ಮಗಳನ್ನೇ ಅತ್ಯಾಚಾರಗೈದ ಧೂರ್ತ ತಂದೆಗೆ 20 ವರ್ಷ ಜೈಲು
ಬೆಂಗಳೂರು, ಸೆ.26: ಮಾನವೀಯತೆ ಹಾಗಿರಲಿ ಸ್ವಂತ ಮಗಳೆನ್ನುವುದನ್ನೂ ಮರೆತು ತನ್ನ 8 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿತ ಧೂರ್ತ ತಂದೆಗೆ 50 ವರ್ಷ ಜೈಲು ಹಾಗೂ 5 ಸಾವಿ ರೂ ದಂಡ ವಿಧಿಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಅನ್ವರ್ ಮುನ್ನ(30) ಆರೋಪಿ, ಪೇಂಟರ್ ಕೆಲಸ ಮಾಡುತ್ತಿದ್ದ ಅನ್ವರ್, ತನ್ನ ಪತ್ನಿ ಹಾಗೂ ಮಕ್ಕಳ ಜತೆ ಕೆಂಗೇರಿಯಲ್ಲಿ ವಾಸವಿದ್ದ, 2017ರ ಫೆ.13ರಂದು ಪತ್ನಿ ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ಮಗಳ ಮೇಲೆ ಪಾಪಿ ತಂದೆ ಅತ್ಯಾಚಾರವೆಸಗಿದ್ದ, ಈ ವಿಚಾರವನ್ನು ತಾಯಿಗೆ ತಿಳಿಸಿದರೆ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ ಆದರೆ ಮನೆಗೆ ಬಂದ ತಾಯಿಗೆ ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಳು.

ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಆರೋಪ ಸಾಬೀತಾಗಿದೆ, ಈ ಹಿನ್ನೆಲೆಯಲ್ಲಿ ಆರೋಪಿ ಅನ್ವರ್ ಮುನ್ನ ಅವರಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ.












Click it and Unblock the Notifications