ್ನಿ ವೈಫಲ್ಯದಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗನಿಗೆ ತನ್ನ ಕಿಡ್ನಿಯನ್ನು ನೀಡಿ 72 ವರ್ಷದ ತಾಯಿ ಮಗನಿಗೆ ಪುನರ್ಜನ್ಮ ನೀಡಿದ್ದಾಳೆ.

ತಾಯಿಗೆ ಮಗ ಎಷ್ಟೇ ದೊಡ್ಡವನಾದರೂ ಕೂಡ ಆತ ಪುಟ್ಟ ಮಗುವೇ, ತಾಯಿ ಬದುಕಿರುವವರೆಗೂ ಮಕ್ಕಳಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುತ್ತಾಳೆ. ಹಾಗೆಯೇ ಈ ತಾಯಿ ತನ್ನ ಇಳಿ ವಯಸ್ಸಿನಲ್ಲಿ ಕಿಡ್ನಿ ಕಳೆದುಕೊಂಡರೆ ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿದಿದ್ದರೂ ಕೂಡ ಆಕೆ ಕಿಡ್ನಿಯನ್ನು ದಾನ ಮಾಡಿದ್ದಾಳೆ.

ಚಿತ್ರದುರ್ಗದ ಹಿರಿಯೂರು ಬಳಿಯ ಭದ್ರಕಾಳಮ್ಮ 42 ವರ್ಷದ ಮಗ ಸತ್ಯನಾರಾಯಣಾಚಾರಿಗೆ ಕಿಡ್ನಿ ನೀಡಿದ್ದಾರೆ. ವಯೋಸಹಜ ಸಮಸ್ಯೆಗಳು ಉದ್ಭವಿಸುವ ಹಿನ್ನೆಲೆಯಲ್ಲಿ 65 ವರ್ಷದ ಬಳಿಕ ಅಂಗಾಂಗ ದಾನಕ್ಕೆ ವೈದ್ಯರು ಸಲಹೆ ನೀಡುವುದೇ ಇಲ್ಲ. ಆದರೆ 72 ವರ್ಷದ ತಾಯಿ ತನ್ನ ಮಗನಿಗೆ ಒಂದು ಕಿಡ್ನಿ ದಾನ ಮಾಡುವ ಮೂಲಕ ಹೊಸ ಜೀವನ ನೀಡಿದ್ದಾಳೆ.

72-year-old woman donates kidney to son

ಕಿಡ್ಮಿ ಕಸಿ ಮಾಡಲು ಸಂಬಂಧಿಕರ ಪೈಕಿ ಯಾರಿದಂಲಾದರೂ ದಾನ ಪಡೆಯುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದರು ಆದರೆ ತಾಯಿ ತನ್ನ ಮಗನನ್ನು ನಾನೇ ಬದುಕಿಸಿಕೊಳ್ಳುತ್ತೇನೆ ಎಂದು ಕಿಡ್ನಿಯನ್ನು ನೀಡಿದ್ದಾರೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಿಡ್ನಿ ಕಸಿ ನಡೆದಿದೆ.

ಅಮ್ಮನ ಕಿಡ್ನಿ ಅಪ್ಪನಿಗೆ ಹೊಂದಾಣಿಕೆ ಆಗುವುದಿಲ್ಲ ಎಂದಾಗ ಕುಟುಂಬದಲ್ಲಿ ಭಯ ಆವರಿಸಿತ್ತು. ಆದರೆ ನನ್ನ ಅಜ್ಜಿ ಈ ಆತಂಕವನ್ನು ದೂರ ಮಾಡಿದ್ದಾರೆ. ಅಂಗಾಂಗ ದಾನದ ಬಗ್ಗೆ ತಿಳಿದುಕೊಂಡಿದ್ದ ಅಜ್ಜಿ, ಮೂತ್ರಪಿಂಡ ದಾನಕ್ಕೆ ಮುಂದಾದರು.

ಆರಂಭದಲ್ಲಿ ಅವರ ವಯಸ್ಸಿನ ಕಾರಣ ಇದು ಸಾಧ್ಯವಿಲ್ಲ ಎಂದುಕೊಂಡೆವು. ಆದರೆ ಅಜ್ಜಿಯನ್ನು ಪರೀಕ್ಷೆ ನಡೆಸಿದ ವೈದ್ಯರ ತಂಡ ಅಜ್ಜಿ ಕಿಡ್ನಿಯನ್ನು ಅಪ್ಪನಿಗೆ ಕಸಿ ಕಿಡ್ನಿ ಮಾಡಲು ಮುಂದಾದರು. ಇದೀಗ ಇಬ್ಬರೂ ಆರೋಗ್ಯದಿಂದಿದ್ದಾರೆ. ಕುಟುಂಬವೂ ಖುಷಿಯಾಗಿದೆ ಎಂದು ಸತ್ಯನಾರಾಯಣಾಚಾರಿ ಪುತ್ರಿ ಮಂಜುಳಾ ಹೇಳಿದ್ದಾರೆ.

ಕಳೆದ 2 ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೆ. ಬದುಕುವ ಆಸೆಯನ್ನೇ ಕಳೆದುಕೊಂಡಿದ್ದೆ. ಅಮ್ಮ ನನಗೆ ಪುನರ್ಜನ್ಮ ನೀಡಿದ್ದಾಳೆ ಎಂದು ಹೇಳುತ್ತಾ ಮಗ ಸತ್ಯನಾರಾಯಣ ಭಾವುಕರಾಗುತ್ತಾರೆ. ಒಂದೇ ಕಿಡ್ನಿಯಲ್ಲಿ ಬದುಕಬಲ್ಲೆವು ಎಂದು ವೈಸ್ಯರು ಹೇಳಿದ್ದಾರೆ, ಹಾಗಾದರೆ ಎರಡು ಕಿಡ್ನಿ ಇರುವುದರಲ್ಲಿ ಒಂದು ಕಿಡ್ನಿಯನ್ನು ದಾನ ಮಾಡಿದ್ದೇನೆ ಇದು ನನ್ನ ನಿರ್ಧಾರ ಎಂದು ತಾಯಿ ಭದ್ರಕಾಳಮ್ಮ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+