ಬಳ್ಳಾರಿ : ಎಟಿಎಂನಲ್ಲಿ 500 ರೂ. ನೋಟಿನ ಬದಲು ಕಾಗದ ಬಂತು!
ಬಳ್ಳಾರಿ, ಅಕ್ಟೋಬರ್ 15 : ಎಟಿಎಂನಲ್ಲಿ ಹಣ ಪಡೆಯಲು ಹೋದ ಗ್ರಾಹಕರೊಬ್ಬರು ಹಣದ ಜೊತೆ ಕಾಗದ ಬಂದಿದ್ದು ನೋಡಿ ಗಾಬರಿ ಆಗಿದ್ದಾರೆ. 500 ರೂ. ನೋಟುಗಳ ಜೊತೆ ಪೇಪರ್ ಬಂದಿರುವ ಘಟನೆ ಬಳ್ಳಾರಿ ಎಸ್‌ಬಿಎಂ ಎಟಿಎಂನಲ್ಲಿ ನಡೆದಿದೆ.
ಬಳ್ಳಾರಿ ನಗರದ ಮಾರುತಿ ಕಾಲೋನಿಯ ಎಸ್‌ಬಿಐ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಹಣದ ಬದಲು ಪೇಪರ್ ಬಂದಿದ್ದರಿಂದ ರಮೇಶ ಬಾಬು ಎಂಬ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ. ರಮೇಶ್ ಎಟಿಎಂನಿಂದ 8000 ಸಾವಿರ ರೂ. ಡ್ರಾ ಮಾಡಿದ್ದರು.

ಆದರೆ, 7,500 ರೂ. ನೋಟು ಬಂದರೆ ಉಳಿದ 500 ರೂ. ಬದಲು ಖಾಲಿ ಪೇಪರ್ ಬಂದಿದೆ. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ರಮೇಶ ಅವರು ಎಸ್‌ಬಿಐ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ. ಆದರೆ, ಐನೂರು ರೂ. ಬದಲು ಖಾಲಿ ಬಿಳಿ ಕಾಗದ ಬಂದಿದೆ.
ಈ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಸ್ಥಳಕ್ಕೆ ಅವರು ಬಂದಿಲ್ಲ ಎಂದು ರಮೇಶ ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications