ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿ ಡಾಕ್ಯುಮೆಂಟ್ ಕೇಳಬೇಡಿ: ಪೊಲೀಸರಿಗೆ ಸೂಚನೆ

ಬೆಂಗಳೂರು, ನವೆಂಬರ್ 6: ನಡುರಸ್ತೆಯಲ್ಲಿ ವಾಹನ ನಿಲ್ಲಿಸಿ ಡಾಕ್ಯುಮೆಂಟ್ ಕೇಳಬೇಡಿ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ಸೂಚನೆ ನೀಡಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಹಿರಿಯ ಅಧಿಕಾರಿ ಸೂಚನೆ ಹೊರತು, ವಾಹನ, ಚಾಲಕ, ಸವಾರರನ್ನು ದಾಖಲೆ ಪಡರಿಶೀಲಿಸಲು ತಡೆಯದಂತೆ ಸೂಚನೆ ನೀಡಿದ್ದಾರೆ.ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 16ಅಂಶಗಳ ಮಾರ್ಗಸೂಚಿಯನ್ನು ಹರಿಶೇಖರನ್ ನೀಡಿದ್ದಾರೆ.

ಕರ್ತವ್ಯದ ವೇಳೆ ಪೊಲೀಸರು ಸಮವಸ್ತ್ರದಲ್ಲಿ ಇರಬೇಕು, ಸಾದಾ ಉಡುಪಿನಲ್ಲಿ ಮತ್ತು ಠಾಣೆ, ಕಚೇರಿಯಲ್ಲಿ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರ ನಿರ್ವಹಣೆ ನಿರತ ಸಿಬ್ಬಂದಿ ಕಾಟಾಚಾರಕ್ಕೆ ಕೈ ತೋರಿಸುವುದು ಸರಿಯಲ್ಲ. ಶಿಸ್ತಿನಿಂದ ಹಾಗೂ ಕ್ರಮ ಬದ್ಧವಾಗಿ ಸೂಚನೆ ನೀಡಬೇಕು. ಕರ್ತವ್ ನಿರ್ವಹಣೆ ವೇಳೆ ಮೊಬೈಲ್ ಬಳಸಬಾರದು ಎಂದು ತಿಳಿಸಿದ್ದಾರೆ.

ಡ್ರಂಕ್ ಅಂಡ್ ಡ್ರೈವ್ ಸೇರಿ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಕೇಸ್ ಗಳಲ್ಲಿ ಡಿಎಲ್ ಅಮಾನತುಗೊಳಿಸಲು ಆರ್‌ಟಿಓ ಗೆ ರವಾನಿಸಿರುವ ಪೈಕಿ ಶೇ.2 ರಷ್ಟು ಮಾತ್ರ ಅಮಾನತು ಆಗುತ್ತಿದೆ. ಈ ಕುರಿತು ಆರ್‌ಟಿಒ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಕಡ್ಡಾಯ

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಕಡ್ಡಾಯ

ಸಿಗ್ನಲ್‌ಗಳು, ಜಂಕ್ಷನ್ ಗಳು, ಪಾಯಿಂಟ್ ಗಳಲ್ಲಿ ನಿಯೋಜನೆಗೊಂಡಿರುವ ಪೊಲೀಸರು ರಸ್ತೆಯಲ್ಲಿ ಸಾಗುವ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿ ಗೌರವಿಸಲೇಬೇಕು ಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹರಿಶೇಖರನ್ ಸೂಚಿಸಿದ್ದಾರೆ.

ತಳ್ಳುವ ಗಾಡಿ ತೆರವು ಮಾಡಲು ಬಿಬಿಎಂಪಿ ಅನುಮತಿ ಬೇಕು

ತಳ್ಳುವ ಗಾಡಿ ತೆರವು ಮಾಡಲು ಬಿಬಿಎಂಪಿ ಅನುಮತಿ ಬೇಕು

ತಳ್ಳುವ ಗಾಡಿ, ಫ್ಲೈಓವರ್ ಕೆಳಗೆ ನಿಂತಿರುವ ವಾಹನಗಳನ್ನು ತೆರವು ಮಾಡಲು ಕಡ್ಡಾಯವಾಗಿ ಬಿಬಿಎಂಪಿ ಅನುಮತಿಗಳನ್ನು ಪಡೆದುಕೊಳ್ಳಬೇಕು, ಹಬ್ಬಗಳಲ್ಲಿ ಮೆಜೆಸ್ಟಿಕ್, ಪೀಣ್ಯ, ಕೆಆರ್ ಮಾರುಕಟ್ಟೆ, ಕಲಾಸಿಪಾಳ್ಯ, ಯಶವಂತಪುರ, ಮೈಸೂರು ರಸ್ತೆ, ಮಾರುಕಟ್ಟೆಗಳಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಕರ್ತವ್ಯ ನಿರ್ವಹಿಸಬೇಕು.

ಬ್ಯಾರಿಕೇಡ್ ತೆರವುಗೊಳಿಸಿ

ಬ್ಯಾರಿಕೇಡ್ ತೆರವುಗೊಳಿಸಿ

ರಸ್ತೆ, ಫೂಟ್ ಪಾತ್, ರಸ್ತೆಬದಿ ಸೇರಿ ಎಲ್ಲೆಂದರಲ್ಲಿ ಬಿದ್ದಿರುವ ಬ್ಯಾರಿಕೇಡ್ ಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಕೆ ಮಾಡಿದ ಬಳಿಕ ತೆರವುಗೊಳಿಸಬೇಕು. ಮುಂದಿರುವ ಬೆಂಡಾಗಿರುವ ಬ್ಯಾರಿಕೇಡ್ ಗಳನ್ನು ಸರಿಪಡಿಸಲು ಕ್ರಮ ವಹಿಸಬೇಕು

ಕರ್ತವ್ಯದ ವೇಳೆ ಸಮವಸ್ತ್ರದಲ್ಲಿರಬೇಕು

ಕರ್ತವ್ಯದ ವೇಳೆ ಸಮವಸ್ತ್ರದಲ್ಲಿರಬೇಕು

ಕರ್ತವ್ಯದ ವೇಳೆ ಸಮವಸ್ತ್ರದಲ್ಲಿ ಇರಬೇಕುಮ ಸಾದಾ ಉಡುಪಿನಲ್ಲಿ ಮತ್ತು ಠಾಣೆ, ಕಚೇರಿಯಲ್ಲಿ ಇದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಂಚಾರ ನಿರ್ವಹಣೆ ನಿರತ ಸಿಬ್ಬಂದಿ ಕಾಟಚಾರಕ್ಕೆ ಕೈ ತೋರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+