ಬೆಂಗಳೂರಲ್ಲಿ 25 ದಿನಗಳ ಹಿಂದೆ ಅಪಹರಣವಾಗಿದ್ದ 3 ವರ್ಷದ ಬಾಲಕಿ ಪತ್ತೆ
ಬೆಂಗಳೂರು, ಅಕ್ಟೋಬರ್ 1: ಬೆಂಗಳೂರಿನಲ್ಲಿ 25 ದಿನಗಳ ಹಿಂದೆ ಅಪಹರಣವಾಗಿದ್ದ 3 ವರ್ಷದ ಬಾಲಕಿಯನ್ನು ತಮಿಳುನಾಡು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಐಸ್‌ಕ್ರೀಂ ಕೊಡಿಸುವುದಾಗಿ ಆಸೆ ತೋರಿಸಿ ವ್ಯಕ್ತಿ ಮೂರು ವರ್ಷ ಬಾಲಕಿ ಲೋಕಿತಾಳನ್ನು ಅಪಹರಿಸಿದ್ದ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕಾಲುಯಾಕ್ಕವಿಲೈ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಅಲ್ಲಿಗೆ ತೆರಳಿದ್ದು, ಬಾಲಕಿಯನ್ನು ಇಂದು ಕರೆ ತರುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಜೋಸೆಫ್ ಜಾನ್ ಎಂಬುವನನ್ನು ಬಂಧಿಸಿದ್ದಾರೆ. ಆದರೆ ಅಪಹರಣಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ, ತನಿಖೆ ಬಳಿಕ ಸತ್ಯ ಹೊರಬೀಳಲಿದೆ.












Click it and Unblock the Notifications