5 ಹೊಸ ಪಾಲಿಕೆ ರಚನೆ: ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಪ್ರಾಪರ್ಟಿ ಟ್ಯಾಕ್ಸ್‌ ಹೆಚ್ಚಳ ಸಾಧ್ಯತೆ!

ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಹಾಗೂ ಬೆಂಗಳೂರಿನ ಆಸ್ತಿದಾರರಿಗೆ ಶೀಘ್ರದಲ್ಲೇ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಮುಖ್ಯ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಿ 5 ಮಹಾನಗರ ಪಾಲಿಕೆಗಳನ್ನು ಮಾಡುತ್ತಿರುವುದು. ಈಗ ಇರುವ ಪಾಲಿಕೆಗಳನ್ನು ಐದು ಪಾಲಿಕೆಗಳನ್ನಾಗಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಈ ಪಾಲಿಕೆಗಳು ಬರಲಿವೆ. ಆದರೆ, ಹೊಸ ಪಾಲಿಕೆಗಳು ರಚನೆಯಾದರೆ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸರ್ಕಾರಕ್ಕೆ ಭಾರೀ ಹೊಡೆತ ಬೀಳಲಿದೆ. ಅದರ ನೇರವಾದ ಪರಿಣಾಮವು ಜನರ ಮೇಲೆ ಆಗುವ ಸಾಧ್ಯತೆ ಇದೆ. ಹೊಸ ಪಾಲಿಕೆಗಳಿಗೆ ಕಟ್ಟಡ, ಸಿಬ್ಬಂದಿ ಹಾಗೂ ಮೂಲಸೌಕರ್ಯ ಸೇರಿದಂತೆ ಹಲವು ಸೌಲಭ್ಯಗಳು ಅವಶ್ಯವಿದೆ. ಇದರಿಂದ ಎಲ್ಲಾ ಪಾಲಿಕೆಗಳ ಮೇಲೂ ಆರ್ಥಿಕ ಹೊರೆ ಆಗಲಿದೆ.

ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಪಾಲಿಕೆಗಳನ್ನಾಗಿ ವಿಭಜನೆ ಮಾಡಲಾಗಿದೆ. ಇದರಿಂದ ಬೆಂಗಳೂರು ಅಭಿವೃದ್ಧಿ ಆಗಲಿದೆ. ಅಲ್ಲದೇ ಸುಗಮ ಆಡಳಿತಕ್ಕೆ ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಆದರೆ ಪಾಲಿಕೆ ಐದು ವಿಭಜನೆಗಳಾದರೂ ಈಗ ಇರುವ ಆದಾಯದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ. ಅಲ್ಲದೇ ಪಾಲಿಕೆಯ ಆರ್ಥಿಕತೆ ಹೆಚ್ಚಳ ಮಾಡಿಕೊಳ್ಳುವ ಹೊಸ ಮಾರ್ಗಗಳನ್ನು ಕಂಡುಕೊಂಡಿಲ್ಲ.

5 New Corporation Formation Property Tax Increase Possible for Property Owners in Bengaluru

ಬಿಬಿಎಂಪಿಯು ಅಥವಾ ನೂತನ ಗ್ರೇಟರ್ ಬೆಂಗಳೂರು ಕೇವಲ ಪ್ರಾಪರ್ಟಿ ಟ್ಯಾಕ್ಸ್‌ ಮಾತ್ರ ಮೆಚ್ಚಿಕೊಂಡಿದೆ. ಕಸದಿಂದ ಹಾಗೂ ಜಾಹೀರಾತಿನಿಂದ ಆದಾಯ ಗಳಿಸುವಂತಹ ಮಹತ್ವದ ಅವಕಾಶಗಳು ಇವೆಯಾದರೂ ಅದನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದೀಗ ಹೊಸದಾಗಿ ಐದು ಪಾಲಿಕೆಗಳು ರಚನೆಯಾದರೆ ಐದು ಪಾಲಿಕೆಗಳಿಗೆ ಹೊಸ ಕಟ್ಟಡಗಳು, ಸಿಬ್ಬಂದಿ ಹಾಗೂ ಮೂಲಸೌಕರ್ಯಬೇಕು. ಇದಕ್ಕೆಲ್ಲವೂ ಕೋಟ್ಯಾಂತರ ರೂಪಾಯಿ ಖರ್ಚಾಗಲಿದೆ. 198 ವಾರ್ಡ್‌ಗಳನ್ನು ಅದೇ ರೀತಿ ಉಳಿಸಿಕೊಳ್ಳಲಾಗಿದೆ. ಕೆಲವೊಂದು ಪ್ರದೇಶಗಳನ್ನು ಸೇರಿಸಿಕೊಂಡು ಇನ್ನೊಂದಷ್ಟು ಪ್ರದೇಶಗಳನ್ನು ಲಿಸ್ಟ್‌ನಿಂದ ಕೈಬಿಡಲಾಗಿದೆ. ಇದರಿಂದ ಆದಾಯದಲ್ಲಿ ಭಾರೀ ಹೆಚ್ಚಳ ಇಲ್ಲ.

ಇದೀಗ ಹೊಸ ಪಾಲಿಕೆಗಳನ್ನು ರಚನೆ ಮಾಡಿದ ಮೇಲೆ ಹೊರೆ ಹೆಚ್ಚಾಗಲಿದ್ದು. ಇದರಿಂದ ಪ್ರಾಪರ್ಟಿ ಟ್ಯಾಕ್ಸ್‌ ಹೆಚ್ಚಳವಾಗುವ ಸಾಧ್ಯತೆ ಇದೆ. ಯಾಕೆಂದರೆ ಪ್ರಮುಖ ಆದಾಯ ಮೂಲ ಆಸ್ತಿ ಮಾತ್ರವಾಗಿದೆ. ಹೊಸ ಪಾಲಿಕೆಗಳ ರಚನೆಯ ಸಂದರ್ಭದಲ್ಲಿ ಟ್ಯಾಕ್ಸ್‌ ಸಹ ಹೆಚ್ಚಳವಾಗುವ ಸಾಧ್ಯತೆ ಇದೆ. ಮುಂದೆ ಹೊಸ ಪಾಲಿಕೆಗಳು ರಚನೆಯಾದರೆ ಪ್ರಮುಖ ಕಾಮಗಾರಿಗಳನ್ನು ಹಾಗೂ ಟ್ಯಾಕ್ಸ್‌ ಕಲೆಕ್ಷನ್ ಸಿಸ್ಟಂ ಸೇರಿದಂತೆ ಪ್ರಮುಖ ವಿಷಯಗಳನ್ನು ಗ್ರೇಟರ್ ಬೆಂಗಳೂರು ಅಡಿಯಲ್ಲೇ ಬರಲಿವೆ. ಹೊಸ ಪಾಲಿಕೆಗಳಿಗೆ ಹೆಚ್ಚಿನ ಜವಾಬ್ದಾರಿ ಇರುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತಿದೆ. ಇದೀಗ ಹೊಸ ಪಾಲಿಕೆಗಳು ರಚನೆಯಾಗುತ್ತಿದ್ದು ಹಂತ - ಹಂತವಾಗಿ ಎಲ್ಲವೂ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+