ಹೊಸಪೇಟೆ-ದಾವಣಗೆರೆ, ಹೊಸಪೇಟೆ-ಬಳ್ಳಾರಿ ಡೆಮು ರೈಲು; ವೇಳಾಪಟ್ಟಿ

ವಿಜಯನಗರ, ಮಾರ್ಚ್ 22; ಕರ್ನಾಟಕದ ನೂತನ ಜಿಲ್ಲೆ ವಿಜಯನಗರಕ್ಕೆ ನೈಋತ್ಯ ರೈಲ್ವೆ ಕೊಡುಗೆಯೊಂದನ್ನು ನೀಡಿದೆ. ಏಪ್ರಿಲ್ 4ರಿಂದ ಜಿಲ್ಲಾ ಕೇಂದ್ರ ಹೊಸಪೇಟೆಯಿಂದ 2 ಡೆಮು ರೈಲುಗಳು ಸಂಚಾರ ನಡೆಸಲಿವೆ.

ಮಂಗಳವಾರ ನೈಋತ್ಯ ರೈಲ್ವೆ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಈ ಮೂಲಕ ಜಿಲ್ಲೆಯ ಬಹುದಿನದ ಬೇಡಿಕೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಜನರು ಸಹ ಇಲಾಖೆ ತೀರ್ಮಾನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆ-ದಾವಣಗೆರೆ-ಹರಿಹರ ನಡುವೆ ಒಂದು ರೈಲು, ಹೊಸಪೇಟೆ-ಬಳ್ಳಾರಿ ನಡುವೆ ಮತ್ತೊಂದು ಡೆಮು (Diesel electric multiple unit) ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

Two New DEMU Train From Hosapete Schedule

ವೇಳಾಪಟ್ಟಿ; ರೈಲು ಸಂಖ್ಯೆ 07395 ಹೊಸಪೇಟೆ-ದಾವಣಗೆರೆ-ಹರಿಹರ ನಡುವೆ ಸಂಚಾರ ನಡೆಸಲಿದೆ. ಪ್ರತಿದಿನ ಬೆಳಗ್ಗೆ 9.40ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮಾರ್ಗವಾಗಿ ಸಂಚಾರ ನಡೆಸಿ ಮಧ್ಯಾಹ್ನ 1.30ಕ್ಕೆ ದಾವಣಗೆರೆ ತಲುಪಲಿದೆ, ಅಲ್ಲಿಂದ ಹರಿಹರಕ್ಕೆ ಸಂಚಾರ ನಡೆಸಲಿದೆ.

ಹರಿಹರದಿಂದ ಮಧ್ಯಾಹ್ನ 3ಕ್ಕೆ ರೈಲು ಸಂಖ್ಯೆ 07396 ಹೊರಟು ಅದೇ ಮಾರ್ಗವಾಗಿ ಸಂಚಾರ ನಡೆಸಿ ರಾತ್ರಿ 8 ಗಂಟೆಗೆ ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆ ತಲುಪಲಿದೆ.

ರೈಲು ಸಂಖ್ಯೆ 07397 ಪ್ರತಿದಿನ ಬೆಳಗ್ಗೆ 6ಕ್ಕೆ ಹೊಸಪೇಟೆಯಿಂದ ಹೊರಟು 7.40ಕ್ಕೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ ರೈಲು ಸಂಖ್ಯೆ 07398 7.50ಕ್ಕೆ ಹೊರಟು 9.30ಕ್ಕೆ ಹೊಸಪೇಟೆ ತಲುಪಲಿದೆ. ಈ ರೈಲುಗಳಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್ ದರ ಇರುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ರೈಲ್ವೆ ಇಲಾಖೆ ಟ್ವೀಟ್; ವಿಜಯನಗರದ ಹೊಸಪೇಟೆ ಜಂಕ್ಷನ್ ನಿಲ್ದಾಣದ ಮುಖ್ಯದ್ವಾರವನ್ನು ಯುನೆಸ್ಕೋ ಪಾರಂಪರಿಕ ಮಾನ್ಯತೆ ಪಡೆದಿರುವ ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಅಂತಿಮ ಹಂತದ ಕಾರ್ಯ ನಡೆಯುತ್ತಿದೆ. ಭಾರತೀಯ ರೈಲ್ವೆ ಈ ಕುರಿತು ಕಳೆದ ವಾರ ಟ್ವೀಟ್ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+