ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್‌ ಪೊಲೀಸರ ಕಷ್ಟ ತಿಳಿಯಬೇಕೆ? ವಿಡಿಯೋ ನೋಡಿ

By Ashwath
|
Google Oneindia Kannada News

ಬೆಂಗಳೂರು, ಜು.3: ಸಂಚಾರ ಪೊಲೀಸರ ಕರ್ತ‌ವ್ಯ ನಿರ್ವ‌ಹಣೆ ವೇಳೆ ಎದುರಿಸುವ ಸವಾಲು ಮತ್ತು ಸಮಸ್ಯೆಗಳ ಬಗ್ಗೆ ಸಾರ್ವ‌ಜನಿಕರಿಗೆ ಮಾಹಿತಿ ನೀಡುವ ಸಾಕ್ಷ್ಯಚಿತ್ರವನ್ನು ಮಾಯಾ ಅಕಾಡೆಮಿ ಆಫ್‌ ಅಡ್ವಾನ್ಸ್ಡ್ ಸಿನಿಮ್ಯಾಟಿಕ್ಸ್‌ (ಎಂಎಎಸಿ) ಸಂಸ್ಥೆ ತಯಾರಿಸಿದೆ.

ವಾಹನ ಸವಾರರಿಂದ ನಿಂದನೆ, ಅನಾರೋಗ್ಯದಿಂದ ಬಳಲುವಿಕೆ ಸೇರಿದಂತೆ ಕರ್ತವ್ಯದ ಅವಧಿಯಲ್ಲಿ ಅವರು ಎದುರಿಸುವ ಸಮಸ್ಯೆಗಳನ್ನು ವಿಷಯವನ್ನಾಗಿಸಿ ಹದಿನೇಳು ನಿಮಿಷ ಅವಧಿಯ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ. ಸಂಚಾರ ಇಲಾಖೆಯ ಸಹಯೋಗದೊಂದಿಗೆ ಎಂಎಸಿಯ ಸಂಸ್ಥೆಯ 14 ವಿದ್ಯಾರ್ಥಿ‌ಗಳು ಈ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ.

traffic police documentary

ಸಂಚಾರ ಪೊಲೀಸರ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 120 ಸಿಬ್ಬಂದಿ ತಮ್ಮ ಸಮಸ್ಯೆಳನ್ನು ಹಂಚಿಕೊಂಡ ಹಿನ್ನಲೆಯಲ್ಲಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ ಎಂದು ಎಂಎಸಿಯ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶಾಜನ್ ಸಾಮ್ಯುಯಲ್ ಹೇಳಿದ್ದಾರೆ.[ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]

ಈ ಸಾಕ್ಷ್ಯಚಿತ್ರವನ್ನು ಶಾಲಾಕಾಲೇಜುಗಳಲ್ಲೂ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಬಿ.ದಯಾನಂದ ತಿಳಿಸಿದ್ದಾರೆ.

English summary
Maya Academy of Advanced Cinematics (MAAC), the leading 3D animation and VFX Institute, has released the documentary "The Resilient Bangalore Traffic Cop."The screening of the movie was done at Office of the Additional Commissioner Traffic on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X