ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 10 ವರ್ಷ ಜೈಲು

ಬೆಂಗಳೂರು, ಏ.26: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸಿಸಿಎಚ್-55 ನ್ಯಾಯಾಲಯ ತೀರ್ಪು ನೀಡಿದೆ.

ಹದಿನೇಳು ವರ್ಷದ ಬಾಲಕಿಯನ್ನು ಅಪಹರಿಸಿ 26 ವರ್ಷದ ಅರುಣ್ ಎಂಬಾತ ಅತ್ಯಾಚಾರವೆಸಗಿದ್ದ.ಸಂತ್ರಸ್ತ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ನಂಬಿಸಿದ್ದ, ತುಮಕೂರು ಮೂಲದ ಅರುಣ್ 2014ರ ಅ. 20ರಂದು ಪಾಲಕರ ಮತ್ತು ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಯಿಂದ ಕರೆದುಕೊಂಡು ಹೋಗಿ ಎರಡು ಬಾರಿ ಅತ್ಯಾಚಾರವೆಸಗಿದ್ದ.

ಬಳಿಕ ಬಾಲಕಿಯನ್ನು ಪುಸಲಾಯಿಸಿ ಬಾಲಕಿಯ ಮನೆಯಿಂದಲೇ 2 ಲಕ್ಷ ರೂ ನಗದು ಮತ್ತು ಆಭರಸಣದೊಂದಿಗೆ ಕರೆದೊಯ್ದು ಮಾಡಿಗೆ ಮನೆ ಮಾಡಿಕೊಂಡು ಮತ್ತೆ ಅತ್ಯಾಚಾರವಸಗಿದ್ದ.

10 year jail for raping minor in Bengaluru

ಬಾಲಕಿ ಅಪಹರಣದ ಕುರಿತು ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಅರುಣ್‌ನನ್ನು ಬಂಧಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಕೂಡ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+