ಬಳ್ಳಾರಿ : 3 ಕಾಲು, 4 ಪಾದದ ವಿಚಿತ್ರ ಮಗು ಜನನ
ಬಳ್ಳಾರಿ, ಜೂನ್ 27 : ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಮೂರು ಕಾಲಿನ ಗಂಡು ಮಗುವೊಂದು ಜನಿಸಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ. ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಕಾಲನ್ನು ತೆಗೆಯಬೇಕಿದೆ.
ಕಂಪ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರು 3 ಕಾಲು ಹಾಗೂ 4 ಪಾದಗಳಿರುವ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ಕಂಪ್ಲಿ ಪಟ್ಟಣದ 18ನೇ ವಾರ್ಡ್‌ನ ಸುಷ್ಮಾ( 23) ಪ್ರಥಮ ಹೆರಿಗೆಯಲ್ಲಿ ಈ ರೀತಿಯ ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ್ದಾರೆ.

ಗಂಡು ಶಿಶುವಿಗೆ 3 ಕಾಲು ಮತ್ತು 4 ಪಾದಗಳಿರುವುದು ಅನೇಕರನ್ನು ಅಚ್ಚರಿಗೊಳಿಸಿದೆ. ಬಳ್ಳಾರಿ ತಾಲೂಕಿನ ಹಿರೇಹಡ್ಲಿಗಿ ಗ್ರಾಮದ ಯಂಕನಗೌಡ (27) ಜೊತೆ ಸುಷ್ಮಾ ವಿವಾಹವಾಗಿತ್ತು. ಮೊದಲ ಹೆರಿಗೆಗಾಗಿ ತವರೂರಾದ ಕಂಪ್ಲಿಗೆ ಸುಷ್ಮಾ ಬಂದಿದ್ದರು.

ವಿಚಿತ್ರವಾಗಿ ಜನಿಸಿದರೂ ಮಗು ಆರೋಗ್ಯ ಉತ್ತಮವಾಗಿದೆ. ಮಗುವಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ತಿಳಿಸಿದ್ದಾರೆ. ಮಗವಿನ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ.












Click it and Unblock the Notifications