Mahakumbh Mela 2025: ಮಹಾಕುಂಭ ಮೇಳಕ್ಕೆ ಕೆಕೆಆರ್‌ಟಿಸಿ ವಿಶೇಷ ಬಸ್

ಬಳ್ಳಾರಿ, ಫೆಬ್ರವರಿ 02: ಮಹಾಕುಂಭ ಮೇಳ-2025ಕ್ಕೆ ಕರ್ನಾಟಕದಿಂದ ಸಾವಿರಾರು ಭಕ್ತರು ತೆರಳುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಸ್, ರೈಲು, ವಿಮಾನಗಳ ಸೇವೆಯನ್ನು ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ವತಿಯಿಂದ ವಿಶೇಷ ಬಸ್ ಸೌಕರ್ಯವನ್ನು ಒದಗಿಸಲಾಗಿದೆ. ಈ ಬಸ್ ಸೇವೆ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭಮೇಳಕ್ಕೆ ಹೋಗುವ ಭಕ್ತಾಧಿಗಳ ಅನುಕೂಲಕ್ಕಾಗಿ ಸಾಂಧರ್ಬಿಕ ಒಪ್ಪಂದದ ಮೇರೆಗೆ ವಿಶೇಷ ಬಸ್ಸುಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Maha Kumbh Mela 2025 Prayagraj KKRTC Bus Rental Service

ಬಳ್ಳಾರಿ, ಮೋಕಾ, ಕುರುಗೋಡು, ಕಂಪ್ಲಿ, ಎಮ್ಮಿಗನೂರು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ, ತೋರಣಗಲ್ಲು, ಸಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭಮೇಳಕ್ಕೆ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ವಿಳಾಸ: ಈ ವಿಶೇಷ ಬಸ್ ಸೇವೆ ಉಪಯೋಗ ಪಡೆಯುವವರು ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಬಳ್ಳಾರಿ-1ನೇ ಘಟಕ 7760992163, ಬಳ್ಳಾರಿ-2ನೇ ಘಟಕ 7760992164, ಸಿರುಗುಪ್ಪ 7760992165, ಕುರುಗೋಡು 9606483671, ಸಂಡೂರು 7760992309 ಸಂಖ್ಯೆಗೆ ಕರೆ ಮಾಡಬಹುದು.

ಈ ವಿಶೇಷ ಬಸ್ಸುಗಳನ್ನು ಸಾಂಧರ್ಬಿಕ ಒಪ್ಪಂದದ ಮೇಲೆ ಮುಂಗಡವಾಗಿ ಕಾಯ್ದಿರಿಸಿ, ಭಕ್ತಾದಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಮಹಾಕುಂಭ ಮೇಳ-2025 ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ. 45 ದಿನಗಳ ಕಾಲ ಮಹಾಕುಂಭ ಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಗಂಗಾ, ಯಮುನಾ ನದಿಗಳ ಸಂಗಮ ಸ್ಥಳದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮಹಾಕುಂಭ ಮೇಳಕ್ಕೆ ಜನವರಿ 13ರಂದು ಚಾಲನೆ ಸಿಕ್ಕಿದ್ದು, ಫೆಬ್ರವರಿ 26ರ ತನಕ ನಡೆಯಲಿದೆ.

ಮಹಾಕುಂಭ ಮೇಳಕ್ಕೆ ಸೈಲ್ ವಿಶೇಷ ಕೊಡುಗೆ: ಮಹಾಕುಂಭ ಮೇಳ-2025ಕ್ಕೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಸೈಲ್) ವಿಶೇಷ ಕೊಡುಗೆಯನ್ನು ನೀಡಿದೆ. ಸುಮಾರು 45,000 ಟನ್‌ಗಳಷ್ಟು ಉಕ್ಕನ್ನು ಪೂರೈಕೆ ಮಾಡಿದೆ. ಇದರಲ್ಲಿ ಚೆಕ್ಕರ್ ಪ್ಲೇಟ್‌, ಹಾಟ್ ಸ್ಟ್ರಿಪ್ ಮಿಲ್ ಪ್ಲೇಟ್‌, ಸೌಮ್ಯ ಸ್ಟೀಲ್ ಪ್ಲೇಟ್‌ ಮತ್ತು ಜೋಯಿಸ್ಟ್‌ ಒಳಗೊಂಡಿದೆ. ಈ ಹಿಂದೆಯೂ ಸಹ ಮಹಾಕುಂಭ ಮೇಳದ ಸಮಯದಲ್ಲಿ ಸೈಲ್ ಉಕ್ಕು ಸರಬರಾಜು ಮಾಡಿತ್ತು.

ಮಹಾಕುಂಭ ಮೇಳದ ಸುಗಮ ಮತ್ತು ಯಶಸ್ವಿ ನಿರ್ವಹಣೆಗೆ ಅಗತ್ಯವಾದ ವಿವಿಧ ತಾತ್ಕಾಲಿಕ ರಚನೆಗಳ ನಿರ್ಮಾಣವನ್ನು ಬೆಂಬಲಿಸುವಲ್ಲಿ ಸೈಲ್ ಉಕ್ಕು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಪಾಂಟೂನ್ ಸೇತುವೆಗಳು, ಪ್ಯಾಸೇಜ್, ತಾತ್ಕಾಲಿಕ ಉಕ್ಕಿನ ಸೇತುವೆಗಳು, ಸಬ್‌ಸ್ಟೇಷನ್‌ಗಳು ಮತ್ತು ಫ್ಲೈಓವರ್‌ಗಳು ಸೇರಿವೆ. ಈ ಉಕ್ಕಿನ ಪೂರೈಕೆ ಲೋಕೋಪಯೋಗಿ ಇಲಾಖೆ, ರಾಜ್ಯ ಸೇತುವೆಗಳ ನಿಗಮ, ವಿದ್ಯುತ್ ಮಂಡಳಿಗಳಿಗೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+