ನೋಟ್ ಬ್ಯಾನ್ ನಂತರ, ಕರ್ನಾಟಕದಲ್ಲಿ 600 ಕೋಟಿ ರು ವಶ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು 500 ಹಾಗೂ 1,000 ರು ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ದೇಶದಾದ್ಯಂತ ಐಟಿ ದಾಳಿ ಹೆಚ್ಚಾಗಿದ್ದು ತಿಳಿದಿರಬಹುದು. ಇಲ್ಲಿ ತನಕ ದೇಶದಾದ್ಯಂತ ನಡೆದ ಐಟಿ ದಾಳಿಗಳಿಂದ ಸರಿ ಸುಮಾರು 3,000 ಕೋಟಿ ರು ಗೂ ಅಧಿಕ ಮೌಲ್ಯದ ಅಕ್ರಮ ಅಸ್ತಿ ಜಪ್ತಿ ಮಾಡಲಾಗಿದೆ.

ಈ ಪೈಕಿ ಶೇ 20ರಷ್ಟು ಕರ್ನಾಟಕದಿಂದಲೇ ಜಪ್ತಿ ಮಾಡಲಾಗಿದ್ದು, 48 ಪ್ರಕರಣಗಳ ಪೈಕಿ 23 ಪ್ರಕರಣಗಳು ಕರ್ನಾಟಕದ ವಿವಿಧ ಇಲಾಖೆಗಳ ಅಕ್ರಮಗಳ ವಿರುದ್ಧ ದಾಖಲಾಗಿದೆ. ಕರ್ನಾಟಕದಿಂದ ಸರಿ ಸುಮಾರು 600 ಕೋಟಿ ರು ಗೂ ಅಧಿಕ ಅಕ್ರಮ ಹಣ ವಶ ಪಡಿಸಿಕೊಳ್ಳಲಾಗಿದೆ.

Demonetisation: Rs 600 crore of seized illegal assets from Karnataka

ವಶಪಡಿಸಿಕೊಂಡ ಮೊತ್ತದ ಪೈಕಿ 2,000 ರುಪಾಯಿ ಹೊಸ ನೋಟುಗಳೇ ಅಧಿಕವಾಗಿವೆ. 29.86 ಕೋಟಿ ಜಪ್ತಿಯಾದ ಮೊತ್ತ ಮೊತ್ತದಲ್ಲಿ 20.22 ಕೋಟಿ ರು 2000 ಮುಖಬೆಲೆಯದ್ದಾಗಿದೆ. 41.6 ಕಿಲೋಗ್ರಾಮ್ ಚಿನ್ನದ ಗಟ್ಟಿ ಹಾಗೂ 14 ಕೆಜಿ ಆಭರಣಗಳು ಜಪ್ತಿಯಾಗಿವೆ.

ದೊಡ್ಡ ಮೌಲ್ಯದ ವ್ಯವಹಾರ: ದೊಡ್ಡ ಮೌಲ್ಯದ ವ್ಯವಹಾರ ಮಾಡುವ ನಗರಗಳ ಪೈಕಿ ಕರ್ನಾಟಕದ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. 2010ರಿಂದ 2016ರ ತನಕ 2,47,002 ಮೌಲ್ಯದ ವ್ಯವಹಾರ ನಡೆದಿದ್ದು, ನವೆಂಬರ್ 8ರ ನಂತರ ವ್ಯವಹಾರಗಳೆಲ್ಲವೂ ಅಕ್ರಮ ಹಾದಿ ಹಿಡಿದಿವೆ.

ಕರ್ನಾಟಕ ಹಾಗೂ ಗೋವಾ ವಲಯದ ಆದಾಯ ತೆರಿಗೆ ಇಲಾಖೆ ನಿರ್ದೇಶಕರ ಪ್ರಕಾರ 1,000 ಕೋಟಿ ರು ಅವ್ಯವಹಾರ ನಡೆದಿದ್ದು, ಬ್ಯಾಂಕರ್ಸ್, ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಅವ್ಯವಹಾರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಒಟ್ಟಾರೆ ನವೆಂಬರ್ 8ರಿಂದ ಇಲ್ಲಿ ತನಕ 36 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Around 20 per cent of the Rs 3,000 crore-worth illegal wealth that has been seized in raids by the income tax department since demonetisation has been from Karnataka.
Please Wait while comments are loading...