ಸಂಕ್ರಾಂತಿಗಾಗಿ ರಾಮಚಂದ್ರಾಪುರ ಮಠದ ವಿಶೇಷ ಕಾರ್ಯಕ್ರಮಗಳು

Posted By:
Subscribe to Oneindia Kannada

ಬೆಂಗಳೂರು, ಜ 13: ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ, ದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಜಗತ್ತಿನ ಬೆನ್ನೆಲುಬಾದ ಭಾರತೀಯ ಗೋವಿನ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಮತ್ತೊಂದು ಸಮಾಜಮುಖಿ ಅಭಿಯಾನಕ್ಕೆ ಮುಂದಾಗಿದ್ದಾರೆ.

ಭಾರತೀಯ ಗೋವಂಶದ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಮತ್ತು ಸಂಭೋದನೆಗಳೆಂಬ ಮಹತ್ತರವಾದ ಆಶಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ‘ಕಾಮದುಘಾ' ಸಮಿತಿ, ತನ್ನ ವಾರ್ಷಿಕ ದಿನವನ್ನು ಇದೇ ದಿನಾಂಕ ಜನವರಿ ಹದಿನೈದರಂದು ಮಕರಸಂಕ್ರಾಂತಿಯ ಸಂದರ್ಭದಲ್ಲಿ ‘ಗೋಮಹೋತ್ಸವ'ವಾಗಿ ಆಚರಿಸಿಕೊಳ್ಳುತ್ತಿದೆ. (ರಾಘವೇಶ್ವರ ವಿರುದ್ದ ಆರೋಪ: ಪ್ರಕರಣದ ಹಿಂದಿನ ಸಂಚು)

ಜನವರಿ 15ರಂದು ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕ ಜಗತ್ತಿನ ಜೀವನಾಡಿಯಾದ ಗೋವುಗಳ ಪ್ರಾಮುಖ್ಯತೆಯನ್ನು ಜನಮಾನಸಕ್ಕೆ ಸಾರಿಹೇಳುವ ದಿಶೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಮಿತಿ ಆಯೋಜಿಸಿದೆ.

ಅದರಲ್ಲಿ ಪ್ರಮುಖವಾಗಿ ವೈವಿಧ್ಯಮಯವಾದ ಭಾರತೀಯ ಗೋವುಗಳ ಪ್ರದರ್ಶನ, ಗೋವುಗಳಿಗೆ ಸಂಬಂಧಿಸಿದ ಪಾರಂಪರಿಕ ವಿವಿಧ ಅಮೂಲ್ಯ ವಸ್ತುಗಳ ಪ್ರದರ್ಶನ, ವೈವಿಧ್ಯಮಯ ನಿತ್ಯೋಪಯೋಗಿ ಗೋ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಶುದ್ಧ ಭಾರತೀಯ ತಳಿಯ ಗೋವುಗಳ ಹಾಲು, ತುಪ್ಪ, ಮಜ್ಜಿಗೆ ಇತ್ಯಾದಿಗಳಿಂದ ತಯಾರಿಸಲಾದ ಹತ್ತು ಹಲವು ಬಗೆಯ ರುಚಿಕರ ಆಹಾರಗಳ ಪ್ರದರ್ಶನ ಮುಂತಾದವು.

Ramachadrapura Math organized special programme on Jan 15

ಇದಲ್ಲದೇ, ಶಾಲಾ ವಿದ್ಯಾರ್ಥಿಗಳಿಗೆ ಗೋ ಸಂಬಂಧಿ ಹಾಡು, ಭಾಷಣ, ಚಿತ್ರಕಲೆ ಹಾಗೂ ಭಾರತೀಯ ಗೋತಳಿಗಳನ್ನು ಗುರುತಿಸುವ ಆಟ, ಸ್ಪರ್ಧೆಗಳು, ಸಾರ್ವಜನಿಕರಿಗೆ ಗೋ ಸಂಬಂಧಿತ ಗಾಯನ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ಮುಂತಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಗೋವಿನ ಕುರಿತಾದ ವಿಚಾರ ಸಂಕಿರಣ ನಡೆಯಲಿದ್ದು ಇದರಲ್ಲಿ NDRI ಸಂಸ್ಥೆಯ ವಿಜ್ಜಾನಿಗಳಾದ ಕೆ ಪಿ ರಮೇಶ್, ಸುಶೃತ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಮಕೃಷ್ಣ, ಆಂಧ್ರಪ್ರದೇಶದ ಪಶುಪಾಲನಾ ಇಲಾಖೆಯ ಡಾ. ಸಾಯಿ ಬುಚತ್ ರಾವ್, ಭಾರತೀಯ ಯೋಗಧಾಮದ ಕೆ ಎಲ್ ಶಂಕರನಾರಾಯಣ ಜೋಯ್ಸ್ ಮುಂತಾದವರು ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳ
ಕಾಮದುಘಾ ಸಮಿತಿ,
ರಾಮಚಂದ್ರಾಪುರ ಮಠ
ಶ್ರೀಭಾರತೀ ವಿದ್ಯಾಲಯ,
ವಿಜಯನಗರ, ಬೆಂಗಳೂರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ramachadrapura Math organized special programme on Makara Sankranti 2016. Mutt's Kamadugha committee organized 'Go Mahotsav' on Jan 15th at Vijayanagar, Bengaluru.
Please Wait while comments are loading...