ಕಾಮೆಡ್ ಕೆ ಆನ್ಲೈನ್ ಟೆಸ್ಟ್ ಟಿಕೆಟ್ ಇಲ್ಲಿ ಪಡೆಯಿರಿ
ಬೆಂಗಳೂರು, ಏ.26: ಕಾಮೆಡ್ ಕೆ ಪದವಿ ಪೂರ್ವ ಪ್ರವೇಶ ಪರೀಕ್ಷೆ (COMEDK UGET 2015) ಬರೆಯುತ್ತಿರುವ ವಿದ್ಯಾರ್ಥಿಗಳು ಈಗ ಆನ್ ಲೈನ್ ಟೆಸ್ಟ್ ಪ್ರವೇಶಾತಿ ಟಿಕೆಟ್ ಪಡೆದುಕೊಳ್ಳಬಹುದು.
ಆನ್ ಲೈನ್ ಟೆಸ್ಟ್ ಅಡ್ಮಿಷನ್ ಟಿಕೆಟ್ ಈಗ ಕಾಮೆಡ್ ಕೆ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ ಹಾಗೂ ಪಾಸ್ ವರ್ಡ್ ಹಾಕಿ ಅಡ್ಮಿಷನ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಆನ್ ಲೈನ್ ಅಪ್ಲಿಕೇಷನ್ ಅರ್ಜಿ(OAF) ತುಂಬಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು. ಇದರಲ್ಲಿ ವಿದ್ಯಾರ್ಥಿಯ ವಿವರಗಳು, ಅರ್ಜಿ ವಿವರ..ಇತ್ಯಾದಿ ತುಂಬಲಾಗುತ್ತದೆ. ಆನ್ ಲೈನ್ ಶ್ರೇಯಾಂಕ ಪಟ್ಟಿಯೂ ಸಿಗುತ್ತದೆ.
ಕಾಮೆಡ್ ಕೆ 2015 ಪರೀಕ್ಷೆಗಳು ಮೇ.10, 2015 ರಂದು ಕರ್ನಾಟಕದ ಎಲ್ಲೆಡೆ ನಡೆಯಲಿದೆ. ಹೆಚ್ಚಿನ ಮಾಹಿತಿ ಹಾಗೂ ಆನ್ ಲೈನ್ ಟಿಕೆಟ್ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ
ಸಾರಿಗೆ ಸಂಘಟನೆಗಳು ಏ.30ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮೇ. 12 ಮತ್ತು 13ರಂದು ಪರೀಕ್ಷೆಗಳು ನಡೆಯಲಿವೆ.












Click it and Unblock the Notifications