ಬೆಳಗಾವಿ ಉಪ ಚುನಾವಣೆ: ಕೊನೆ ಹಂತದಲ್ಲಿ ಗೆದ್ದು ಬೀಗಿದ ಮಂಗಲ ಅಂಗಡಿ
ಬೆಲಗಾವಿ, ಮೇ 2: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ರೋಚಕ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ ಗೆಲುವು ಸಾಧಿಸಿದ್ದಾರೆ.
ಪ್ರತಿ ಸುತ್ತಿನಲ್ಲೂ ಹಾವು-ಏಣಿ ಆಟದಂತಿದ್ದ ಬೆಳಗಾವಿ ಕ್ಷೇತ್ರದ ಮತ ಎಣಿಕೆ ಹಂತಿಮ ಹಂತದವರೆಗೂ ಗೆಲುವಿನ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದರೆ, ನಂತರ ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ ಮುನ್ನಡೆ ಸಾಧಿಸಿದ್ದರು.

ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಸಲಾಗಿತ್ತು. ರೋಚಕ ಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಮಂಗಲ ಸುರೇಶ್ ಅಂಗಡಿ ಸೋಲಿಸಿದ್ದಾರೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಮುಂದುವರೆದು ಕಾಂಗ್ರೆಸ್ ಪಕ್ಷಕ್ಕೆ ವಿರೋಚಿತ ಸೋಲು ಉಂಟಾಗಿದೆ. ಅಂತಿಮ ಹಂತದಲ್ಲಿ ಬಿಜೆಪಿಯ ಅಭ್ಯರ್ಥಿ ಮಂಗಲ ಅಂಗಡಿ ಮುನ್ನಡೆ ಕಾಯ್ದುಕೊಂಡು, ಸುಮಾರು 2903 ಮತಗಳಿಂದ ಸತೀಶ್ ಜಾರಕಿಹೊಳಿ ವಿರುದ್ಧ ಮಂಗಲ ಅಂಗಡಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 4,35,202 ಮತಗಳು ಸಿಕ್ಕಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 4,32,299 ಮತಗಳು ದೊರಕಿದೆ.
ಬೆಳಗಾವಿಯಲ್ಲಿ 10,563 ನೋಟಾ ಮತಗಳು ಬಿದ್ದಿರುವುದು, ಬಿಜೆಪಿ ಗೆಲುವಿನ ಅಂತರದ ಮೂರು ಪಟ್ಟಾಗಿದೆ.












Click it and Unblock the Notifications