ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಲು ಜಾರಕಿಹೊಳಿ ಅಡ್ಡಗಾಲು?

By Mahesh
|
Google Oneindia Kannada News

Recommended Video

ಲಕ್ಷ್ಮಿ ಹೆಬ್ಬಾಳ್ಕರ್ ರವರ ಮಂತ್ರಿಯಾಗುವ ಕನಸಿಗೆ ಅಡ್ಡಗಾಲು ಹಾಕಿದ್ದಾರೆ ಇವರು | Oneindia Kannada

ಬೆಳಗಾವಿ, ಮೇ 21: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಗೂ ಮುನ್ನವೇ ಮಂತ್ರಿಗಿರಿಗಾಗಿ ಲಾಬಿ ಜೋರಾಗಿದೆ. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಗೆದ್ದಿರುವ ಮೂವರು ಮಹಿಳೆಯರ ಪೈಕಿ ಒಬ್ಬರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಚಿವೆಯಾಗಲು ಉತ್ಸುಕರಾಗಿದ್ದಾರೆ. ಆದರೆ, ಲಕ್ಷ್ಮೀ ಅವರು ಸಂಪುಟ ಸೇರದಿರುವಂತೆ ಮಾಡಲು ಸತೀಶ್ ಜಾರಕಿಹೊಳಿ ತಂಡ ಸಜ್ಜಾಗಿದೆ ಎಂಬ ಸುದ್ದಿ ಬಂದಿದೆ.

ಕರ್ನಾಟಕ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಒಂದು ಕಡೆ ಲಾಬಿ ಜೋರಾಗಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನ ತಪ್ಪಿಸಲು ಮತ್ತೊಂದು ತಂಡ ಕಾರ್ಯಾಚರಣೆ ಆರಂಭಿಸಿದೆ.

Lakshmi Hebbalkar

ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಲಿಂಗಾಯತ ಹಾಗೂ ಮಹಿಳಾ ಕೋಟಾದಡಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಅವರ ಬದಲಿಗೆ ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಅಥವಾ ಕೆಎಚ್ ಮುನಿಯಪ್ಪ ಅವರ ಪುತ್ರಿ ರೂಪಕಲಾ ಶಶಿಧರ್ ಗೆ ಸಚಿವ ಸ್ಥಾನ ನೀಡಲು ಎಂದು ಕೂಗೆದ್ದಿದೆ.

ಲಕ್ಷ್ಮಿ ಹೆಬ್ಬಾಳ್ಕರ್‌ ಅಥವಾ ಅಂಜಲಿ ನಿಂಬಾಳ್ಕರ್‌, ಯಾರಿಗೊಲಿಯಲಿದೆ ಸಚಿವೆ ಪಟ್ಟ?ಲಕ್ಷ್ಮಿ ಹೆಬ್ಬಾಳ್ಕರ್‌ ಅಥವಾ ಅಂಜಲಿ ನಿಂಬಾಳ್ಕರ್‌, ಯಾರಿಗೊಲಿಯಲಿದೆ ಸಚಿವೆ ಪಟ್ಟ?

ಇದಲ್ಲದೆ, ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಸತೀಶ್ ಜಾರಕಿಹೊಳಿ ಅವರಿಗೆ ವಹಿಸಲಿ, ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗೆ ಜಾರಕಿಹೊಳಿ ಸೋದರರು ಶ್ರಮಿಸಿದ್ದಾರೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದಲ್ಲದೆ, ಜಿಲ್ಲೆಯ ಬೈಲಹೊಂಗಲದ ಮಹಾಂತೇಶ್ ಕೌಜಲಗಿ, ಚಿಕ್ಕೋಡಿಯ ಗಣೇಶ್ ಹುಕ್ಕೇರಿ, ಅಥಣಿಯ ಮಹೇಶ್ ಕುಮಠಳ್ಳಿ ಕೂಡಾ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಜಾರಕಿಹೊಳಿ ಕುಟುಂಬದಿಂದ ರಮೇಶ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು, ಸತೀಶ್ ಅವರಿಗೆ ಕೇಂದ್ರ ಮಟ್ಟದ ಉನ್ನತ ಹುದ್ದೆಯಲ್ಲಿ ಮುಂದುವರೆಯಲು ಸೂಚಿಸುವ ಸಾಧ್ಯತೆಯಿದೆ.

English summary
KPCC women wing President Lakshmi Ravindra Hebbalkar is eager to join HD Kumraswamy's Congress- JDS coalition cabinet. But, Satish Jarkiholi team is opposing Lakshmi's entry and district in charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X