ತಾಯಿ, ತಮ್ಮನನ್ನು ಕೊಲ್ಲುವುದಾಗಿ ಹೇಳಿ ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರ
ಬೆಂಗಳೂರು, ಡಿಸೆಂಬರ್ 18: ತಾಯಿ, ತಮ್ಮನನ್ನು ಕೊಲ್ಲುವುದಾಗಿ ಹೆದರಿಸಿ ಬಾಲಕಿಯನ್ನು ಶೆಡ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಅಮಾನವೀಯ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ನಡೆದಿದೆ.
ಖಾಸಗಿ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ 13 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಬಾಲಕಿ ನೆರವಿಗಾಗಿ ಕಿರುಚಿಕೊಂಡಾಗ ಸ್ಥಳೀಯರು ಶೆಡ್‌ನ ಬಾಗಿಲು ಒಡೆದು ಒಳಗೆ ನುಗ್ಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಆರೋಪಿಯೊಬ್ಬನನ್ನು ಬಾಲಕಿಯ ಸಂಬಂಧಿ ಮತ್ತು ಸಾರ್ವಜನಿಕರು ಮೂಡಲಪಾಳ್ಯದಲ್ಲಿ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಡಿಸೆಂಬರ್ 15ರಂದು ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮನೆಗೆ ಮರಳಿದ ಬಾಲಕಿ, ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆ ಸಮೀಪದ ಜೆರಾಕ್ಸ್ ಅಂಗಡಿಗೆ ನೋಟ್ಸ್‌ಜೆರಾಕ್ಸ್ ಮಾಡಿಸಲು ಹೋಗಿದ್ದರು.
ಅಲ್ಲಿಂದ ವಾಪಸ್ ಬರುವ ವೇಳೆ ನವೀನ್ ಕುಮಾರ್ (19) ಹಾಗೂ ಆತನ ಸ್ನೇಹಿತರು ಅಡ್ಡಗಟ್ಟಿದ್ದರು. ಬಳಿಕ ತಮ್ಮೊಂದಿಗೆ ಬರುವಂತೆ ಬೆದರಿಸಿದ್ದರು. ಆಕೆ ಒಪ್ಪದಿದ್ದಾಗ ತಾಯಿ ಮತ್ತು ಕಿರಿಯ ಸಹೋದರರನ್ನು ಹೆದರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಕೊನೆಗೆ ಪೊಲೀರೊಂದಿಗೆ ಠಾಣೆಗೆ ದೂರು ನೀಡಿದರು.
ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಆರೋಪಿಯ ಸ್ನೇಹಿತರನ್ನು ಪತ್ತೆ ಹಚ್ಚಿ ಅವರ ಮೂಲಕ ನವೀನನ್ನು ಸೆರೆ ಹಿಡಿಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications