ನಮ್ಮ ಮೆಟ್ರೋ: 38 ನಿಲ್ದಾಣಗಳಲ್ಲಿ 66 ಎಸ್‌ಬಿಐ ಎಟಿಎಂ ಅಳವಡಿಕೆ
ಬೆಂಗಳೂರು, ಏಪ್ರಿಲ್ 09: ಮೆಟ್ರೋ ಪ್ರಯಾಣಿಕರ ಹಾಗೂ ನಾಗರಿಕರ ಅನುಕೂಲಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ನಗರದ 38 ಮೆಟ್ರೋ ನಿಲ್ದಾಣಗಳಲ್ಲಿ 66 ಎಟಿಎಂಗಳನ್ನು ತೆರೆಯಲಿದೆ.
ಈ ನಿಟ್ಟಿನಲ್ಲಿ ಎಸ್‌ಬಿಐ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಮೆಟ್ರೋ ನಿಗಮದ (ನಮ್ಮ ಮೆಟ್ರೋ) ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಮಹಾಪ್ರಬಂಧಕ ಎಸ್.ಎಂ. ಫಾರೂಕ್ ಶಾಹಬ್ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ.
ಒಡಂಬಡಿಕೆ ಪತ್ರ ವಿನಿಮಯದ ನಂತರ ಮಾತನಾಡಿದ ಫಾರೂಕ್ ಶಾಹಬ್ , ಮೆಟ್ರೋ ನಿಲ್ದಾಣಗಳಲ್ಲಿ ಎಸ್‌ಬಿಐ ಒಟ್ಟು 63 ಎಟಿಎಂ ಕಿಯೋಸ್ಕ್ ಗಳನ್ನು ತೆರೆಯಲಿದೆ. ಬೆಂಗಳೂರು ನಗರದೊಳಗಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ 2ರಿಂದ 3 ಎಟಿಎಂ ಕಿಯೋಸ್ಕ್ ಗಳು ಇರಲಿವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಒಂದು ಎಟಿಎಂ ಮಾತ್ರ ಇದೆ. ಈ ಹಿಂದೆ ಮೆಟ್ರೋ ನಿಗಮ ಕರೆಯಲಾಗಿದ್ದ ಟೆಂಡರ್ ಅವಧಿ ಮುಕ್ತಾಯವಾಗಿತ್ತು. ಇನ್ನೊಂದು ತಿಂಗಳಲ್ಲಿ ಎಟಿಎಂ ಅಳವಡಿಸಲಾಗುತ್ತದೆ.












Click it and Unblock the Notifications