ಸುಮನಹಳ್ಳಿ-ಕೊಟ್ಟಿಗೆಪಾಳ್ಯ ರಸ್ತೆಗೆ ನಾಲ್ಕು ಪಥ ಸೇರ್ಪಡೆ

ಬೆಂಗಳೂರು, ಜೂನ್ 20 : ಸುಮನಹಳ್ಳಿ ಜಂಕ್ಷನ್ ಮತ್ತು ಕೊಟ್ಟಿಗೆಪಾಳ್ಯ ನಡುವೆ 8 ಪಥದ ರಸ್ತೆ ನಿರ್ಮಾಣವಾಗಲಿದೆ. ಬಿಬಿಎಂಪಿ ಈಗಿರುವ 4 ಪಥದ ರಸ್ತೆಗೆ ಇನ್ನೂ ನಾಲ್ಕು ಪಥವನ್ನು ಸೇರಿಸುತ್ತಿದೆ. ಸುಮಾರು 10 ಕೋಟಿ ರೂ.ಗಳ ಯೋಜನೆ ಇದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುಮನಹಳ್ಳಿ ಜಂಕ್ಷನ್ ಮತ್ತು ಕೊಟ್ಟಿಗೆಪಾಳ್ಯ ನಡುವಿನ ರಸ್ತೆಯನ್ನು 8 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲಿದೆ. ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಸಿಗ್ನಲ್ ಫ್ರೀ ರಸ್ತೆಯಾಗಲಿದೆ.

8 ಪಥದ ರಸ್ತೆ ನಿರ್ಮಾಣದಿಂದಾಗಿ ತುಮಕೂರು ರಸ್ತೆ, ನಾಗರಬಾವಿ, ಮಾಗಡಿ ಮುಂತಾದ ಕಡೆ ಸಾಗುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಈಗಿರುವ 80 ಪಥದ ರಸ್ತೆಗೆ ಇನ್ನೂ ನಾಲ್ಕು ಪಥವನ್ನು ಸೇರಿಸುವ ಕಾಮಗಾರಿಯನ್ನು ಬಿಬಿಎಂಪಿ ಕೈಗೊಳ್ಳಲಿದೆ.

4 lane will be added to Sumanahalli Junction-Kottigepalya road

ಸುಮಾರು 10 ಕೋಟಿ ರೂ.ಗಳ ಯೋಜನೆ ಇದಾಗಿದೆ. ಈಗಾಗಲೇ ಈ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅನುಮತಿಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಎರಡು ತಿಂಗಳಿನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದ್ದು, ಆರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+