ಫ್ಲ್ಯಾಟ್ ಆಯ್ತು, ಈಗ ಸೈಟ್ ಗಳ ನೇರ ಮಾರಾಟಕ್ಕೆ ಬಿಡಿಎ ಯೋಜನೆ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 10: ಬಿಡಿಎ ನಿವೇಶನ ಹಂಚಿಕೆಗೂ ಹೊಸ ಮಾರಾಟ ವಿಧಾನ ಅನುಸರಿಸಲು ಈಗಾಗಲೇ ಮುಂದಾಗಿದೆ.

ಬಿಡಿಎ ಫ್ಲ್ಯಾಟ್ ಗಳ ಮಾರಾಟಕ್ಕೆ ಅನುಸರಿಸಿದ್ದ ನೇರ ಮಾರಾಟ ವ್ಯವಸ್ಥೆಯನ್ನು ನಿವೇಶನಗಳ ಮಾರಾಟಕ್ಕೂ ಬಳಕೆ ಮಾಡಲು ಚಿಂತಿಸಿದೆ. ಅಧಿಸೂಚನೆ ಕರೆದು ಲಾಟರಿ ಮೂಲಕ ಹಂಚಿಕೆ ವಿಧಾನಕ್ಕೆ ಬೇಡಿಕೆ ಕಡಿಮೆಯಾಗಿರುವದರಿಂದ ಅಕ್ರಾಸ್ ದಿ ಟೇಬಲ್ ವಿಧಾನವನ್ನು ಬಳಸುವ ಅಭಿಪ್ರಾಯ ವ್ಯಕ್ತವಾಗಿದೆ.

ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ 1ನೇ ಹಂತದ ಅಧಿಸೂಚನೆಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 30 ಸಾವಿರಕ್ಕೂ ಅಧಿಕ ಅರ್ಜಿಗಳು ಆರಂಭಿಕ ಆಉಲ್ಕದೊಂದಿಗೆ ಬಿಡಿಎಗೆ ಸಲ್ಲಿಕೆಯಾಗಿತ್ತು. ಆದರೆ, ೨ ನೇ ಹಂತದಲ್ಲಿ ಕೇವಲ 16 ಸಾವಿರ ಅರ್ಜಿಗಳು ಆರಂಭಿಕ ಶುಲ್ಕದೊಂದಿಗೆ ಪಾವತಿಯಾಗಿದೆ.

BDA plans to sale sites across the table system

ಅಲ್ಲದೆ ನಿವೇಶನಗಳಲ್ಲಿ ಹೆಚ್ಚು ಆಸಕ್ತಿ ಇರುವವರ ಸಂಖ್ಯೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಿವೇಶನಗಳನ್ನೂ ಅಕ್ರಾಸ್ ದಿ ಟೇಬಲ್ ಮಾದರಿ ವಿಲೇವಾರಿ ಮಾಡಲು ಬಿಡಿಎ ಚಿಂತಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಫ್ಲ್ಯಾಟ್ ಗಳಿಗೆ ಬೇಡಿಕೆ: ಹೊಸ ಮಾದರಿಯಲ್ಲಿ ಮಾದರಿಯಲ್ಲಿ ಮಾರಾಟ ವ್ಯವಸ್ಥೆಯಲ್ಲಿ ಬಿಡಿಎ ಫ್ಲ್ಯಾಟ್ ಗಳಿಗೆ ಉತ್ತಮ ಬೇಡಿಕೆ ಬಂದಿತ್ತು. ಹಂಚಿಕೆ ವಿಧಾನದಲ್ಲಿ 3512 ಫ್ಲ್ಯಾಟ್ ಗಳಿಗೆ 860 ಅರ್ಜಿಗಳಷ್ಟೇ ಅಲ್ಲಿಕೆಯಾಗಿದ್ದವು.

ಆದರೆ ಹೊಸ ಮಾರಾಟ ವಿಧಾನದಿಂದ ಆಲೂರು, ಮಾಳಗಾವ, ವಲಗೇರಹಳ್ಳಿ, ದೊಡ್ಡಬನಹಳ್ಳಿ ಸೇರಿ ವಿವಿಧ ಭಾಗದಲ್ಲಿನ ವಸತಿ ಸಮುಚ್ಛಯ ಹಾಗೂ ವಿಲ್ಲಾಗಳು ಶೀಘ್ರ ಮಾರಟವಾಗಲಿದೆ. ಹೀಗಾಗಿ ನೇರ ಮಾರಾಟ ವ್ಯವಸ್ಥೆಯನ್ನು ನಿವೇಶನಗಳ ಹಂಚಿಕೆಯಲ್ಲೂ ಬಳಸಬೇಕೆಂದು ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As sale flats in negotiation manner, now Bengaluru Development Authority is planning sites with across the table to simplify the system.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ