E-khata Updates: ಬೆಂಗಳೂರಿನಲ್ಲಿ ಇ - ಖಾತಾ ಸಮಸ್ಯೆ ತಪ್ಪಿಸಲು ಹೊಸ ಪ್ಲ್ಯಾನ್!

ಬೆಂಗಳೂರಿನಲ್ಲಿ ಆಸ್ತಿದಾರರ ಗೊಂದಲವನ್ನು ಪರಿಹರಿಸುವುದಕ್ಕೆ ಕೊನೆಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ, ಇ - ಖಾತಾದಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದು ಇದೀಗ ಆಸ್ತಿದಾರರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೂ ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಲ್ಲಿ ಅಂದಾಜು 24 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಇವೆ. ಆದರೆ, ಇಲ್ಲಿಯ ವರೆಗೆ ಬಿಬಿಎಂಪಿಯು ಕೇವಲ 1.6 ಲಕ್ಷ ಆಸ್ತಿಗಳಿಗೆ ಮಾತ್ರ ಇ - ಖಾತಾ ನೀಡಲಾಗಿದೆ. ಹೀಗಾಗಿ ಎಲ್ಲಾ ಆಸ್ತಿಗಳಿಗೂ ಇ - ಖಾತಾ ನೀಡುವ ವ್ಯವಸ್ಥೆ ಮಾಡುವುದಕ್ಕೆ ಮಹತ್ವದ ಕ್ರಮವೊಂದನ್ನು ಬಿಬಿಎಂಪಿ ತೆಗೆದುಕೊಂಡಿದೆ.

ನಗರದಲ್ಲಿ ಆಸ್ತಿದಾರರಿಗೆ ಕೊನೆಗೂ ಇ - ಖಾತಾ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮುಂದಾಗಿದ್ದು. ಇದು ಆಸ್ತಿದಾರರ ತುಸು ನಿರಾಳವಾಗುವಂತಾಗಿದೆ. ಆದರೆ ಇದು ಯಾವ ಮಟ್ಟಕ್ಕೆ ವರ್ಕ್‌ ಆಗಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ನಗರದಲ್ಲಿ ಆಸ್ತಿಗಳಲ್ಲಿನ ಗೊಂದಲ ಹಾಗೂ ಆಸ್ತಿ ಮೋಸ ತಪ್ಪಿಸುವುದು ಮತ್ತು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವವರನ್ನು ಆಸ್ತಿ ವ್ಯಾಪ್ತಿಗೆ ಸೇರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಈ ಯೋಜನೆಯನ್ನು ಪ್ರಾರಂಭಿಸುವ ಮುನ್ನ ಆಸ್ತಿಗಳ ಡಿಜಿಟಲೀಕರಣವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ ಇದು ಸಹ ಸಮಸ್ಯೆಗೆ ಕಾರಣವಾಗಿದೆ.

1000 kiosks in Bengaluru Bbmp New Plan to Avoid E-khata Confusion

ಬೆಂಗಳೂರಿನಲ್ಲಿ 24 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಇವೆ. ಇದರಲ್ಲಿ ಕೇವಲ 1.6 ಲಕ್ಷ ಆಸ್ತಿಗಳ ಆಸ್ತಿ ಮಾಲೀಕರಿಗೆ ಮಾತ್ರ ಇಲ್ಲಿಯ ವರೆಗೆ ಇ - ಖಾತಾ ನೀಡಲಾಗಿದೆ. ಇ - ಖಾತಾಗೆ ಸಂಬಂಧಿಸಿದಂತೆ ಇನ್ನೂ ಬರೋಬ್ಬರಿ 1.4 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಸಾವಿರಾರು ಇ - ಖಾತಾ ಅರ್ಜಿಗಳ ಬಾಕಿ ಹಾಗೂ ಹೊಸ ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕೆ ಬಿಬಿಎಂಪಿಯು ಬೆಂಗಳೂರಿನಾದ್ಯಂತ 1,000 ಇ - ಖಾತಾ ಕಿಯೋಸ್ಕ್‌ಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದೆ. ಈ ಕಿಯೋಸ್ಕ್‌ಗಳ ಮೂಲಕ ಜನ / ಆಸ್ತಿದಾರರು ಸುಲಭವಾಗಿ ಇ - ಖಾತಾ ಪಡೆದುಕೊಳ್ಳಬಹುದಾಗಿದೆ.

ಬಿಬಿಎಂಪಿಯು ಈಗ ಬೆಂಗಳೂರಿನಲ್ಲಿ ಒಂದು ಸಾವಿರ ಇ -ಖಾತಾ ಕಿಯೋಸ್ಕ್‌ಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದೆ. ಬಿಬಿಎಂಪಿಯು ಇದೀಗ ನಗರದಾದ್ಯಂತ ಇ -ಖಾತಾ ಮೇಳಗಳನ್ನು ಆಯೋಜಿಸುತ್ತಿದೆ. ಇದಕ್ಕೆ ಸಂಘ - ಸಂಸ್ಥೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಸಹಕಾರವನ್ನು ಸಹ ಪಡೆದುಕೊಳ್ಳಲಾಗುತ್ತಿದೆ. ಹೀಗಾಗಿ ಇ ಖಾತಾ ಮೇಳ ಹಾಗೂ ಕಿಯೋಸ್ಕ್‌ಗಳಿಂದ ಇ - ಖಾತಾ ಸಮಸ್ಯೆ ಪರಿಹಾರವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಇ - ಖಾತಾ ಕಿಯೋಸ್ಕ್‌ಗೆ ಸಾರ್ವಜನಿಕರು ಮುಂದೆ ಬರಬಹುದು ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಬಿಬಿಎಂಪಿ ಕಿಯೋಸ್ಕ್‌ಗಳನ್ನು ಸ್ಥಾಪಿಸುತ್ತದೆ ಹಾಗೂ ಇದಕ್ಕೆ ಬೇಕಾದ ತಂತ್ರಜ್ಞಾನ ಸೇವೆಯನ್ನು ಸಹಕಾರ ನೀಡಲಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದರು.

ಅಲ್ಲದೆ ಎನ್‌ಜಿಒಗಳು ದಾಖಲೆಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಲಾಗಿನ್ ಐಡಿಗಳನ್ನು ಸಹ ನೀಡಲಾಗುವುದು. ಅಲ್ಲದೆ ಬಿಬಿಎಂಪಿ ಸರ್ವರ್‌ಗಳನ್ನು ಮಾತ್ರ ಬಳಸಬಹುದು ಹಾಗೂ ಇದಕ್ಕೆ ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+