ಪದೇಪದೇ ಕರೆಂಟು ತೆಗೆಯುವ ಬೆಸ್ಕಾಂನಲ್ಲಿ ಬಾಕಿ ಇರುವ ದೂರುಗಳೆಷ್ಟು?
ಬೆಂಗಳೂರು, ಫೆಬ್ರವರಿ 19: ದಿನಬೆಳಗಾಗುವುದೇ ಬೆಸ್ಕಾಂಗೆ ಬೈಯ್ಯುವುದರ ಜೊತೆಗೆ, ಎಷ್ಟು ದೂರು ನೀಡಿ ನೀಡಿ ಸುಸ್ತಾಯ್ತು ಆದ್ರೆ ಐದೈದು ನಿಮಿಷಕ್ಕೊಮ್ಮೆ ಕರೆಂಟು ಹೋಗುವುದು ಮಾತ್ರ ತಪ್ಪಿಲ್ಲ ಎಂದು.
ವಿದ್ಯುತ್ ವಿತರಣೆಯಲ್ಲಿ ಆಗುತ್ತಿರುವ ತೊಂದರೆ ಕುರಿತು ಬಂದಿರುವ ದೂರುಗಳ ಪೈಕಿ 1209 ದೂರುಗಳು ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿದೆ ಎಂದು ಬೆಸ್ಕಾಂ ಹೇಳಿಕೊಂಡಿದೆ.
Pending complaints details category wise of 18-02-2019. @NammaBESCOM pic.twitter.com/iCPhIy1eEO
— AE to MD BESCOM (@BescomTa) February 19, 2019
ಪವರ್ ಕಟ್ ಇಲ್ಲ ಎಂದು ಹೇಳುತ್ತಾರೆ ಆದರೆ ಕರೆಂಟು ಹೋಗುವುದು ಮಾತ್ರ ತಪ್ಪುವುದಿಲ್ಲ, ಐದು ನಿಮಿಷ ಕರೆಂಟ್ ಇದ್ದರೆ ಇನ್ನೈದು ಕಾಲು ಗಂಟೆ ಕರೆಂಟ್ ಇಲ್ಲದೆ ಬೆಂಗಳೂರಿನ ಜನತೆ ಒದ್ದಾಡುವಂತಾಗಿದೆ.

ಹಾಗಾದರೆ ಯಾವ್ಯಾವ ದೂರುಗಳು ಇನ್ನೂ ಇತ್ಯರ್ಥವಾಗದೆ ಹಾಗೆಯೇ ಉಳಿದಿದೆ ಎಂದು ನೋಡೋಣ, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕುರಿತು 1209 ದೂರುಗಳಿದ್ದರೆ, ವೋಲ್ಟೇಜ್ ಕುರಿತ ದೂರುಗಳು 16, ಮೀಟರ್ ಕುರಿತ ದೂರು 1, ಬಿಲ್ಲಿಂಗ್ ಕುರಿತು 160, ಸೇಫ್ಟಿ ಕುರಿತು 36, ಟಿಸಿ ಕುರಿತ ದೂರು-3, ಕರೆಂಟು ಕದ್ದು ಬಳಕೆ ಮಾಡುವುದು-4, ಸಿಬ್ಬಂದಿ ಮೇಲೆ ದೂರು-1, ರಿಫಂಡ್, ಸರ್ಟಿಫೀಕೇಟ್ ನೀಡುವುದು 3 ದೂರುಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ.












Click it and Unblock the Notifications