ಹಂಪಿ: ಟೆನ್ನಿಸ್ ಆಟಗಾರರನ ಜೀವಂತ ದುರಂತ ಕಥೆ ಶೂಟಿಂಗ್

ಹಂಪೆ, ಫೆಬ್ರವರಿ 07: ಸಾವಿರಾರು ಕನಸುಗಳನ್ನು ಹೊತ್ತು, ಟೆನ್ನಿಸ್ ಅಂಗಳಕ್ಕೆ ಹೆಜ್ಜೆ ಇಡುತ್ತಿದ್ದ ಸ್ಪೇನಿನ ಟೆನ್ನಿಸ್ ಆಟಗಾರನ ಜೀವಂತ ದುರಂತ ಕಥೆಯನ್ನು ಒಳಗೊಂಡಿರುವ 'ರೋಲಿಂಗ್ ವರ್ಲ್ಡ್' ಚಿತ್ರದ ಶೂಟಿಂಗ್ ಹಂಪೆಯಲ್ಲಿ ನಡೆದಿದೆ. ಸ್ಪೇನ್ ಆಟಗಾರ ಸಿಸ್ಕೋ ಗಾರ್ಸಿಯಾ ಅವರೇ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.

ಸ್ಪೇನಿನಲ್ಲಿ ನಡೆದ ದುರಂತದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿರುವ ಸಿಸ್ಕೋ, 'ಭಾರತ ಸುಂದರವಾದ ದೇಶ. ಇಲ್ಲಿಯ ಆತಿಥ್ಯ, ಸಂಸ್ಕಾರ, ಬಹುಭಾಷೆ, ವೈವಿಧ್ಯಮಯವಾದ ಸಂಸ್ಕೃತಿ ಎಲ್ಲವೂ ನನಗೆ ವಿಶೇಷವಾಗಿ ಆಕರ್ಷಿಸಿವೆ. ನನಗೆ ಭಾರತ ಎಂದರೆ ಅಚ್ಚುಮೆಚ್ಚು ಎಂದಿದ್ದಾರೆ.

Spain Para Tennis player Cisco Garsi is in Hampi

ಹಂಪೆಗೆ ನಾನು ಮೊದಲ ಬಾರಿ ಭೇಟಿ ನೀಡಿದಾಗ ನಾನು ಎಲ್ಲರಂತೆ ಸಾಮಾನ್ಯವಾಗಿದ್ದೆ. ಇಲ್ಲಿಯ ಸ್ಮಾರಕಗಳು, ಇತಿಹಾಸ, ಇಲ್ಲಿಯ ಜನ ಮತ್ತು ಪರಿಸರ ನನ್ನನ್ನು ಮತ್ತೊಮ್ಮೆ ಈ ಸ್ಥಿತಿಯಲ್ಲಿ ಇಲ್ಲಿಗೆ ಕರೆದುಕೊಂಡು ಬಂದಿವೆ. ನಾನು ಅಭಾರಿ' ಎನ್ನುತ್ತಾರೆ.
Spain Para Tennis player Cisco Garsi is in Hampi

ಮಾತಿನ ಮಧ್ಯೆ ಮಧ್ಯೆ ಟೆನ್ನಿಸ್ ಅಂಗಳದ ಹೆಮ್ಮೆ, ತಮ್ಮ ಬದುಕಿನ ದುರಂತ ಹಾಗೂ ಭವಿಷ್ಯದ ಕನಸುಗಳನ್ನು ಬಿಚ್ಚಿಡುತ್ತಲೇ, 2020ರಲ್ಲಿ ನಡೆಯುವ ಪ್ಯಾರಾ ಒಲಂಪಿಕ್ಸ್ ನ ಟೆನಿಸ್ ನಲ್ಲಿ ಸ್ಪರ್ಧಿಸಿ, ಬಂಗಾರದ ಪದಕ ಪಡೆಯಲಿಕ್ಕಾಗಿ ಪ್ರತಿನಿತ್ಯ ಕನಿಷ್ಟ 3 ತಾಸು ತಾಲೀಮು ನಡೆಸುತ್ತಿರುವೆ' ಎಂದು ವಿಶ್ವಾಸದ ಮಾತುಗಳನ್ನಾಡಿದರು.

Spain Para Tennis player Cisco Garsi is in Hampi

ರೋಲಿಂಗ್ ವರ್ಲ್ಡ್ ಚಿತ್ರ ನಿರ್ದೇಶಕರ ಅನೇಕ ಸಲಹೆ - ಸೂಚನೆಗಳನ್ನು ಆಲಿಸುತ್ತಲೇ ತನ್ನ ಪಕ್ಕದಲ್ಲಿದ್ದ ಭಾವೀ ಪತ್ನಿ ರಾಕ್ವೇಲ್ ಅವರನ್ನು ಪರಿಚಿಯಿಸಿದ ಸಿಸ್ಕೋ, 'ಈ ಸಿನಿಮಾ ನನ್ನದೇ, ನನ್ನ ದುರಂತ ಬದುಕಿನದ್ದೇ. ಮುಂದಿನ ದಿನಗಳಲ್ಲೂ ಭಾರತಕ್ಕೆ ಬರುವ ಆಸೆ ಇದೆ. ಪ್ರಯತ್ನಿಸುವೆ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+