ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಬಿಯರ್ ಸಿಗುವ ಬಾರ್ - ಪಬ್‌ಗಳ ಲಿಸ್ಟ್!
ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ಜೋರಾಗಿದೆ. ಹೊಸ ವರ್ಷ 2025ಕ್ಕೆ ಪಾರ್ಟಿ ಮಾಡುವ ಮೂಡ್‌ನಲ್ಲಿ ಜನ ಇದ್ದಾರೆ. ಅದಕ್ಕೆ ಅನುಗುಣವಾಗಿ ಬೆಂಗಳೂರಿನ ಹಲವು ಪಬ್ ಅಂಡ್ ಬಾರ್ ಮತ್ತು ರೆಸ್ಟೋರೆಂಟ್‌ಗಳು ಹೊಸ ಹೊಸ ಆಫರ್‌ಗಳನ್ನು ಬಿಟ್ಟಿವೆ. ಬೆಂಗಳೂರಿನಲ್ಲಿ ಬಜೆಟ್ ಫ್ರೆಂಡ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳು ಸಾಕಷ್ಟಿವೆ. ಹೊಸ ವರ್ಷದ ಸಂಭ್ರಮಾಚರಣೆಗೆ ಬಜೆಟ್ ಫ್ರೆಂಡ್ಲಿ ಬಾರ್‌ಗಳು ಯಾವುವು, ಎಲ್ಲೆಲ್ಲಿ ಕಡಿಮೆ ಬೆಲೆಗೆ ಬಿಯರ್ ಸಿಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಪಬ್‌ಗಳಲ್ಲಿ ಒಂದು ಪಿಂಟ್‌ನ ಬೆಲೆ 180 ರೂಪಾಯಿಗೆಲ್ಲ ಸಿಗುತ್ತದೆ. ಎಲ್ಲೆಲ್ಲಿ ಕಡಿಮೆ ಬೆಲೆಗೆ ಬಿಯರ್ ಸಿಗುತ್ತೆ ನೋಡೋಣ ಬನ್ನಿ.
ಬೆಂಗಳೂರಿನಲ್ಲಿ ಸಾವಿರಾರು ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳು ಇವೆ. ಆದರೆ, ಬೆಂಗಳೂರಿನಲ್ಲಿ ಪಬ್‌ಗಳು ದುಬಾರಿ ಅಲ್ಲಿ ಬಡವರು ಅಥವಾ ಮಧ್ಯಮ ವರ್ಗದವರು ಹೋಗುವುದಕ್ಕೆ ಆಗಲ್ಲ. ಇದೆಲ್ಲ ಏನಿದ್ದರೂ ದುಡ್ಡು ಇರುವವರಿಗೆ ಮಾತ್ರ ಎನ್ನುವ ತಪ್ಪು ನಂಬಿಕೆ ಇದೆ. ಬೆಂಗಳೂರಿನಲ್ಲಿ ಬಜೆಟ್ ಫ್ರೆಂಡ್ಲಿ ಹಾಗೂ ಕಡಿಮೆ ಬೆಲೆಗೆ ಡ್ರಿಂಕ್ಸ್ ಸಿಗುವ ಪಬ್‌ಗಳು ಸಹ ಇವೆ. ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೀವು ಇಲ್ಲಿಗೂ ಭೇಟಿ ನೀಡಬಹುದಾಗಿದೆ.

* ಡಾಲ್ಫಿನ್ ಬಾರ್ ಮತ್ತು ರೆಸ್ಟೋರೆಂಟ್: ಬೆಂಗಳೂರಿನ ಪ್ರಮುಖ ಪಬ್‌ಗಳಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ರಾಕ್ ಸಂಗೀತ ಇರುತ್ತದೆ. ಇಳಿ ಸಂಜೆಯಲ್ಲಿ ಸಂಗೀತ ಹಾಗೂ ಬಿಯರ್‌ನ ಕಿಕ್ ಕೊಡುವ ಸಂತೋಷವೇ ಬೇರೆ. ಇಲ್ಲಿ ಬಜೆಟ್ ಫ್ರೆಂಡ್ಲಿ ಫುಡ್ ಹಾಗೂ ಬಿಯರ್ ಸಹ ಸಿಗುತ್ತದೆ. ಚಿಕನ್ ತಿನಸು, ಕಬಾಬ್‌ಗಳು ಮತ್ತು ಫ್ರೈಗಳು, ಚಿಕನ್ ಗ್ರೇವಿ ಸೇರಿದಂತೆ ಹಲವು ಫೂಡ್ ಕಡಿಮೆ ಬೆಲೆಗೆ ಸಿಗುತ್ತವೆ. ಇನ್ನು ಇಲ್ಲಿ ಬಿಯರ್ ಬೆಲೆಯು 125 ರಿಂದ 150 ರೂಪಾಯಿ ಒಳಗಡೆ ಇದೆ. ಫ್ರೇಜರ್ ಟೌನ್‌ನಲ್ಲಿ ಈ ಬಾರ್ ಅಂಡ್ ರೆಸ್ಟೋರೆಂಟ್ ಇದೆ.
* ಚೀನ್ ಲಂಗ್ ರೆಸ್ಟೋ ಬಾರ್: ಬೆಂಗಳೂರಿನ ಕಡಿಮೆ ಬಜೆಟ್‌ನ ಹಾಗೂ ಸ್ನೇಹಿತರೆಲ್ಲ ಸೇರಿ ಎಂಜಾಯ್ ಮಾಡುವುದಕ್ಕೆ ಹೇಳಿ ಮಾಡಿಸಿದ ಬಾರ್ ಇದಾಗಿದೆ. ಇಲ್ಲಿ ನಿಮಗೆ ಹೊಸ ರೀತಿಯ ಅನುಭವಗಳೇ ಸಿಗಲಿದೆ. ಇಲ್ಲಿ ರೂಫ್ ಸಿಟ್ಟಿಂಗ್ ಇದೆ. ಈ ಪಬ್‌ನಲ್ಲಿ ಲೈವ್ ಮ್ಯೂಸಿಕ್, ಕಾಕ್‌ಟೇಲ್, ವೈನ್ ಹಾಗೂ ಕಡಿಮೆ ಅಥವಾ ಬಜೆಟ್ ಫ್ರೆಂಡ್ಲಿ ಬಿಯರ್ ಸಿಗುತ್ತದೆ. ಫ್ರಂಚ್ ಫ್ರೈಸ್, ಮಂಚೂರಿಯನ್ ಮತ್ತು ಚಿಕನ್ ಟಿಕ್ಕಾ ಸೇರಿದಂತೆ ಹಲವು ಸೈಡ್‌ಡಿಶ್‌ಗಳು ಸಹ ಸಿಗುತ್ತವೆ. ಫ್ರೈಡ್ ರೈಸ್ ಸೇರಿದಂತೆ ಲೈಟ್ ಫುಡ್‌ಗಳು ಸಹ ಇಲ್ಲಿ ಸಿಗುತ್ತವೆ. ಅಲ್ಲದೆ ಬಡ್‌ವೈಸರ್, ಬಿರಾ 91, ಕಿಂಗ್‌ಫಿಷರ್ ಸೇರಿದಂತೆ ಹಲವು ಬಿಯರ್‌ಗಳು ಇಲ್ಲಿ ಸಿಗುತ್ತವೆ. ಬಿಯರ್‌ನ ಬೆಲೆ ಇಲ್ಲಿ ಸುಮಾರು 125 ರೂ. ಇದೆ(ಪ್ರತಿ ಪಿಂಟ್‌ಗೆ). ಇದು ಬಜೆಟ್ ಫ್ರೆಂಡ್ಲಿಯಾಗಿದ್ದು, ಹೊಸ ವರ್ಷಕ್ಕೆ ಬೆಸ್ಟ್ ಆಯ್ಕೆ ಎನ್ನಬಹುದು. ಇದು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಸಮೀಪದಲ್ಲಿ ಇದೆ.

* ಬಾಬ್ಸ್ ಬಾರ್: ಇದು ಸಹ ಮತ್ತೊಂದು ಬಜೆಟ್ ಫ್ರೆಂಡ್ಲಿ ಬಾರ್ ಆಗಿದೆ. ಇದನ್ನು ಡ್ಯೂಡ್ ಬಾರ್ ಅಂತಲೂ ಕರೆಯುತ್ತಾರೆ. ಇಲ್ಲಿ ನಿಮಗೆ ಕರ್ನಾಟಕದ ಫೇಮಸ್ ಫೂಡ್‌ಗಳು ಸಿಗುತ್ತವೆ. ಬಾಳೆಹಣ್ಣು ಕಟ್ಲೆಟ್, ಫಿಲ್ಟರ್ ಕಾಫಿ, ಚೀಸ್‌ಕೇಕ್, ಮಟನ್ ಕೈಮಾ, ಪಿಗ್ ಚಿಲ್ಲಿ ಬಫತ್ ಹಾಗೂ ಚಿಕನ್ ಐಟಂ ಸೇರಿದಂತೆ ಹಲವು ಭಿನ್ನವಾದ ಫೂಡ್‌ಗಳು ಸಿಗುತ್ತವೆ. ಹೊಸ ಹೊಸ ಮಾದರಿಯ ಬಿಯರ್ ಇಲ್ಲಿ ನಿಮಗೆ ಸಿಗುತ್ತವೆ. ಇಲ್ಲಿ ಬಿಯರ್ ಬೆಲೆಯು ಪ್ರತಿ ಪಿಂಟ್‌ಗೆ 140 ರೂಪಾಯಿ ಇದೆ.
* ಪ್ಲಾನ್ ಬಿ: ಪ್ಲಾನ್ ಎ ಸಕ್ಸಸ್ ಆಗಿಲ್ಲ ಅಂತಾದರೆ ಪ್ಲಾನ್ ಬಿ ಎನ್ನುವುದು ಇದ್ದೇ ಇರುತ್ತೆ ಅಂತ ಹೇಳ್ತಾರಲ್ಲ ಅದೇ ತರ ಬೆಂಗಳೂರಲ್ಲಿ ಪ್ಲಾನ್ ಬಿ ಪಬ್ ಇದೆ. ಇಲ್ಲಿ ನಿಮಗೆ ಕಡಿಮೆ ಬೆಲೆಗೆ ಬಿಯರ್ ಸಿಗುತ್ತದೆ. ಬಾಯಿ ಚಪ್ಪರಿಸುವ ಚಿಕನ್ ವಿಂಗ್ಸ್, ಪೆರಿ ಪೆರಿ ಬೆಳ್ಳುಳ್ಳಿ ಹಾಗೂ ಚೀಸ್, ಚಿಕನ್ ಫ್ರೈ ಸಿಗುತ್ತವೆ. ಬಿಯರ್ ಮಗ್‌ನೊಂದಿಗೆ ಇಲ್ಲಿನ ಮೆನುವಿ ಐಟಂಗಳು ಸಖತ್ ಕಾಂಬಿನೇಷನ್ ಆಗಿವೆ. ಇನ್ನು ಇಲ್ಲಿ ಬಿಯರ್ ಬೆಲೆಯು 160 ರೂ. ಇದೆ.
* ಪೆಕೋಸ್: ಬೆಂಗಳೂರಿ ಐಕಾನಿಕ್ ಪಬ್‌ಗಳಲ್ಲಿ ಇದು ಒಂದಾಗಿದೆ. ಇದು ಬೆಂಗಳೂರಿನ ಅತ್ಯಂತ ಹಳೆಯ ಪಬ್‌ಗಳಲ್ಲಿ ಒಂದಾಗಿದೆ. ಈ ಪಬ್‌ನ ಗೋಡೆಗಳ ಮೇಲೆ ಆಕರ್ಷಕ ವಿನ್ಯಾಸಗಳು ಇವೆ. ಚಿಲ್ಲಿ ಚಿಕನ್, ಪೋರ್ಕ್ ಸೇರಿದಂತೆ ಹಲವು ಐಟಂಗಳು ಇಲ್ಲಿ ಸಿಗುತ್ತವೆ. ಇಲ್ಲಿ ಬಿಯರ್ ಬೆಲೆಯು 180 ರೂಪಾಯಿ ಇದೆ.
ಸೂಚನೆ: ಇಲ್ಲಿ ಕೊಟ್ಟಿರುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ನ ಬೆಲೆಗಳು ಇತ್ತೀಚಿನ ಬೆಲೆಗಳಾಗಿವೆ. ಹೊಸ ಬೆಲೆಗೆ ಅನುಗುಣವಾಗಿ ಪಬ್‌ಗಳು ಅಥವಾ ಬಾರ್‌ಗಳು ಬೆಲೆ ಪರಿಷ್ಕರಣೆ ಮಾಡಿರುವ ಸಾಧ್ಯತೆಯೂ ಇದೆ. ಆದರೆ, ಉಳಿದ ಪಬ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಹೋಲಿಕೆ ಮಾಡಿದರೆ ಕಡಿಮೆ ಹಾಗೂ ಬಜೆಟ್ ಫ್ರೆಂಡ್ಲಿ ಇರಲಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications