ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸವದತ್ತಿ ಯಲ್ಲಮ್ಮ ಭಕ್ತರಿಗೆ ಸಿಹಿಸುದ್ದಿ ಕೊಟ್ಟ ಜಿಲ್ಲಾಡಳಿತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 31; ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಅವಕಾಶ ನೀಡಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇವಾಲಯಕ್ಕೆ ಭಕ್ತರ ಭೇಟಿ ನಿಷೇಧಿಸಲಾಗಿತ್ತು.

ಫೆಬ್ರವರಿ 1ರ ಸೋಮವಾರದಿಂದ ಭಕ್ತರು ಸವದತ್ತಿ ಯಲ್ಲಮ್ಮ ದೇವಿ ದರ್ಶನವನ್ನು ಪಡೆಯಬಹುದಾಗಿದೆ. ಕಳೆದ 10 ತಿಂಗಳ ಬಳಿಕ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ.

ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ

ಬೆಳಗಾವಿ ಜಿಲ್ಲೆಯ ಸವದತ್ತಿ ಹೊರವಲಯದ ಯಲ್ಲಮ್ಮನ ಗುಡ್ಡದಲ್ಲಿರುವ ದೇವಾಲಯವನ್ನು ಭಕ್ತಾದಿಗಳಿಗೆ ತೆರೆಯುವ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಆದರೆ, ಕೆಲವು ಮಾರ್ಗದರ್ಶಿಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಪ್ರಸಿದ್ಧ ಚಿಕ್ಕತಿರುಪತಿ ದೇವಾಲಯ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?ಪ್ರಸಿದ್ಧ ಚಿಕ್ಕತಿರುಪತಿ ದೇವಾಲಯ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?

Devotees Allowed For Savadatti Yellamma Temple From February 1

ಯಲ್ಲಮ್ಮ ದೇವಿ ದರ್ಶನಕ್ಕೆ ಫೆಬ್ರವರಿಯ ಭರತ ಹುಣ್ಣಿಮೆಯಂದು ಲಕ್ಷಾಂತರ ಜನರು ಆಗಮಿಸುತ್ತಾರೆ. ಆದ್ದರಿಂದ, ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ದರ್ಶನ ಪಡೆಯುವಂತೆ ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮನವಿ ಮಾಡಿದ್ದಾರೆ.

ಸತತ 9 ತಿಂಗಳ ಬಳಿಕ ಬಾಗಿಲು ತೆರೆದ ಪುರಿ ಜಗನ್ನಾಥ ದೇವಾಲಯ ಸತತ 9 ತಿಂಗಳ ಬಳಿಕ ಬಾಗಿಲು ತೆರೆದ ಪುರಿ ಜಗನ್ನಾಥ ದೇವಾಲಯ

ಸೂಚನೆಗಳು

  • ಶ್ರೀ ದೇವಿಯ ದರ್ಶನಕ್ಕೆ 1/2/2021ರಿಂದ ಅವಕಾಶವನ್ನು ನೀಡಲಾಗಿದೆ.
  • ವಿಶೇಷ ಜನಸಂದಣಿ ಸೇರುವಂತಹ ವಿಶೇಷ ಉತ್ಸವ, ಜಾತ್ರೆ, ಕಾರ್ಯಕ್ರಮಗಳನ್ನು ಮುಂದಿನ ಆದೇಶದ ತನಕ ನಡೆಸುವಂತಿಲ್ಲ.
  • ಶ್ರೀ ದೇವಿ ದರ್ಶನಕ್ಕೆ ಆಗಮಿಸುವ ಜನರು ಸರತಿ ಸಾಲಿನಲ್ಲಿ ಆಗಮಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು.
  • ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ಬಳಕೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು.
  • ದೇವಾಲಯದ ಹೊರಭಾಗದಲ್ಲಿ ಜನರ/ಭಕ್ತಾದಿಗಳ ದೇಹದ ಉಷ್ಣಾಂಶ ಪರಿಶೀಲಿಸಿ, ದೇಹದ ಉಷ್ಣಾಂಶ ಸುಸ್ಥಿತಿಯಲ್ಲಿ ಇರುವವರಿಗೆ ಮಾತ್ರ ಪ್ರವೇಶ ನೀಡಬೇಕು.
  • ಪ್ರತಿನಿತ್ಯ ಭಕ್ತಾದಿಗಳ ಜನಜಂಗುಳಿಗೆ ಅವಕಾಶವನ್ನು ನೀಡಬಾರದು
  • ದೇವಾಲಯದ ಆವರಣದಲ್ಲಿ ಯಾವುದೇ ರೀತಿಯ ವಾಣಿಜ್ಯ ಸಂಕೀರ್ಣಗಳನ್ನು ಹಾಗೂ ಅಂಗಡಿ ಮುಂಗಟ್ಟುಗಳನ್ನು ಆರಂಭಿಸುವಂತಿಲ್ಲ.
  • ದೇವಾಲಯದ ಯಾತ್ರಿ ನಿವಾಸ, ಅತಿಥಿ ಗೃಹ, ಕಲ್ಯಾಣ ಮಂಟಪ ಹಾಗೂ ವಸತಿ ಸಂಕೀರ್ಣಗಳನ್ನು ಮುಂದಿನ ಆದೇಶದ ತನಕ ಭಕ್ತಾದಿಗಳಿಗೆ ಒದಗಿಸಬಾರದು.
  • ದೇವಾಲಯ ಬಾಗಿಲು ತೆರೆದ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಹೊಸ ಷರತ್ತುಗಳನ್ನು ವಿಧಿಸಲಾಗುತ್ತದೆ.
English summary
Belagavi district administration allowed people to visit Sri Renuka Yellamma temple of Savadatti from February 1, 2021. Temple closed for devotes after the announcement of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X