ಕಾಣೆಯಾಗಿದ್ದ ಬಾಲಕಿ ಪಕ್ಕದ ಮನೆಯ ಕಪಾಟಿನಲ್ಲಿ ಶವವಾಗಿ ಪತ್ತೆ
ಬೆಳಗಾವಿ, ನವೆಂಬರ್ 26: ನಾಪತ್ತೆಯಾಗಿದ್ದ ಬಾಲಕಿ ಪಕ್ಕದ ಮನೆಯ ಕಪಾಟಿನಲ್ಲಿ ಪತ್ತೆಯಾಗಿದ್ದಾಳೆ.
ಆಕೆಯ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ. ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಯಾಕಿಷ್ಟು ದ್ವೇಷವಿತ್ತು ಎಂಬುದು ಬೆಳಕಿಗೆ ಬರಬೇಕಿದೆ.
ಮನೆ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿಪ್ಪಾಣಿ ಹೊರವಲಯದ ಕೋಡಣಿ ಗ್ರಾಮದಲ್ಲಿ ಇಂತಹದೊಂದು ಭಯಾನಕ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಶುಕ್ರವಾರ ಆಟವಾಡಲು ತೆರಳಿದ್ದ ಮಗು ಮನೆಗೆ ಬಾರದಿರುವುದರಿಂದ ಆತಂಕಗೊಂಡ ತಂದೆ, ತಾಯಿ ಹಾಗೂ ಗ್ರಾಮದ ಜನ ಹುಡುಕಾಟ ನಡೆಸಿದ್ದರು. ಆದರೆ ಗ್ರಾಮದಲ್ಲೆಲ್ಲೂ ಕಾಣದ ಹಿನ್ನೆಲೆಯಲ್ಲಿ ಬಾಲಕಿ ತಂದೆ ಬಸವೇಶ್ವರ ಕಲ್ಲಪ್ಪಾ ಮಾನೆ ತಡರಾತ್ರಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದರು.
ನಾಲ್ಕು ವರ್ಷದ ಶ್ರೇಯಾ ಮಾನೆ ಕೊಲೆಯಾಗಿದ್ದು, ಬಾಲಕಿ ಸಂಬಂಧಿ ಕುಮಾರ ರಾನೋಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮಧ್ಯೆ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಾಲಕಿ ಶವ ಕುಮಾರ ರಾನೋಜಿ ಮನೆಯ ಕಪಾಟಿನಲ್ಲಿ ಪತ್ತೆಯಾಗಿದೆ.












Click it and Unblock the Notifications