Government Employees: ಸರ್ಕಾರಿ ನೌಕರರ ವರ್ಗಾವಣೆ ಕುರಿತು ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ
Government Employees: ಕರ್ನಾಟಕದಲ್ಲಿ ರಾಜ್ಯ ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಸಂಬಂಧ ಮಾರ್ಗಸೂಚಿಗಳನ್ನು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆಡಳಿತಾತ್ಮಕ ಸುಧಾರಣೆ ಮತ್ತು ನೌಕರರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ರೂಪಿಸಲಾಗಿದೆ.
ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಯು ಏಪ್ರಿಲ್ 13, 2026ರಿಂದಲೇ ಅಧಿಕೃತವಾಗಿ ಆರಂಭವಾಗಿದೆ. ವರ್ಗಾವಣೆ ಬಯಸುವ ಅರ್ಹ ನೌಕರರು ಅರ್ಜಿ ಸಲ್ಲಿಕೆ ಮಾಡಲಿ ಮೇ 31, 2026 ಕೊನೆಯ ದಿನಾಂಕವಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ನಂತರ ಬಂದಂತಹ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.

ನಿಗದಿಪಡಿಸಿದ ಗಡುವಿನ ನಂತರ ಬರುವ ಯಾವುದೇ ಮನವಿಗಳನ್ನು ಇಲಾಖೆ ಪುರಸ್ಕರಿಸುವುದಿಲ್ಲ. ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ಆಗದಂತೆ ತಡೆಯಲು ಸರ್ಕಾರ ಈ ಕೆಳಗಿನ ಕೆಲವು ಪ್ರಮುಖ ಅಂಶಗಳಿಗೆ ಒತ್ತು ನೀಡಿದೆ. ಅವುಗಳೆಂದರೆ, ವರ್ಗಾವಣೆ ಕೋರುವ ನೌಕರರು ತಮ್ಮ ಸೇವಾ ದಾಖಲೆಗಳನ್ನು ನಿಖರವಾಗಿ ಒದಗಿಸುವುದು ಕಡ್ಡಾಯವಾಗಿದೆ.
ಕೇವಲ ವೈಯಕ್ತಿಕ ವಿನಂತಿಗಳನ್ನಷ್ಟೇ ಅಲ್ಲದೆ, ಇಲಾಖೆಯ ಆಡಳಿತಾತ್ಮಕ ಅಗತ್ಯತೆಗಳನ್ನು ಪ್ರಮುಖವಾಗಿ ಪರಿಗಣಿಸಿ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗುತ್ತದೆ. ಮಾನವೀಯ ಆಧಾರದ ಮೇಲೆ ಕೆಲವು ವಿಶೇಷ ಪ್ರಕರಣಗಳಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮಾರ್ಗಚೂಚಿಯಲ್ಲಿನ ಪ್ರಮುಖ ಅಂಶಗಳು
* ಆರೋಗ್ಯ ಸಮಸ್ಯೆ: ಗಂಭೀರ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ನೌಕರರ ವಿನಂತಿಗಳಿಗೆ ವಿಶೇಷ ಆದ್ಯತೆ ಸಿಗಲಿದೆ.
* ಮಹಿಳಾ ನೌಕರರು: ಗರ್ಭಿಣಿ ಮಹಿಳಾ ನೌಕರರ ವರ್ಗಾವಣೆ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲು ಸೂಚಿಸಲಾಗಿದೆ.
* ಕುಟುಂಬದ ಅನಿವಾರ್ಯತೆ: ಮಕ್ಕಳ ಶಿಕ್ಷಣ ಅಥವಾ ಕುಟುಂಬದ ತುರ್ತು ಪರಿಸ್ಥಿತಿಗಳಂತಹ ಅನಿವಾರ್ಯ ಕಾರಣಗಳಿಗೆ ನಿಯಮಾನುಸಾರ ವಿನಾಯಿತಿ ನೀಡಲಾಗುತ್ತದೆ.
ಭತ್ಯೆ ಮತ್ತು ಸೌಲಭ್ಯಗಳಗಳ ವಿವರ
ವರ್ಗಾವಣೆಯಾದ ನೌಕರರಿಗೆ ಅವರ ಸೇವಾ ಅವಧಿ ಮತ್ತು ಹುದ್ದೆಯ ಶ್ರೇಣಿಗೆ ಅನುಗುಣವಾಗಿ ಸರ್ಕಾರವು ನಿಗದಿಪಡಿಸಿದ ವರ್ಗಾವಣೆ ಭತ್ಯೆ ಹಾಗೂ ಇತರ ಕಾನೂನುಬದ್ಧ ಸೌಲಭ್ಯಗಳು ದೊರೆಯಲಿವೆ. ಅರ್ಹ ನೌಕರರು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಆಯಾ ಇಲಾಖೆಯ ಅಧಿಕೃತ ಜಾಲತಾಣ ಅಥವಾ ಕಚೇರಿಯನ್ನು ಸಂಪರ್ಕಿಸಬಹುದು. ಗಡುವಿನ ಒಳದೆ ಅಗತ್ಯ ದಾಖಲೆಗಳೊಂದಿಗೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕೆಂದು ಇಲಾಖೆ ಸೂಚನೆ ನೀಡಿದೆ.












Click it and Unblock the Notifications