ಬೆಂಗಳೂರಿನಲ್ಲಿ 8 ನೇ ಥಿಯೇಟರ್ ಒಲಂಪಿಕ್ಸ್! ಬನ್ನಿ ಪಾಲ್ಗೊಳ್ಳಿ

ಬೆಂಗಳೂರು, ಫೆಬ್ರವರಿ 19: ರಾಷ್ಟ್ರೀಯ ನಾಟಕ ಶಾಲೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರದಲ್ಲಿ ಸ್ನೇಹಧ್ವಜ ಎಂಬ ಥೀಮ್ ಕುರಿತು 8 ನೇ ಅಂತಾರಾಷ್ಟ್ರೀಯ ಥಿಯೇಟರ್ ಒಲಂಪಿಕ್ಸ್ ಆಯೋಜಿಸಿದೆ.

ಥಿಯೇಟರ್ ಒಲಂಪಿಕ್ಸ್ ಫೆಬ್ರವರಿ 20 ರಿಂದ ಮಾರ್ಚ್ 6 ರವರೆಗೆ ರವೀಂದ್ರ ಕಲಾಕ್ಷೇತ್ರ, ಕಲಾಗ್ರಾಮ ಸಮುಚ್ಛಯ ಹಾಗೂ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಈ ಜಾಗತಿಕ 24 ರಂಗ ಪ್ರದರ್ಶನಗಳಿಗೆ ಅತಿಥ್ಯ ವಹಿಸಿಕೊಂಡು ಜನಗಳಿಗೆ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಂಗ ಪ್ರಯೋಗಗಳನ್ನು ವೀಕ್ಷಿಸಲು ಒಂದು ಅವಕಾಶವಾಗಿದೆ.

ಥಿಯೇಟರ್ ಒಲೀಂಪಿಕ್ಸ್ ನ್ನು 1993ರಲ್ಲಿ ಗ್ರೀಸ್ ದೇಶದ ಡೆಲ್ಫಿ ಎಂಬಲ್ಲಿ ಸ್ಥಾಪಿಸಲಾಯಿತು. ಅಂತಾರಾಷ್ಟ್ರೀಯ ರಂಗೋತ್ಸವವಾಗಿ ಥಿಯೇಟರ್ ಒಲಂಪಿಕ್ಸ್ ಜಗತ್ತಿನೆಲ್ಲೆಡೆಯಿಂದ ಹಲವಾರು ಶ್ರೇಷ್ಠ ರಂಗಕರ್ಮಿಗಳನ್ನು ಪರಿಷಯಿಸುತ್ತದೆ. ಇದು ರಂಗ ವಿನಿಮಗಳಿಗೊಂದು ವೇದಿಕೆಯಾಗಿದೆ.

15 days Theatre Olympic in Bengaluru from Feb 20

ಈ ಜಾತಿಕ ರಂಗೋತ್ಸವ ಎಂಟನೆಯ ಆವೃತ್ತಿಯ ಅತಿಥ್ಯವನ್ನು ಭಾರತದ 17 ನಗರಗಳು ವಹಿಸಲಿದ್ದು, 450 ಪ್ರದರ್ಶನಗಳು, 600 ಸಹ ಪ್ರದರ್ಶನಗಳು, 400 ಯುವ ವೇದಿಕೆ ಪ್ರದರ್ಶನಗಳು ನಡೆಯಲಿದ್ದು, 60 ರಂಗದಿಗ್ಗಜರೊಂದಿಗೆ ಸಂವಾದ, 60 ಪ್ರಖ್ಯಾತ ರಂಗತಜ್ಞರಿಂದ ಕಾರ್ಯಗಾರ. ಜಗತ್ತಿನಾದ್ಯಂತದಿಂದ ಬರುವ ಸುಮಾರು 25,000 ಕಲಾವಿದರು ಪಾಲ್ಗೊಳ್ಳಲಿದ್ದು, ಇದು ವಿಶ್ವದಲ್ಲೇ ಅತ್ಯಂತ ವೈಭವದ ಸಾಂಸ್ಕೃತಿಕ ರಂಗ ಸಂಭ್ರಮವನ್ನಾಗಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+