ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿಂದು 42 ಹೊಸ ಕೇಸ್ ಪತ್ತೆ, ಹಾಸನದಲ್ಲಿ 5 ಸೋಂಕು

|
Google Oneindia Kannada News

ಬೆಂಗಳೂರು, ಮೇ 12: ರಾಜ್ಯದಲ್ಲಿಂದು ಹೊಸದಾಗಿ 42 ಕೊರೊನಾ ಪ್ರಕರಣಗಳ ದಾಖಲಾಗಿದೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗಿನ ವರದಿ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.

42 ಕೇಸ್‌ಗಳ ಪೈಕಿ ಬಾಗಲಕೋಟೆ 15, ಧಾರವಾಡ 9 ಹಾಗೂ ಹಾಸನದಲ್ಲಿ 5 ಪ್ರಕರಣ ದಾಖಲಾಗಿದೆ. ಯಾದಗಿರಿ 2, ದಕ್ಷಿಣ ಕನ್ನಡ 2, ಬೀದರ್ 2 ಹಾಗೂ ಬೆಂಗಳೂರು ನಗರ 3 ಕೇಸ್ ಪತ್ತೆಯಾಗಿದೆ. ಇನ್ನು ಬಳ್ಳಾರಿ 1, ಚಿಕ್ಕಬಳ್ಳಾಪುರ 1, ಕಲಬುರಗಿ 1 ಹಾಗೂ ಮಂಡ್ಯದಲ್ಲಿ 1 ಪ್ರಕರಣ ವರದಿಯಾಗಿದೆ.

24 ಗಂಟೆಯಲ್ಲಿ 3604 ಕೇಸ್ ಪತ್ತೆ, ಟಾಪ್ ಐದು ರಾಜ್ಯಗಳ ವಿವರ24 ಗಂಟೆಯಲ್ಲಿ 3604 ಕೇಸ್ ಪತ್ತೆ, ಟಾಪ್ ಐದು ರಾಜ್ಯಗಳ ವಿವರ

ಈವರೆಗೂ 423 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 31 ಜನರು ಸೋಂಕಿನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

42 New Cases Of COVID19 Reported In Karnataka Today

ಹಾಸನ ಈವರೆಗೂ ಗ್ರೀನ್‌ಜೋನ್‌ನಲ್ಲಿದೆ. ಆದರೆ, ಇಂದು 5 ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಹಾಸನ ಜಿಲ್ಲೆಗೆ ಕೊವಿಡ್ ಪ್ರವೇಶ ಮಾಡಿದ್ದು, ಆತಂಕ ಹೆಚ್ಚಿಸಿದೆ. ಈ ಐವರು ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ.

ಕರ್ನಾಟಕದಲ್ಲಿ ಜಿಲ್ಲಾವಾರು ಅಂಕಿ ಅಂಶಗಳನ್ನು ನೋಡುವುದಾದರೆ 181 ಪ್ರಕರಣಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಬೆಳಗಾವಿ 113 ಕೇಸ್ ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಮೈಸೂರು 88 ಹೊಂದಿದ್ದು ಮೂರನೇ ಸ್ಥಾನದಲ್ಲಿದೆ.

English summary
42 new cases of COVID19 have been reported in Karnataka, taking the total number of positive cases to 904.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X