ಕರ್ನಾಟಕ; ಎಸಿ/ ನಾನ್ ಎಸಿ ಸ್ಲೀಪರ್ ಬಸ್ ದರ ಕಡಿತ

ಬಳ್ಳಾರಿ, ಡಿಸೆಂಬರ್ 08: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹವಾನಿಯಂತ್ರಿ ಮತ್ತು ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್ ಬಸ್‌ಗಳ ಪ್ರಯಾಣ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಬಳ್ಳಾರಿಯಿಂದ ಹೈದರಾಬಾದ್‌ ಕರ್ನೂಲ್ ಮೂಲಕ ಸಂಚಾರ ನಡೆಸುವ ಹವಾನಿಯಂತ್ರಿತ ಸ್ಲೀಪರ್ ಹಾಗೂ ಬಳ್ಳಾರಿಯಿಂದ ಚೆನ್ನೈ, ವಿಜಯವಾಡಕ್ಕೆ ಸಂಚಾರ ನಡೆಸುವ ಅಂತರರಾಜ್ಯ ಹವಾನಿಯಂತ್ರಣ ರಹಿತ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ.

ಕರ್ನೂಲ್ ಮೂಲಕ ಸಂಚಾರ ನಡೆಸುವ ಬಳ್ಳಾರಿ-ಹೈದರಾಬಾದ್ ಎಸಿ ಸ್ಲೀಪರ್ ಬಸ್‌ ಬಳ್ಳಾರಿ 9.48ಕ್ಕೆ ಹೊರಡಲಿದೆ. ಪ್ರಯಾಣ ದರ 890 ರೂ. ಆಗಿದೆ.

NEKRTC Cuts AC And Non Ac Sleeper Bus Fare

ಬಳ್ಳಾರಿ-ಚೆನ್ನೈ ನಾನ್ ಎಸಿ ಸ್ಲೀಪರ್ ಬಸ್ ಅನಂತಪುರ ಮೂಲಕ ಸಂಚಾರ ನಡೆಸಲಿದೆ. ಬಳ್ಳಾರಿಯಿಂದ 7.30 ಹೊರಡಲಿದ್ದು, 950 ರೂ. ಪ್ರಯಾಣ ದರವಿದೆ.

ಬಳ್ಳಾರಿ-ವಿಜಯವಾಡ ನಾನಾ ಎಸಿ ಸ್ಲೀಪರ್ ಬಸ್ ಕರ್ನೂಲ್ ಮೂಲಕ ಸಂಚಾರ ನಡೆಸಲಿದ್ದು, 5.30ಕ್ಕೆ ಬಳ್ಳಾರಿಯಿಂದ ಹೊರಡಲಿದೆ. ಪ್ರಯಾಣದರ 970 ರೂ.ಗಳು.

ಕೆಎಸ್ಆರ್‌ಟಿಸಿ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಈ ಸಾರಿಗೆಗೆ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಯಾಣ ದರ ಕಡಿತ ಮಾಡಲಾಗಿದ್ದು, ಜನರು ಈ ಅಂತರರಾಜ್ಯ ಬಸ್ ಸೇವೆಗಳನ್ನು ಉಪಯೋಗಿಸಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+