ಆಂಬುಲೆನ್ಸ್ ನಲ್ಲೇ ತ್ರಿವಳಿ ಮಕ್ಕಳಿಗೆ ಜನನ ನೀಡಿದ ಮಹಿಳೆ

ಬಳ್ಳಾರಿ, ಏಪ್ರಿಲ್. 24 : ಮರಿಯಮ್ಮನಹಳ್ಳಿ ಸಮೀಪದ ತಾಳೆಬಸಾಪುರ ತಾಂಡಾದ ಗೃಹಿಣಿ ಶಾರದಾಬಾಯಿ 108 ಆಂಬುಲೆನ್ಸ್ ನಲ್ಲೇ ಮೂರು ಮಕ್ಕಳಿಗೆ ಜನನ ನೀಡುವ ಮೂಲಕ ಬಾರಿ ಸುದ್ದಿಯಾಗಿದ್ದಾರೆ.

23 ವರ್ಷದ ಶಾರದಾಬಾಯಿಗೆ ಈಗಾಗಲೇ 2 ವರ್ಷದ ಗಂಡುಮಗುವಿದೆ. ಇದೀಗ ಎರಡನೇ ಹೆರಿಗೆಯಲ್ಲಿ ಮೂವರು ಆರೋಗ್ಯವಂತ ಮಕ್ಕಳಿಗೆ ಜನನ ನೀಡಿದ್ದಾಳೆ. ಮಂಗಳವಾರ ನಸುಕಿನಲ್ಲಿ 108 ಆಂಬುಲೆನ್ಸ್ ಕಂಟ್ರೋಲ್‍ ರೂಂನಿಂದ ಕರೆ ಸ್ವೀಕರಿಸಿದ ವೈದ್ಯಕೀಯ ತುರ್ತು ಚಿಕಿತ್ಸಾ ಸಿಬ್ಬಂದಿ ನಾಗೇಂದ್ರ ಕುಮಾರ್, ಆಂಬುಲೆನ್ಸ್ ತೆಗೆದುಕೊಂಡು ತಾಳೆಬಸಾಪುರ ತಾಂಡಾದ ಶಾರಾದಾಬಾಯಿ ಮನೆಯ ಮುಂದೆ ನಿಂತಾಗ, ಆಕೆಯ ಗರ್ಭ ಗಮನಿಸಿ, ಆತಂಕಗೊಂಡಿದ್ದರು.

ಅಷ್ಟೇ ಅಲ್ಲ, ಮೂರು ಶಿಶುಗಳು ಹೊಟ್ಟೆಯಲ್ಲಿವೆ ಎಂದು ಗರ್ಭವತಿ ತಿಳಿಸಿದಾಗ ಬೆಚ್ಚಿ ಬಿದ್ದಿದ್ದರು.

ಆಂಬುಲೆನ್ಸ್ ಹಾರೋಹಳ್ಳಿ ಸಮೀಪಕ್ಕೆ ಬರುತ್ತಿದ್ದಂತೆಯೇ 2.40ರ ಸುಮಾರಿಗೆ ಮೊದಲ ಗಂಡು ಕೂಸಿಗೆ ಶಾರದಾಬಾಯಿ ಜನನ ನೀಡಿದಳು. ಗಾಳೆಮ್ಮನಗುಡಿ ಸಮೀಪ ಬರುತ್ತಿದ್ದಂತೆಯೇ 3.19 ಕ್ಕೆ ಹೆಣ್ಣು ಕೂಸು, 3.29ಕ್ಕೆ ಗಂಡು ಕೂಸಿಗೆ ಜನನ ನೀಡಿದಳು. ಮೂರೂ ಮಕ್ಕಳು ನಾರ್ಮಲ್ ಡೆಲಿವರಿಯಲ್ಲಿ ಜನಿಸಿದ್ದು ವಿಶೇಷ.

Sharadabai gave birth to three childrens in Ambulence

ಈ ಬಗ್ಗೆ ಮಾತನಾಡಿರುವ ನಾಗೇಂದ್ರ ಕುಮಾರ್ ಮಹಿಳೆ ಗರ್ಭ ಗಮನಿಸಿದಾಗ ಆತಂಕಗೊಂಡಿದ್ದೆ. ಮೊದಲನೇ ಹೆರಿಗೆ ಆದಾಗ ಸಂತೋಷವಾಯಿತು. ಮೂರೂ ಕೂಸುಗಳು ನಾರ್ಮಲ್ ಡೆಲಿವರಿ ಆದದ್ದು ಕಂಡು ಬಹಳ ಖುಷಿ ಆಯಿತು' ಎಂದು ನಡೆದ ಘಟನೆ ನೆನಪಿಸಿಕೊಂಡರು.

Sharadabai gave birth to three childrens in Ambulence

ಗರ್ಭದಲ್ಲಿ ಮೂರು ಮಕ್ಕಳಿರುವುದಾಗಿ ವೈದ್ಯರು ತಿಳಿಸಿದಾಗ ನಾವು ಆತಂಕಗೊಂಡಿದ್ದೆವು. ದೊಡ್ಡ ಆಪರೇಷನ್ ಮಾಡಬೇಕು ಅಂದಿದ್ದರು ವೈದ್ಯರು. ಈಗ ನಾರ್ಮಲ್ ಡೆಲಿವೆರಿ ಆಗಿದೆ. ದೇವರು ಕಣ್ಣು ನಮ್ಮ ಮೇಲಿದೆ ಎಂದು ಶಾರದಾಬಾಯಿ ಪತಿ ಕುಮಾರ್ ನಾಯ್ಕ ಆನಂದ ಭಾಷ್ಪ ಸುರಿಸಿದರು.

ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದು, ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+