ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್

Mohammed Siraj: ಭಾರತೀಯ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯನ್ನು ಸೋಮವಾರ ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಗಾಯಕಿಯ ಅಂತಿಮ ದರ್ಶನ ಪಡೆಯಲು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಕೂಡ ಸೇರಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಸಿರಾಜ್ ಅವರು ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರಿಗೆ ಸಾಂತ್ವನ ಹೇಳುತ್ತಿರುವುದು ಕಂಡುಬಂದಿದೆ.

ಈ ವಿಡಿಯೋದಲ್ಲಿ ಮೊಹಮ್ಮದ್ ಸಿರಾಜ್ ಅವರು ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳುತ್ತಿರುವುದನ್ನು ಕಾಣಬಹುದು. ಜನೈ ಮತ್ತು ಸಿರಾಜ್ ಪರಸ್ಪರ ಸಹೋದರ-ಸಹೋದರಿಯಂತಹ ಆಪ್ತ ಬಾಂಧವ್ಯವನ್ನು ಹೊಂದಿದ್ದಾರೆ.

Mohammed Siraj Consoles Zanai Bhosle at Asha Bhosle Funeral Video Goes Viral on social media

ಜನೈ ಭೋಸ್ಲೆ-ಸಿರಾಜ್ ನಡುವೆ ಅಣ್ಣತಂಗಿ ನಂಟು

ಮಹಮ್ಮದ್ ಸಿರಾಜ್ ಮತ್ತು ಜನೈ ಭೋಸ್ಲೆ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಅವರ ಈ ಸಾರ್ವಜನಿಕ ಭೇಟಿಗಳು ಇಬ್ಬರ ನಡುವೆ ಪ್ರೇಮ ಸಂಬಂಧವಿರಬಹುದು ಎಂಬ ವದಂತಿಗಳಿಗೆ ಕಾರಣವಾಗಿತ್ತು. ಆದರೆ, ಜನೈ ಭೋಸ್ಲೆ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ನಮ್ಮ ನಡುವೆ ಅಣ್ಣ-ತಂಗಿಯಂತಹ ಬಾಂಧವ್ಯವಿದೆ ಮತ್ತು ನಾವು ಒಬ್ಬರಿಗೊಬ್ಬರು ಕುಟುಂಬದವರಂತೆ ಇದ್ದೇವೆ" ಎಂದು ತಿಳಿಸಿದ್ದಾರೆ.

ಸಿರಾಜ್‌ಗೆ ರಾಖಿ ಕಟ್ಟಿದ್ದ ಜನೈ

ಕಳೆದ ವರ್ಷ ರಕ್ಷಾಬಂಧನದ ದಿನದಂದು, ಜನೈ ಅವರು ಸಿರಾಜ್‌ಗೆ ರಾಖಿ ಕಟ್ಟುವ ಮೂಲಕ ತಮ್ಮ ನಡುವೆ ಇರುವುದು ಅಣ್ಣ-ತಂಗಿಯ ಬಾಂಧವ್ಯ ಎಂಬುದನ್ನು ಸ್ಪಷ್ಟಪಡಿಸಿದ್ದರು. ಈ ಗಾಯಕಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, "ಹ್ಯಾಪಿ ರಾಖಿ ಜೊತೆ ಹಾರ್ಟ್‌ ಸಿಂಬಲ್‌ ಇಟ್ಟು ಇದಕ್ಕಿಂತ ಉತ್ತಮವಾದುದನ್ನು ನಾನು ಕೇಳಲು ಸಾಧ್ಯವಿರಲಿಲ್ಲ," ಎಂದು ಬರೆದುಕೊಂಡಿದ್ದರು. ಆ ವಿಡಿಯೋದಲ್ಲಿ ಜನೈ ರಾಖಿ ಕಟ್ಟುತ್ತಿದ್ದರೆ, ಸಿರಾಜ್ ಮುಗುಳ್ನಗುತ್ತಿರುವುದನ್ನು ಕಾಣಬಹುದು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮತ್ತೊಂದು ವಿಡಿಯೋದಲ್ಲಿ, ಅಂತಿಮ ದರ್ಶನದ ವೇಳೆ ನೆರೆದಿದ್ದ ಜನಸಂದಣಿಯ ನಡುವೆ ಮಹಮ್ಮದ್ ಸಿರಾಜ್ ಕೂಡ ಇರುವುದು ಕಂಡುಬಂದಿದೆ. ನಂತರ ಅವರು ಜನೈ ಅವರನ್ನು ಭೇಟಿಯಾದಾಗ, ಜನೈ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಸಿರಾಜ್ ಅವರು ಜನೈ ಅವರ ಪಕ್ಕದಲ್ಲೇ ನಿಂತು ಸಮಾಧಾನಪಡಿಸುತ್ತಾರೆ. ಜನೈ ಅವರು ಸಿರಾಜ್ ಹೆಗಲ ಮೇಲೆ ತಲೆಯನ್ನಿಟ್ಟು ಅಳುತ್ತಿದ್ದರೆ, ಸಿರಾಜ್ ಧೈರ್ಯ ತುಂಬುತ್ತಿರುವ ದೃಶ್ಯ ವೈರಲ್‌ ಆಗಿದೆ.

ಜನೈ ಭೋಸ್ಲೆ ಯಾರು?

ಜನೈ ಭೋಸ್ಲೆ ಅವರು ಆನಂದ್ ಮತ್ತು ಅನುಜಾ ಭೋಸ್ನೆ ಅವರ ಪುತ್ರಿ. ಇವರು ತಮ್ಮ ಅಜ್ಜಿ ಆಶಾ ಭೋಸ್ನೆ ಅವರೊಂದಿಗೆ ಅತ್ಯಂತ ಗಾಢವಾದ ಮತ್ತು ಪ್ರೀತಿಯ ಬಾಂಧವ್ಯವನ್ನು ಹೊಂದಿದ್ದರು. ಇಷ್ಟು ವರ್ಷಗಳ ಕಾಲ ಅವರು ಆಶಾ ಭೋಸ್ಲೆ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆಶಾ ಅವರು ತಮ್ಮ ಕೊನೆಯ ಪೋಸ್ಟ್‌ನಲ್ಲಿ ಮೊಮ್ಮಗಳಾದ ಜನೈ ಅವರ ಆಲ್ಬಂ ಬಿಡುಗಡೆಗೆ ಶುಭ ಹಾರೈಸಿದ್ದರು. ಜನೈ ಭೋಸ್ನೆ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. 'ದ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟನೆಯ ಜೊತೆಗೆ, ಅವರು ಗಾಯಕಿ ಮತ್ತು ನೃತ್ಯಗಾರ್ತಿಯೂ ಆಗಿದ್ದಾರೆ. ಒಟ್ಟಿನಲ್ಲಿ ಜನೈ ಭೋಸ್ಲೆ-ಸಿರಾಜ್ ಬಗ್ಗೆ ಇಗ್ಗೆ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+