ನವೆಂಬರ್ 3ರಿಂದ ಹಂಪಿ ಉತ್ಸವ : ಸಚಿವ ಸಂತೋಷ್ ಲಾಡ್

ಹೊಸಪೇಟೆ, ಅಕ್ಟೋಬರ್ 14: ನವೆಂಬರ್ 3 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವಕ್ಕೆ ಈ ಬಾರಿ ಆರು ವೇದಿಕೆಗಳನ್ನು ಮಾಡಲಾಗಿದೆ. ಉತ್ಸವಕ್ಕೆ ಎಲ್ಲಾ ರೀತಿಗಳಿಂದ ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಅಕ್ಟೋಬರ್ 18 ರಿಂದ 22 ರವರೆಗೆ ವಿಜಯ ವಿಠ್ಠಲ ದೇವಸ್ಥಾನದ ಬಳಿ ಶಿಲ್ಪ ಮತ್ತು ಕಾಷ್ಟ ಶಿಬಿರ, ಅ 23 ರಂದು ಮ್ಯಾರಥಾನ್. 26 ರಿಂದ 28 ರ ವರೆಗೆ ಚಿತ್ರಕಲಾ ಶಿಬಿರ . ಅ 30 ರಿಂದ 5 ರ ವರೆಗೆ ಬೆಳಿಗ್ಗೆ ಮತ್ತು ಸಂಜೆ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ, 100 ರೂ ಶುಲ್ಕವಿದ್ದು, ಊಟದ ವ್ಯವಸ್ಥೆ ಇರುತ್ತದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

Preparation are in full swing for Hampi Utsav: Santosh Lad

ನವೆಂಬರ್ 1 ರಿಂದ ಹಂಪಿ ಬೈ ಸ್ಕೈ (ಹೆಲಿಕಾಪ್ಟರ್ ರೈಡ್) 7 ನಿಮಿಷಕ್ಕೆ 1900 ರು ಹಾಗೂ 10 ನಿಮಿಷಕ್ಕೆ‌ 2600 ರು ಶುಲ್ಕವಿದ್ದು, 5 ವರ್ಷದ ಕೆಳಗಿನವರಿಗೆ ಉಚಿತವಿರುತ್ತದೆ ಎಂದು ಸಚಿವರು ತಿಳಿಸಿದರು.

ನವಂಬರ್ 3 ರಂದು 2500 ರೈತರ ಸಮಾವೇಶವಿದ್ದು, ನ 3 ರಿಂದ 9 ವರೆಗೆ ಕೇಂದ್ರ ಸರಕಾರದ ಸಂಗೀತ ಮತ್ತು ನಾಟಕ ವಿಭಾಗದಿಂದ ವಿಜಯನಗರ ವೈಭವ ಎಂಬ ಧ್ವನಿ ಬೆಳಕಿನ ಪ್ರದರ್ಶನ ಗಜಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಇದಲ್ಲದೆ ನವಂಬರ್ 3 ರಿಂದ 5 ರವರಗೆ ಕೆಸರುಗದ್ದೆ ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳು ನಡೆಯಲಿವೆ ಎಂದು ಸಚಿವ ಸಂತೋಷ್ ಲಾಡ್ ಕಮಲಾಪುರದಲ್ಲಿ ಹೇಳಿದರು.(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+